ಪಿ.ಎಫ್.ಐ. ರಾಷ್ಟ್ರೀಯ ಸದಸ್ಯ ಕೆ.ಎಂ. ಶರೀಫ್ ನಿಧನ : ಹಲವರ ಅಂತಿಮ ದರ್ಶನ - Karavali Times ಪಿ.ಎಫ್.ಐ. ರಾಷ್ಟ್ರೀಯ ಸದಸ್ಯ ಕೆ.ಎಂ. ಶರೀಫ್ ನಿಧನ : ಹಲವರ ಅಂತಿಮ ದರ್ಶನ - Karavali Times

728x90

22 December 2020

ಪಿ.ಎಫ್.ಐ. ರಾಷ್ಟ್ರೀಯ ಸದಸ್ಯ ಕೆ.ಎಂ. ಶರೀಫ್ ನಿಧನ : ಹಲವರ ಅಂತಿಮ ದರ್ಶನ

 

ಮಿತ್ತಬೈಲು ದಫನ‌ ಭೂಮಿಯಲ್ಲಿ ದಫನ ಕಾರ್ಯ


ಬಂಟ್ವಾಳ, ಡಿ. 22, 2020 (ಕರಾವಳಿ ಟೈಮ್ಸ್) : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ) ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ,  ಮಾಜಿ ರಾಷ್ಟ್ರಾಧ್ಯಕ್ಷ ಕೆ.ಎಂ. ಶರೀಫ್ (56) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ರಾತ್ರಿ ವೇಳೆಗೆ ಮಿತ್ತಬೈಲ್ ಜುಮಾ‌ ಮಸೀದಿ ದಫನ ಭೂಮಿಯಲ್ಲಿ ದಫನ ಕಾರ್ಯ ನೆರವೇರಿತು.

ಅಪರಾಹ್ನ 3 ಗಂಟೆಗೆ ಮೃತದೇಹವನ್ನು ಪರ್ಲಿಯಾದ ಮನೆಗೆ ತಂದು ಕುಟುಂಬಸ್ಥರು ಅಂತಿಮ ದರ್ಶನ ಪಡೆದ ಬಳಿಕ ಅಂತಿಮ ಸ್ನಾನ ಮಾಡಿಸಿ ಸಂಜೆ 5:30ರ ವೇಳೆಗೆ ಮಿತ್ತಬೈಲ್ ಜುಮಾ ಮಸೀದಿಯ ಮುಂಭಾಗ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಸಹಸ್ರ ಸಂಖ್ಯೆಯಲ್ಲಿ ಸಾರ್ವಜನಿಕರು ಮೃತರ ಅಂತಿಮ ದರ್ಶನ ಪಡೆದರು. 

ಮಾಜಿ ಸಚಿವ ಬಿ ರಮಾನಾಥ ರೈ,‌ ಮಂಗಳೂರು ಶಾಸಕ ಯು.ಟಿ. ಖಾದರ್, ಮಾಜಿ ಶಾಸಕ ಮೊಯ್ದಿನ್ ಬಾವ, ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ,  ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ‌ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ‌ ಕುಂದರ್, ಪಿ.ಎಫ್.ಐ. ರಾಷ್ಟ್ರಾಧ್ಯಕ್ಷ ಒ.ಎಮ್.ಎ. ಸಲಾಂ‌‌ ಸಹಿತ ವಿವಿಧ ರಾಜಕೀಯ, ಧಾರ್ಮಿಕ, ಸಾಮಾಜಿಕ ಗಣ್ಯರು‌ ಮೃತರ ಅಂತಿಮ ದರ್ಶನ ಪಡೆದರು.  • Blogger Comments
  • Facebook Comments

0 comments:

Post a Comment

Item Reviewed: ಪಿ.ಎಫ್.ಐ. ರಾಷ್ಟ್ರೀಯ ಸದಸ್ಯ ಕೆ.ಎಂ. ಶರೀಫ್ ನಿಧನ : ಹಲವರ ಅಂತಿಮ ದರ್ಶನ Rating: 5 Reviewed By: karavali Times
Scroll to Top