ಪುತ್ತೂರು, ಫೆ. 09, 2021 (ಕರಾವಳಿ ಟೈಮ್ಸ್) : ನೌಕಾಪಡೆ ನೌಕರನ ಪಾರ್ಟಿಯಲ್ಲಿ ಭಾಗವಹಿಸಿದ ಅವರ ಸ್ನೇಹಿತೆ ಬ್ಯಾಂಕ್ ಉದ್ಯೋಗಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಆರೋಪಿ ಬ್ರಾಯನ್ ರಿಚರ್ಡ್ ಅಮನ್ನಾ ಎಂಬಾತನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಾಯಿಲಿನ್ ಪಿಂಟೋ ಎಂಬಾತನಿಗೆ ಅಂಡಮಾನ್ ಗೆ ವರ್ಗಾವಣೆಯಾಗಿಯಾಗಿರುವ ಹಿನ್ನಲೆಯಲ್ಲಿ ಫೆ. 5 ರಂದು ರಾತ್ರಿ ಆತ ಆಯೋಜಿಸಿದ್ದ ಬೀಳ್ಕೊಡುಗೆ ಪಾರ್ಟಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಆತನ ಸ್ನೇಹಿತೆ ಬ್ಯಾಂಕ್ ಉದ್ಯೋಗಿಯಾಗಿರುವ ಸಂತ್ರಸ್ಥ ಯುವತಿಯು ಆಕಾಶ್ ಸೆರಾವೊ ಎಂಬಾತನ ಮಾಲಕತ್ವದ ಕೊಡಿಪ್ಪಾಡಿಯ ವಿಶ್ರಾಂತಿ ಗೃಹಕ್ಕೆ ಬಂದಿದ್ದರು. ಪಾರ್ಟಿಯಲ್ಲಿ ಸುಮಾರು 17 ರಿಂದ 20 ಜನರು ಪಾಲ್ಗೊಂಡಿರುತ್ತಾರೆ. ಪಾರ್ಟಿ ಮುಗಿದ ಬಳಿಕ ಉಳಿದವರು ತೆರಳಿದ್ದು, ತಡರಾತ್ರಿಯಾಗಿರುವುದರಿಂದ ಸಂತ್ರಸ್ಥ ಯುವತಿ ಮತ್ತು ಆರೋಪಿ ಬ್ರಾಯನ್ ರಿಚರ್ಡ್ ಅಮನ್ನಾ ಸೇರಿ ಒಟ್ಟು 4 ಜನರು ವಿಶ್ರಾಂತಿ ಗೃಹದಲ್ಲೇ ಉಳಿದುಕೊಂಡಿದ್ದರು. ಸಂತ್ರಸ್ಥ ಯುವತಿ ಅಲ್ಲೇ ರೂಮೊಂದರಲ್ಲಿ ಮಲಗಿದ್ದು, ಬೆಳಿಗ್ಗೆ 5 ಗಂಟೆ ವೇಳೆಗೆ ಆರೋಪಿ ಬ್ರಾಯನ್ ರಿಚರ್ಡ್ ಅಮನ್ನಾ ಎಂಬಾತನು ಯುವತಿ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಸಂತ್ರಸ್ಥ ಯುವತಿ ನೀಡಿರುವ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ 328, 376 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
8 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment