ಕೊರೋನಾಘಾತಕ್ಕೆ ಬೆಚ್ಚಿದ ಸರಕಾರ : ವಿವಾಹ ಕಾರ್ಯಕ್ರಮಗಳಿಗೆ ಮತ್ತೆ 500 ಮಂದಿಯೊಳಗೆ ಜನ ನಿರ್ಬಂಧಿಸಿ ಹೊಸ ಮಾರ್ಗಸೂಚಿ ಪ್ರಕಟ - Karavali Times ಕೊರೋನಾಘಾತಕ್ಕೆ ಬೆಚ್ಚಿದ ಸರಕಾರ : ವಿವಾಹ ಕಾರ್ಯಕ್ರಮಗಳಿಗೆ ಮತ್ತೆ 500 ಮಂದಿಯೊಳಗೆ ಜನ ನಿರ್ಬಂಧಿಸಿ ಹೊಸ ಮಾರ್ಗಸೂಚಿ ಪ್ರಕಟ - Karavali Times

728x90

12 March 2021

ಕೊರೋನಾಘಾತಕ್ಕೆ ಬೆಚ್ಚಿದ ಸರಕಾರ : ವಿವಾಹ ಕಾರ್ಯಕ್ರಮಗಳಿಗೆ ಮತ್ತೆ 500 ಮಂದಿಯೊಳಗೆ ಜನ ನಿರ್ಬಂಧಿಸಿ ಹೊಸ ಮಾರ್ಗಸೂಚಿ ಪ್ರಕಟ
ಬೆಂಗಳೂರು, ಮಾ. 13, 2021 (ಕರಾವಳಿ ಟೈಮ್ಸ್) : ಕೊರೊನಾ ದ್ವಿತೀಯ ದೇಶಾದ್ಯಂತ ಅಬ್ಬರಿಸುತ್ತಿರುವ ಮಧ್ಯೆ ಗಂಭೀರವಾಗಿ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಶುಭ-ಸಮಾರಂಭ ಸೇರಿದಂತೆ ಸಭೆ-ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಕಠಿಣ ಮಾರ್ಗಸೂಚಿ ಜಾರಿಗೊಳಿಸಿ ಆದೇಶಿಸಿದೆ. 


    ಈ ಬಗ್ಗೆ ಆದೇಶ ಹೊರಡಿಸಿರುವ ಆರೋಗ್ಯ ಸಚಿವ ಡಾ ಕೆ ಸುಧಾಕರ ಅವರು, ಸಭೆ, ಸಮಾರಂಭಗಳಿಗೆ ಕಠಿಣ ನಿಯಮ ಜಾರಿ ಮಾಡಿ, ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. 


    ಸರಕಾರೀ ಮಟ್ಟದಲ್ಲಿ ಸಭೆ ನಡೆಸಿ ಈ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ ಎಂದಿರುವ ಸಚಿವ ಸುಧಾಕರ್ ಸಭೆ, ಸಮಾರಂಭಗಳಿಗೆ ಜನ ಸೇರಲು ಷರತ್ತು ವಿಧಿಸಲಾಗಿದೆ. ಹಾಲ್‍ನಲ್ಲಿ ಮದುವೆ ಸಮಾರಂಭಗಳಿಗೆ 200 ಜನ ಮಾತ್ರ ಸೇರಬೇಕು. ತೆರೆದ ಜಾಗದಲ್ಲಿ ಮದುವೆ ಸಮಾರಂಭ ನಡೆದರೆ 500 ಜನರು ಮಾತ್ರ ಸೇರಬೇಕು ಎಂದು ನಿರ್ಬಂಧ ವಿಧಿಸಿದ್ದಾರೆ. 


    ಜನ್ಮ ದಿನ ಸಹಿತ ಇತರ ಸಮಾರಂಭಗಳಿಗೆ ತೆರೆದ ಪ್ರದೇಶದಲ್ಲಿ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಹಾಲ್ ಅಥವಾ ಇನ್ ಡೋರ್ ಆಗಿ ಆಚರಿಸುವುದಾದರೆ ಕೇವಲ 50 ಜನ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. 

    ನಿಧನ, ಶವ ಸಂಸ್ಕಾರಕ್ಕೆ ತೆರೆದ ಪ್ರದೇಶದಲ್ಲಿ 100 ಜನ ಮೀರದಂತೆ, ಸಭಾಂಗಣದಲ್ಲಾದರೆ 50 ಜನರ ಮೀರದಂತೆ ಕಾರ್ಯ ನಡೆಸಬೇಕು. ಅಂತ್ಯ ಕ್ರಿಯಯಲ್ಲಿ 50 ಜನ ಮೀರಬಾರದು ಎಂದು ಆದೇಶದಲ್ಲಿ ಸಚಿವರು ಹೊರಡಿಸಿ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದ್ದಾರೆ.


    ಇನ್ನಿತರ ಸಮಾರಂಭಗಳಲ್ಲಿ ಕೂಡಾ 100 ಜನ ಮೀರಬಾರದು, ಧಾರ್ಮಿಕ ಆಚರಣೆಗಳಲ್ಲಿ 500, ರಾಜಕೀಯ ಕಾರ್ಯಕ್ರಮಗಳಲ್ಲಿ 500 ಜನ ಮೀರಬಾರದೆಂದು ಮಾರ್ಗಸೂಚಿ ತಿಳಿಸಿದೆ. ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ರಿಪೆÇೀರ್ಟ್ ಕಡ್ಡಾಯಗೊಳಿಸಲಾಗಿದೆ. ಸೋಂಕಿತರ ಪತ್ತೆ ಹಚ್ಚುವ ಕಾರ್ಯವನ್ನು ಕೂಡಾ ಚುರುಕುಗೊಳಿಸಲಾಗಿದ್ದು, ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಟೆಸ್ಟಿಂಗ್ ಪ್ರಕ್ರಿಯೆ ಹೆಚ್ಚಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾಘಾತಕ್ಕೆ ಬೆಚ್ಚಿದ ಸರಕಾರ : ವಿವಾಹ ಕಾರ್ಯಕ್ರಮಗಳಿಗೆ ಮತ್ತೆ 500 ಮಂದಿಯೊಳಗೆ ಜನ ನಿರ್ಬಂಧಿಸಿ ಹೊಸ ಮಾರ್ಗಸೂಚಿ ಪ್ರಕಟ Rating: 5 Reviewed By: karavali Times
Scroll to Top