ವಿಟ್ಲ : ಬೊಲೆರೊ ಡಿಕ್ಕಿಯಾಗಿ ಬೈಕ್ ಸವಾರ ಸ್ಪಾಟ್ ಡೆತ್ - Karavali Times ವಿಟ್ಲ : ಬೊಲೆರೊ ಡಿಕ್ಕಿಯಾಗಿ ಬೈಕ್ ಸವಾರ ಸ್ಪಾಟ್ ಡೆತ್ - Karavali Times

728x90

8 February 2021

ವಿಟ್ಲ : ಬೊಲೆರೊ ಡಿಕ್ಕಿಯಾಗಿ ಬೈಕ್ ಸವಾರ ಸ್ಪಾಟ್ ಡೆತ್

ಬಂಟ್ವಾಳ, ಫೆ. 09, 2021 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಸಮೀಪದ ಕಾಶಿಮಠ ಎಂಬಲ್ಲಿ ಸೋಮವಾರ ಬೆಳಿಗ್ಗೆ ಬೊಲೆರೋ ವಾಹನ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ, ಮಾಣಿ ಗ್ರಾಮದ ಪಲ್ಲತ್ತಿಲ ನಿವಾಸಿ ಬಾಲಕೃಷ್ಣ (55) ಮೃತಪಟ್ಟಿದ್ದಾರೆ. ಬಾಲಕೃಷ್ಣ ಅವರು ವಿಟ್ಲ ಕಡೆಯಿಂದ ಉಕ್ಕುಡ ಕಡೆಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ವಿಟ್ಲ ಕಡೆಯಿಂದ ಉಕ್ಕುಡ ಕಡೆಗೆ ಬರುತ್ತಿದ್ದ ಬೋಲೆರೋ ವಾಹನ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಘಟನೆಗೆ ಬೊಲೆರೋ ಚಾಲಕನ ಅಜಾಗರೂಕತೆಯ ಚಾಲನೆಯೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ವಿಟ್ಲ : ಬೊಲೆರೊ ಡಿಕ್ಕಿಯಾಗಿ ಬೈಕ್ ಸವಾರ ಸ್ಪಾಟ್ ಡೆತ್ Rating: 5 Reviewed By: karavali Times
Scroll to Top