ವಿದ್ಯುತ್ ಪೂರೈಕೆಯಲ್ಲಿ ದಿಢೀರ್ ಸಮಸ್ಯೆ : ಪಾಕಿಸ್ತಾನದ ಪ್ರಮುಖ ನಗರಗಳು ಕತ್ತಲಲ್ಲಿ - Karavali Times ವಿದ್ಯುತ್ ಪೂರೈಕೆಯಲ್ಲಿ ದಿಢೀರ್ ಸಮಸ್ಯೆ : ಪಾಕಿಸ್ತಾನದ ಪ್ರಮುಖ ನಗರಗಳು ಕತ್ತಲಲ್ಲಿ - Karavali Times

728x90

9 January 2021

ವಿದ್ಯುತ್ ಪೂರೈಕೆಯಲ್ಲಿ ದಿಢೀರ್ ಸಮಸ್ಯೆ : ಪಾಕಿಸ್ತಾನದ ಪ್ರಮುಖ ನಗರಗಳು ಕತ್ತಲಲ್ಲಿ

ಇಸ್ಲಾಮಾಬಾದ್‌, ಜ. 10, 2021 (ಕರಾವಳಿ ಟೈಮ್ಸ್) : ಪಾಕಿಸ್ತಾನ ದೇಶಾದ್ಯಂತ ಶನಿವಾರ ರಾತ್ರಿ ಸಂಭವಿಸಿದ ವಿದ್ಯುತ್‌ ವ್ಯತ್ಯಯ ಕಾರಣದಿಂದ ಇಡೀ ದೇಶವೇ ಕತ್ತಲಲ್ಲಿ ಮುಳುಗುವಂತಾಗಿದೆ. ವಿದ್ಯುತ್ ಪೂರೈಕೆಯಲ್ಲಿ ದಿಢೀರ್‌ ಸಮಸ್ಯೆ ಉಂಟಾಗಿ ಈ ಅವಸ್ಥೆ ಸೃಷ್ಟಿಯಾಗಿದೆ. ಪರಿಣಾಮ ದೇಶದ ಪ್ರಮುಖ ನಗರಗಳಾದ ಕರಾಚಿ, ರಾವಲ್ಪಿಂಡಿ, ಲಾಹೋರ್‌, ಇಸ್ಲಾಮಾಬಾದ್‌, ಮುಲ್ತಾನ್‌ ಮತ್ತು ಇತರ ಪ್ರಮುಖ ನಗರಗಳ ನಾಗರಿಕರು ವಿದ್ಯುತ್‌ ಪೂರೈಕೆ ಇಲ್ಲದೇ ಸಮಸ್ಯೆ ಅನುಭವಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಯಿಸಿರುವ ಇಸ್ಲಾಮಾಬಾದ್‌ ಉಪ ಆಯುಕ್ತ ಹಮ್ಜಾ ಶಫ್ಕತ್‌, 'ರಾತ್ರಿ 11.41 ಕ್ಕೆ ಸಿಂಧ್ ಪ್ರಾಂತ್ಯದ ಗುಡ್ಡು ವಿದ್ಯುತ್ ಸ್ಥಾವರದಲ್ಲಿ ದೋಷ ಕಂಡುಬಂದಿದೆ. ರಾಷ್ಟ್ರೀಯ ವಿದ್ಯುತ್‌ ಪ್ರಸರಣಾ ಕಂಪನಿಯ (ಎನ್‌ಟಿಡಿಸಿ) ವಿದ್ಯುತ್‌ ಮಾರ್ಗಗಳು ಟ್ರಿಪ್‌ ಆಗಿವೆ. ಹೀಗಾಗಿ ಪೂರೈಕೆಯಲ್ಲಿ ಸಮಸ್ಯೆಯಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಕೆಲ ಸಮಯ ಬೇಕಾಗಬಹುದು ಎಂದಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಪಾಕಿಸ್ತಾನ್ ಇಂಧನ ಸಚಿವ ಒಮರ್‌ ಅಯೂಬ್‌ ರಾಷ್ಟ್ರೀಯ ವಿದ್ಯುತ್‌ ಪ್ರಸರಣಾ ವ್ಯವಸ್ಥೆಯ ಹಠಾತ್‌ ಸ್ಥಗಿತದ ಹಿಂದಿನ ಕಾರಣಗಳನ್ನು ಪತ್ತೆ ಮಾಡಲು ಎನ್‌ಟಿಡಿಸಿ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸರಣೆಯಲ್ಲಿನ ಆವರ್ತನ ಸಂಖ್ಯೆಯು 50 ರಿಂದ ದಿಢೀರ್‌ ಸೊನ್ನೆಗೆ ಕುಸಿದಿದೆ. ಹೀಗಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ವಿದ್ಯುತ್ ಕುಸಿತಕ್ಕೆ ಕಾರಣವೇನು ಎಂಬುದನ್ನು ನಾವು ಪತ್ತೆ ಮಾಡುತ್ತಿದ್ದೇವೆ ಎಂದಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ವಿದ್ಯುತ್ ಪೂರೈಕೆಯಲ್ಲಿ ದಿಢೀರ್ ಸಮಸ್ಯೆ : ಪಾಕಿಸ್ತಾನದ ಪ್ರಮುಖ ನಗರಗಳು ಕತ್ತಲಲ್ಲಿ Rating: 5 Reviewed By: karavali Times
Scroll to Top