ಕುತ್ತಾರ್ : ಬೆಲೆ ಏರಿಕೆ ಖಂಡಿಸಿ ಡಿವೈಎಫ್‍ಐ, ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ - Karavali Times ಕುತ್ತಾರ್ : ಬೆಲೆ ಏರಿಕೆ ಖಂಡಿಸಿ ಡಿವೈಎಫ್‍ಐ, ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ - Karavali Times

728x90

4 February 2021

ಕುತ್ತಾರ್ : ಬೆಲೆ ಏರಿಕೆ ಖಂಡಿಸಿ ಡಿವೈಎಫ್‍ಐ, ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ

ಉಳ್ಳಾಲ, ಫೆ. 04, 2021 (ಕರಾವಳಿ ಟೈಮ್ಸ್) : ಕೇಂದ್ರ ಸರಕಾರ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಬೆಲೆಯೇರಿಕೆ ಮಾಡಿರುವುದನ್ನು ಖಂಡಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‍ಐ) ಉಳ್ಳಾಲ ವಲಯ ಸಮಿತಿ ಹಾಗೂ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ನೇತೃತ್ವದಲ್ಲಿ ಗುರುವಾರ ಕುತ್ತಾರ್ ಜಂಕ್ಷನ್ನಿನಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದ್ದರೂ ಮೋದಿ ನೇತೃತ್ವದ ಕೇಂದ್ರ ಸರಕಾರ ಬೆಲೆಯನ್ನು ಏರಿಸುತ್ತಲೇ ಇದೆ. ಭಾರತದ ಮೂಲಕ ತೈಲ ತರಿಸಿಕೊಳ್ಳುತ್ತಿರುವ ಶ್ರೀಲಂಕಾ, ನೇಪಾಳದಲ್ಲಿ ಅಲ್ಲಿನ ಸರಕಾರ ಕಡಿಮೆ ಬೆಲೆಗೆ ಗ್ರಾಹಕರಿಗೆ ತೈಲ ಪೂರೈಸುತ್ತಿದೆ. ಆದರೆ ಇಲ್ಲಿ ಸರಕಾರ ತೈಲ ಬೆಲೆ ಏರಿಸಿ ಖಾಸಗಿ ಕಂಪೆನಿಗಳಿಗೆ ಲಾಭ ಮಾಡಿಕೊಡುತ್ತಿದೆ ಎಂದು ಹೇಳಿದರು. ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆ.ಸಿ.ರೋಡ್, ಜನವಾದಿ ಮಹಿಳಾ ಸಂಘಟನೆಯ ಸಂಚಾಲಕಿ ವಿಲಾಸಿನಿ ತೊಕ್ಕೊಟ್ಟು ಅವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ಡಿವೈಎಫ್‍ಐ ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ, ಪ್ರಮುಖರಾದ ಜೀವನ್ ರಾಜ್ ಕುತ್ತಾರ್, ರಝಾಕ್ ಮೊಂಟೆಪದವು, ರಝಾಕ್ ಮುಡಿಪು, ನಿತಿನ್ ಕುತ್ತಾರ್, ಪದ್ಮಾವತಿ ಶೆಟ್ಟಿ, ಜನಾರ್ದನ್ ಕುತ್ತಾರ್, ಚಂದ್ರಾಹಾಸ ಪಿಲಾರ್, ಸಂಜೀವ ಪಿಲಾರ್, ಮಹಾಬಲ ದೆಪ್ಪಲಿಮಾರ್, ಇಬ್ರಾಹಿಂ ಮದಕ, ಸುನಿಲ್ ತೇವುಲ, ವಿಕಾಸ್ ಕುತ್ತಾರ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಕುತ್ತಾರ್ : ಬೆಲೆ ಏರಿಕೆ ಖಂಡಿಸಿ ಡಿವೈಎಫ್‍ಐ, ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ Rating: 5 Reviewed By: karavali Times
Scroll to Top