ಬಿಗಡಾಯಿಸಿದ ರೂಪಾಂತರಿ ಕೊರೋನಾ ಅವಾಂತರ : ಬ್ರಿಟನ್ ಮತ್ತೆ ಸಂಪೂರ್ಣ ಲಾಕ್‍ಡೌನ್ - Karavali Times ಬಿಗಡಾಯಿಸಿದ ರೂಪಾಂತರಿ ಕೊರೋನಾ ಅವಾಂತರ : ಬ್ರಿಟನ್ ಮತ್ತೆ ಸಂಪೂರ್ಣ ಲಾಕ್‍ಡೌನ್ - Karavali Times

728x90

5 January 2021

ಬಿಗಡಾಯಿಸಿದ ರೂಪಾಂತರಿ ಕೊರೋನಾ ಅವಾಂತರ : ಬ್ರಿಟನ್ ಮತ್ತೆ ಸಂಪೂರ್ಣ ಲಾಕ್‍ಡೌನ್ಲಂಡನ್, ಜ 05, 2021 (ಕರಾವಳಿ ಟೈಮ್ಸ್) : ರೂಪಾಂತರಗೊಂಡ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸರ್ ಇಂಗ್ಲೆಂಡಿನಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್‍ಡೌನ್ ಘೋಷಿಸಿ ಆದೇಶ ಹೊರಡಿಸಿದ್ದಾರೆ. 

ಸೋಂಕು ನಿಯಂತ್ರಣದ ಉದ್ದೇಶದಿಂದ ಫೆಬ್ರವರಿ ಮಧ್ಯದವರೆಗೂ ಲಾಕ್‍ಡೌನ್ ಮುಂದುವರೆಸುವ ಬಗ್ಗೆ ಚಿಂತಿಸಲಾಗಿದೆ ಎನ್ನಲಾಗಿದೆ. ಇಂಗ್ಲೆಂಡಿನಲ್ಲಿ ಸುಮಾರು 56 ಮಿಲಿಯನ್ ಜನ ಕೂಡಾ ಲಾಕ್‍ಡೌನ್ ಗೆ ಒಳಪಡಲಿದ್ದಾರೆ. ಫೆಬ್ರವರಿ ಮಧ್ಯದವರೆಗೂ ಲಾಕ್ಡೌನ್ ಜಾರಿಯಲ್ಲಿರಲಿದ್ದು, ಬುಧವಾರದಿಂದ ಎಲ್ಲಾ ಶಾಲಾ-ಕಾಲೇಜುಗಳು ಬಂದ್ ಆಗಲಿವೆ. ಇಂಗ್ಲೆಂಡಿನಲ್ಲಿ ಕೊರೋನಾ ಮರಣ ದರ ಅತ್ಯಧಿಕವಾಗಿದ್ದು, ಈಗಾಗಲೇ ಮುಕ್ಕಾಲು ಭಾಗದಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆಂದು ಹೇಳಲಾಗುತ್ತಿದೆ. ಆದ್ದರಿಂದ ಮೊದಲ ಹಂತದ ಲಾಕ್‍ಡೌನ್‍ಗಿಂತಲೂ ಕಠಿಣ ಮಾರ್ಗóಸೂಚಿಗಳನ್ನು ಈ ಬಾರಿ ಜಾರಿಗೆ ತರಲಾಗುತ್ತಿದ್ದು. ಜನ ಸಹಕರಿಸುವಂತೆ ಪ್ರಧಾನಿ ಬೋರಿಸ್ ಮನವಿ ಮಾಡಿಕೊಂಡಿದ್ದಾರೆ. 

ಕೊರೋನಾ ಸೋಂಕಿನಿಂದಾಗಿ ಸುಮಾರು 27 ಸಾವಿರ ಜನರು ಆಸ್ಪತ್ರೆಯಲ್ಲಿದ್ದಾರೆ. ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ಕಾಣಿಸಿಕೊಂಡ ಮೊದಲನೇ ಅಲೆಯಿಂದಾಗಿ ಶೇ. 40 ಕ್ಕೂ ಹೆಚ್ಚು ಜನರು ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಕಳೆದ ಮಂಗಳವಾರ 80 ಸಾವಿರಕ್ಕು ಹೆಚ್ಚು ಜನರಲ್ಲಿ ಕೇವಲ 24 ಗಂಟೆಗಳ ಅಂತರದಲ್ಲಿ ಸೋಂಕು ಕಾಣಿಸಿಕೊಂಡಿದೆ. ಈಗಾಗಲೇ ಅನೇಕ ರಾಷ್ಟ್ರಗಳು ಅತಿ ಕಠಿಣವಾದ ನಿರ್ಧಾರಗಳನ್ನು ಜಾರಿ ಮಾಡಿದೆ. ರೂಪಾಂತರಿ ಕೊರೋನಾ ವೈರಸ್ ನಿಯಂತ್ರಣಕ್ಕೆ ತರಲು ಲಸಿಕೆ ಇದ್ದರೂ ಕೂಡ ಇಂತಹದ್ದೇ ನಿರ್ಧಾರವನ್ನು ಅನುಸರಿಸಬೇಕಾಗುತ್ತದೆ. ನಾಳೆಯಿಂದಲೇ ಇಂಗ್ಲೆಂಡ್ ಮತ್ತೊಮ್ಮೆ ಸಂಪೂರ್ಣ ಸ್ಥಬ್ಧವಾಗಲಿದೆ ಎಂದವರು ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಬಿಗಡಾಯಿಸಿದ ರೂಪಾಂತರಿ ಕೊರೋನಾ ಅವಾಂತರ : ಬ್ರಿಟನ್ ಮತ್ತೆ ಸಂಪೂರ್ಣ ಲಾಕ್‍ಡೌನ್ Rating: 5 Reviewed By: karavali Times
Scroll to Top