ಬಂಟ್ವಾಳ ಸರಕಾರಿ ಕಾಲೇಜಿನಲ್ಲಿ ತುಳು ಜನಪದ ನೃತ್ಯ ತರಬೇತಿ ಕಮ್ಮಟ ಉದ್ಘಾಟನೆ - Karavali Times ಬಂಟ್ವಾಳ ಸರಕಾರಿ ಕಾಲೇಜಿನಲ್ಲಿ ತುಳು ಜನಪದ ನೃತ್ಯ ತರಬೇತಿ ಕಮ್ಮಟ ಉದ್ಘಾಟನೆ - Karavali Times

728x90

22 February 2021

ಬಂಟ್ವಾಳ ಸರಕಾರಿ ಕಾಲೇಜಿನಲ್ಲಿ ತುಳು ಜನಪದ ನೃತ್ಯ ತರಬೇತಿ ಕಮ್ಮಟ ಉದ್ಘಾಟನೆ

ಬಂಟ್ವಾಳ, ಫೆ. 23, 2021 (ಕರಾವಳಿ ಟೈಮ್ಸ್) : ಮಾತೃ ಭಾಷೆ ಅಥವಾ ಮನೆ ಭಾಷೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ತುಳುನಾಡಿನಲ್ಲಿ ತುಳು ಭಾಷೆಯನ್ನು ಕಡೆಗಣಿಸಿದರೆ ತಾಯಿಯನ್ನು ಕಡೆಗಣಿಸಿದಂತೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಹೇಳಿದರು. ಬಂಟ್ವಾಳ ಕಾಮಾಜೆ ಸರಕಾರಿ ಕಾಲೇಜಿನಲ್ಲಿ ನಡೆದ ತುಳು ಜನಪದ ನೃತ್ಯ ತರಬೇತಿ ಕಮ್ಮಟ ಉದ್ಘಾಟಿಸಿ ಮಾತನಾಡಿದ ಅವರು ಅತ್ಯಂತ ಪ್ರಾಚೀನವಾದ, ಪ್ರತ್ಯೇಕ ಕಾಲಗಣನೆ ವ್ಯವಸ್ಥೆಯನ್ನು ಹೊಂದಿದ ಹಾಗೂ ತುಳುನಾಡಿನಲ್ಲಿ ಸಂಸ್ಕøತ ಭಾಷೆಗೂ ಲಿಪಿಯನ್ನು ಒದಗಿಸಿದ ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಬೇಕು ಹಾಗೂ ರಾಜ್ಯ ಭಾಷೆಯಾಗಿ ಮನ್ನಣೆ ಪಡೆಯಬೇಕು ಎಂದವರು ಆಶಿಸಿದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ ಭಟ್ ಮಾತನಾಡಿ, ಸ್ಥಳೀಯ ಬಾಷೆಗಳನ್ನು ಉಳಿಸಿ ಬೆಳೆಸಿದರೆ ಸಂಸ್ಕತಿ ಶ್ರೀಮಂತವಾಗುತ್ತದೆ ಹಾಗೂ ತುಳು ಜನಪದ ನೃತ್ಯದಂತಹ ಕಲಾ ಪ್ರಕಾರಗಳೂ ಉಳಿದು ಬೆಳೆಯುತ್ತವೆ ಎಂದರು. ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ. ಸತೀಶ್ ಗಟ್ಟಿ ಮಾತನಾಡಿ, ಪ್ರಾಚೀನ ಗ್ರಂಥಗಳಲ್ಲಿ ಹಾಗೂ ಪ್ರವಾಸ ಕಥನಗಳಲ್ಲಿ ತುಳುನಾಡು ಎಂಬ ಉಲ್ಲೇಖ ಕಾಣಸಿಗುತ್ತದೆ ಎಂದರು. ನೃತ್ಯ ತರಬೇತುದಾರರಾದ ಮುಕುಂದರಾಜ್ ಹಾಗೂ ಮಿಥುನ್ ಉಪಸ್ಥಿತರಿದ್ದರು. ಕಾಲೇಜು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಪ್ರೊ. ನಂದಕಿಶೋರ್ ಎಸ್ ಸ್ವಾಗತಿಸಿ, ಸಾಂಸ್ಕøತಿಕ ಸಂಘದ ಸಂಚಾಲಕಿ ಪ್ರೊ. ಶಶಿಕಲಾ ಕೆ ವಂದಿಸಿದರು. ಮಮಿತಾ ಕಾರ್ಯಕ್ರಮ ನಿರೂಪಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಸರಕಾರಿ ಕಾಲೇಜಿನಲ್ಲಿ ತುಳು ಜನಪದ ನೃತ್ಯ ತರಬೇತಿ ಕಮ್ಮಟ ಉದ್ಘಾಟನೆ Rating: 5 Reviewed By: karavali Times
Scroll to Top