ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಲುಕ್ಮಾನ್ ಬಿ.ಸಿ.ರೋಡು ಆಯ್ಕೆ - Karavali Times ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಲುಕ್ಮಾನ್ ಬಿ.ಸಿ.ರೋಡು ಆಯ್ಕೆ - Karavali Times

728x90

4 February 2021

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಲುಕ್ಮಾನ್ ಬಿ.ಸಿ.ರೋಡು ಆಯ್ಕೆ

ಮಂಗಳೂರು, ಫೆ. 04, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಕಳೆದ ಜನವರಿಯಲ್ಲಿ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಬಂಟ್ವಾಳ ಪುರಸಭಾ ಸದಸ್ಯ, ಯುವ ಕಾಂಗ್ರೆಸ್ ಜಿಲ್ಲಾ ನಿಕಟಪೂರ್ವ ಉಪಾಧ್ಯಕ್ಷರಾಗಿದ್ದ ಲುಕ್ಮಾನ್ ಬಿ.ಸಿ.ರೋಡು ಅವರು ಚುನಾಯಿತರಾಗಿದ್ದಾರೆ. ಅಧ್ಯಕ್ಷ ಹುದ್ದೆಯ ಪ್ರಬಲ ಆಕಾಂಕ್ಷಿಗಳಾಗಿದ್ದ ಲುಕ್ಮಾನ್ ಹಾಗೂ ಗಿರೀಶ್ ಆಳ್ವ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿತ್ತು. ಇದೀಗ ಲುಕ್ಮಾನ್ 5573 ಮತಗಳನ್ನು ಪಡೆದು ಸುಮಾರು 1404 ಮತಗಳ ಅಂತರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಗಿರೀಶ್ ಆಳ್ವ ಅವರು 4169 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಗೊಂಡರೆ, ಮತ್ತೋರ್ವ ಸ್ಪರ್ಧಿ ಮುಹಮ್ಮದ್ ಶುಹೈಬ್ ಅವರು ಕೇವಲ 117 ಮತಗಳನ್ನು ಪಡೆದು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತೃಪ್ತಿಪಟ್ಟುಕೊಂಡಿದ್ದಾರೆ. ಜಿಲ್ಲೆಯ ಒಟ್ಟು 14,065 ಮಂದಿ ಯುವ ಕಾಂಗ್ರೆಸ್ ಮತದಾರರ ಪೈಕಿ 688 ಮಂದಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. 3,518 ಮಂದಿಯ ಮತ ತಿರಸ್ಕøತಗೊಂಡಿದೆ ಎಂದು ಯುವ ಕಾಂಗ್ರೆಸ್ ವೆಬ್‍ಸೈಟ್‍ನಲ್ಲಿ ನಮೂದಾಗಿರುವ ಅಂಕಿ ಅಂಶದಿಂದ ತಿಳಿದು ಬಂದಿದೆ. ಈ ಬಾರಿ ಕೊರೋನಾ ಕಾರಣದಿಂದಾಗಿ ಬ್ಯಾಲೆಟ್ ಪೇಪರ್ ಮತದಾನದ ಬದಲಿಗೆ ಮೊಬೈಲ್ ಆಪ್ ಮೂಲಕ ಮತದಾನ ನಡೆಸಲಾಗಿತ್ತು. ಜನವರಿ 10 ರಿಂದ 12ರವರೆಗೆ ರಾಜ್ಯ, ಜಿಲ್ಲೆ ಹಾಗೂ ಬ್ಲಾಕ್ ಯುವ ಕಾಂಗ್ರೆಸ್ ಪದಾಧಿಕಾರಿ ಹುದ್ದೆಗೆ ಚುನಾವಣೆ ನಡೆದಿತ್ತು.
  • Blogger Comments
  • Facebook Comments

0 comments:

Post a Comment

Item Reviewed: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಲುಕ್ಮಾನ್ ಬಿ.ಸಿ.ರೋಡು ಆಯ್ಕೆ Rating: 5 Reviewed By: karavali Times
Scroll to Top