ಮೇ 4 ರಿಂದ ಜೂನ್ 10 ರವರೆಗೆ ಸಿಬಿಎಸ್ಇ ಬೋರ್ಡ್ ಪರೀಕ್ಷೆ, ಜುಲ 15 ರಂದು ಫಲಿತಾಂಶ ಪ್ರಕಟ : ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ - Karavali Times ಮೇ 4 ರಿಂದ ಜೂನ್ 10 ರವರೆಗೆ ಸಿಬಿಎಸ್ಇ ಬೋರ್ಡ್ ಪರೀಕ್ಷೆ, ಜುಲ 15 ರಂದು ಫಲಿತಾಂಶ ಪ್ರಕಟ : ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ - Karavali Times

728x90

31 December 2020

ಮೇ 4 ರಿಂದ ಜೂನ್ 10 ರವರೆಗೆ ಸಿಬಿಎಸ್ಇ ಬೋರ್ಡ್ ಪರೀಕ್ಷೆ, ಜುಲ 15 ರಂದು ಫಲಿತಾಂಶ ಪ್ರಕಟ : ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ನವದೆಹಲಿ, ಡಿ. 31, 2020 (ಕರಾವಳಿ ಟೈಮ್ಸ್) : ಸಿಬಿಎಸ್‌ಇ ಬೋರ್ಡ್‌ನ 10 ಮತ್ತು 12ನೇ ತರಗತಿ ಪರೀಕ್ಷೆಗಳು 2021ರ ಮೇ 4 ರಿಂದ ಆರಂಭವಾಗಿ, ಜೂನ್‌ 10ರವರೆಗೆ ನಡೆಯಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ತಿಳಿಸಿದ್ದಾರೆ. 

ಗುರುವಾರ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಜೂನ್‌ 10 ರವರೆಗೂ ಪರೀಕ್ಷೆ ನಡೆಯಲಿದ್ದು, ಫಲಿತಾಂಶ ಜುಲೈ 15 ರಂದು ಪ್ರಕಟವಾಗಲಿದೆ. ಶಾಲೆಗಳು 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಯೋಗ, ಪ್ರಾಜೆಕ್ಟ್‌ ಹಾಗೂ ಇಂಟರ್‌ನಲ್‌ ಅಸೆಸ್ಮೆಂಟ್‌ಗಳನ್ನು ಮಾರ್ಚ್‌ 1ರಿಂದ ನಡೆಸಬಹುದಾಗಿದೆ.  ಇದಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಸಿಬಿಎಸ್‌ಇ ಶೀಘ್ರದಲ್ಲಿಯೇ ಹೊರಡಿಸಲಿದೆ ಎಂದು ಹೇಳಿದರು.

ದೇಶದಲ್ಲಿ ಕೊರೊನಾ ವೈರಸ್ ಸ್ಫೋಟವಾದ ಹಿನ್ನೆಲೆಯಲ್ಲಿ, ಶಿಕ್ಷಣ ಸಚಿವಾಲಯ ಈ ಹಿಂದೆ ಸಿಬಿಎಸ್ ಇ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿತ್ತು. ಸಾಮಾನ್ಯವಾಗಿ ಜನವರಿಯಲ್ಲಿ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತವೆ ಮತ್ತು ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಸಿದ್ಧಾಂತ ಪರೀಕ್ಷೆಗಳು  ಆರಂಭವಾಗಿ ಮಾರ್ಚ್ ನಲ್ಲಿ ಮುಕ್ತಾಯವಾಗುತ್ತವೆ.

ಸಿಬಿಎಸ್ ಇ 10 ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಆಫ್ ಲೈನ್ ನಲ್ಲಿ ನಡೆಸಲಾಗುತ್ತದೆ. ದೇಶದಲ್ಲಿ ಕೋವಿಡ್‌-19 ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಪಠ್ಯ ಕ್ರಮವನ್ನ ಕೂಡಾ ಕಡಿಮೆ ಮಾಡಲಾಗಿದೆ. ವೈರಸ್ ಹರಡುವಿಕೆಯನ್ನ ಕಡಿಮೆ ಮಾಡಲು ಮಾರ್ಚ್ ನಿಂದ ಭಾರತದಲ್ಲಿ  ಶಾಲೆಗಳನ್ನು ಮುಚ್ಚಲಾಗಿದೆ.

ಇನ್ನು ಈಗಾಗಲೇ ಕೆಲ ಶಾಲೆಗಳು ಸಿಬಿಎಸ್ಇ ಬೋರ್ಡ್ ಪೂರ್ವಭಾವಿ ಸಿದ್ಧತಾ ಪರೀಕ್ಷೆಗಳನ್ನು ಆನ್ ಲೈನ್ ನಲ್ಲಿ ನಡೆಸಿದ್ದು, ಇದರಿಂದ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಗೆ ಸಿದ್ಧತೆ ನಡೆಸಲು ನೆರವಾಗಿತ್ತು.  • Blogger Comments
  • Facebook Comments

0 comments:

Post a Comment

Item Reviewed: ಮೇ 4 ರಿಂದ ಜೂನ್ 10 ರವರೆಗೆ ಸಿಬಿಎಸ್ಇ ಬೋರ್ಡ್ ಪರೀಕ್ಷೆ, ಜುಲ 15 ರಂದು ಫಲಿತಾಂಶ ಪ್ರಕಟ : ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ Rating: 5 Reviewed By: karavali Times
Scroll to Top