ಬಿ.ಸಿ.ರೋಡು ವೇಶ್ಯಾವೇಟಿಕೆ ಕೇಂದ್ರಕ್ಕೆ ದಾಳಿ ಪ್ರಕರಣ : ತಲೆಮರೆಸಿಕೊಂಡ ಇಬ್ಬರಿಗಾಗಿ ಪೊಲೀಸ್ ಶೋಧ - Karavali Times ಬಿ.ಸಿ.ರೋಡು ವೇಶ್ಯಾವೇಟಿಕೆ ಕೇಂದ್ರಕ್ಕೆ ದಾಳಿ ಪ್ರಕರಣ : ತಲೆಮರೆಸಿಕೊಂಡ ಇಬ್ಬರಿಗಾಗಿ ಪೊಲೀಸ್ ಶೋಧ - Karavali Times

728x90

18 January 2021

ಬಿ.ಸಿ.ರೋಡು ವೇಶ್ಯಾವೇಟಿಕೆ ಕೇಂದ್ರಕ್ಕೆ ದಾಳಿ ಪ್ರಕರಣ : ತಲೆಮರೆಸಿಕೊಂಡ ಇಬ್ಬರಿಗಾಗಿ ಪೊಲೀಸ್ ಶೋಧ

ಬಂಟ್ವಾಳ, ಜ. 19, 2021 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣಾ ಸಮೀಪದ ಬಿ ಸಿ ರೋಡು ಭಾರತ್ ಕಾಂಪ್ಲೆಕ್ಸ್ ತಳ ಭಾಗದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಕೇಂದ್ರಕ್ಕೆ ಭಾನುವಾರ ದಾಳಿ ನಡೆಸಿದ್ದ ಪೊಲೀಸರು ಐದು ಮಂದಿ ಯುವತಿಯರನ್ನು ರಕ್ಷಿಸಿ ಆರೋಪಿಗಳಾದ ಪುತ್ತೂರು ತಾಲೂಕಿನ ನೆಕ್ಕಿಲಾಡಿ ನಿವಾಸಿ ಶರಣ್ (28), ಚಿಕ್ಕಮುಡ್ನೂರು ನಿವಾಸಿ ಕಿರಣ್ (25) ಹಾಗೂ ಬಂಟ್ವಾಳ ತಾಲೂಕು ಕರಿಯಂಗಳ ನಿವಾಸಿ ಭರತ್ (28) ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನಿಬ್ಬರು ಆರೋಪಿಗಳಾದ ಇಕ್ಬಾಲ್ ನಂದಾವರ ಹಾಗೂ ಕರೀಂ ಬೋಳಂತೂರು ಎಂಬವರು ವಿರುದ್ದವೂ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಈ ಇಬ್ಬರು ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಟ್ವಾಳ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್ ಹಾಗೂ ಬಂಟ್ವಾಳ ನಗರ ಪೆÇಲೀಸ್ ಠಾಣಾ ಎಸ್ಸೈ ಅವಿನಾಶ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, ಜಾಲದ ಸಕ್ರಿಯತೆ ಹಾಗೂ ವ್ಯಾಪಕತೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು ವೇಶ್ಯಾವೇಟಿಕೆ ಕೇಂದ್ರಕ್ಕೆ ದಾಳಿ ಪ್ರಕರಣ : ತಲೆಮರೆಸಿಕೊಂಡ ಇಬ್ಬರಿಗಾಗಿ ಪೊಲೀಸ್ ಶೋಧ Rating: 5 Reviewed By: karavali Times
Scroll to Top