ಆಶ್ಲೀಲ ಸಿಡಿ ವಿಚಾರಕ್ಕೆ ತನಿಖಾ ಸಂಸ್ಥೆ ರಚಿಸುವ ಸರಕಾರಕ್ಕೆ ವಿನಾಯಕ ಬಾಳಿಗ ಕೊಲೆ ಪ್ರಕರಣ ತನಿಖೆಗೆ ಎಸ್‍ಐಟಿ ರಚನೆ ಏಕೆ ಸಾಧ್ಯವಾಗಿಲ್ಲ : ಪ್ರೊ. ನರೇಂದ್ರ ನಾಯಕ್ ಸವಾಲು - Karavali Times ಆಶ್ಲೀಲ ಸಿಡಿ ವಿಚಾರಕ್ಕೆ ತನಿಖಾ ಸಂಸ್ಥೆ ರಚಿಸುವ ಸರಕಾರಕ್ಕೆ ವಿನಾಯಕ ಬಾಳಿಗ ಕೊಲೆ ಪ್ರಕರಣ ತನಿಖೆಗೆ ಎಸ್‍ಐಟಿ ರಚನೆ ಏಕೆ ಸಾಧ್ಯವಾಗಿಲ್ಲ : ಪ್ರೊ. ನರೇಂದ್ರ ನಾಯಕ್ ಸವಾಲು - Karavali Times

728x90

21 March 2021

ಆಶ್ಲೀಲ ಸಿಡಿ ವಿಚಾರಕ್ಕೆ ತನಿಖಾ ಸಂಸ್ಥೆ ರಚಿಸುವ ಸರಕಾರಕ್ಕೆ ವಿನಾಯಕ ಬಾಳಿಗ ಕೊಲೆ ಪ್ರಕರಣ ತನಿಖೆಗೆ ಎಸ್‍ಐಟಿ ರಚನೆ ಏಕೆ ಸಾಧ್ಯವಾಗಿಲ್ಲ : ಪ್ರೊ. ನರೇಂದ್ರ ನಾಯಕ್ ಸವಾಲು

 
ಮಂಗಳೂರು, ಮಾ. 22, 2021 (ಕರಾವಳಿ ಟೈಮ್ಸ್) : ಬಿಜೆಪಿ ಶಾಸಕರುಗಳ ಅಶ್ಲೀಲ ಸಿಡಿ ಬಗ್ಗೆ ಸಮಗ್ರ ತನಿಖೆ ಮಾಡಲು ಎಸ್‍ಐಟಿ ರಚಿಸಿದ ನಾಚಿಗೆಗೇಡು ಬಿಜೆಪಿ ಸರಕಾರಕ್ಕೆ ತನ್ನದೇ ಪಕ್ಷದ ಒಬ್ಬ ಕಾರ್ಯಕರ್ತನ ಭೀಕರ ಕೊಲೆಯ ಹಿಂದಿರುವ ಸತ್ಯವನ್ನು ಬಯಲಿಗೆಳೆಯಲು, ಸಮಗ್ರ ತನಿಖೆ ನಡೆಸಲು ಎಸ್‍ಐಟಿ ರಚಿಸಲು ಯಾಕೆ ಇದುವರೆಗೂ ಸಾಧ್ಯವಾಗಿಲ್ಲ ಎಂದು ವಿಚಾರವಾದಿ ಪ್ರೊ ನರೇಂದ್ರ ನಾಯಕ್ ಸರಕಾರಕ್ಕೆ ಸವಾಲೆಸೆದರು. 


    ಆರ್.ಟಿ.ಐ. ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಕೊಲೆ ಪ್ರಕರಣ ನಡೆದು 5 ವರ್ಷ ಪೂರೈಸಿದ ಹಿನ್ನಲೆಯಲ್ಲಿ ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ನಡೆಸಿದ ಮೆರವಣೆಗೆ ಹಾಗೂ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಆರ್.ಟಿ.ಐ. ಕಾರ್ಯಕರ್ತ ವಿನಾಯಕ ಬಾಳಿಗ ಅಕ್ರಮಗಳ, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ ಕಾರಣಕ್ಕಾಗಿಯೇ ಕೊಲೆಗೀಡಾಗಿದ್ದಾರೆ. ಪೆÇಲೀಸ್ ಇಲಾಖೆ ಕೊಲೆಗಡುಕರನ್ನಷ್ಟೇ ಬಂಧಿಸಲಾಗಿದೆ ಹೊರತು ಕೊಲೆಯ ಹಿಂದಿರುವ ಸೂತ್ರಧಾರಿಗಳನ್ನು ಬಂಧಿಸಿಲ್ಲ ಹಾಗೂ ಪ್ರಕರಣವನ್ನು ಸಂಪೂರ್ಣ ಭೇದಿಸಲು ಇದುವರೆಗೂ ಸಾದ್ಯವಾಗಿಲ್ಲ. ಈ ಪ್ರಕರಣದ ಸಮಗ್ರ ತನಿಖೆ ನಡೆಯಬೇಕು ಹಾಗಾಗಿ ಉನ್ನತ ಮಟ್ಟದ ತನಿಖೆಗೆ ಸಹಕಾರಿಯಾಗುವಂತೆ ಎಸ್.ಐ.ಟಿ ನೇಮಕ ಆಗಬೇಕು. ಅದು ಆಗುವವರೆಗೆ ಬಾಳಿಗಾ ಸಾವಿನ ನ್ಯಾಯಕ್ಕಾಗಿ ನಡೆಯುವ ಹೋರಾಟ ನಿಲ್ಲುವುದಿಲ್ಲ ಎಂದವರು ಎಚ್ಚರಿಸಿದರು.


    ಡಿವೈಎಫ್‍ಐ ರಾಜ್ಯಾದ್ಯಕ್ಷ ಮುನೀರ್ ಕಾಟಿಪಳ್ಳ, ಡಿ.ಎಸ್.ಎಸ್. ರಾಜ್ಯ ಮುಖಂಡ ಎಂ ದೇವದಾಸ್, ಮನೋವೈದ್ಯ ಡಾ ಪಿ.ವಿ. ಭಂಡಾರಿ, ಮಂಜುಳಾ ನಾಯಕ್, ಮಾಜಿ ಕಾಪೆರ್Çರೇಟರ್ ಪ್ರಕಾಶ್ ಸಾಲ್ಯಾನ್, ಸುನಿಲ್ ಬಜಿಲಕೇರಿ, ಸುಧಾಕರ ಶೆಣೈ, ಡಿ.ಎಸ್.ಎಸ್. ಜಿಲ್ಲಾ ಮುಖಂಡರಾದ ರಘು ಎಕ್ಕಾರ್, ಜೆರಾಲ್ಡ್ ಟವರ್, ಮಾಜಿ ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್, ಪ್ರಸಾದ್ ಬಜಿಲಕೇರಿ, ಡಾ ಕೃಷ್ಣಪ್ಪ ಕೊಂಚಾಡಿ, ಗುಲಾಬಿ ಬಿಳಿಮಲೆ, ಆಶಾ ನಾಯಕ್, ಎರಿಕ್ ಲೋಬೋ, ಶ್ಯಾಮ್ ಸುಂದರ್ ರಾವ್, ವಾಸುದೇವ ಉಚ್ಚಿಲ, ಪ್ರಭಾಕರ ಕಾಪಿಕಾಡ್, ಬಾಳಿಗಾ ಅವರ ಸಹೋದರಿ ಅನುರಾಧ ಬಾಳಿಗ, ಹರ್ಷ ಬಾಳಿಗ, ದೇಶಪ್ರೇಮಿ ಸಂಘಟನೆ ಸಂಚಾಲಕ, ಡಿವೈಎಫ್‍ಐ ಜಿಲ್ಲಾ ಮುಖಂಡ ಸಂತೋಷ್ ಬಜಾಲ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 


    ಇದೇ ವೇಳೆ ವೆಂಕಟರಮಣ ದೇವಳದ ಮುಂಭಾಗದಿಂದ ಬಾಳಿಗಾ ಸಹೋದರಿಯರು ಪ್ರಾರ್ಥಿಸುವ ಮೂಲಕ ಮೆರವಣಿಗೆ ಪ್ರಾರಂಭಗೊಂಡು ಬಾಳಿಗ ಮನೆವರೆಗೆ ನಡೆಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಆಶ್ಲೀಲ ಸಿಡಿ ವಿಚಾರಕ್ಕೆ ತನಿಖಾ ಸಂಸ್ಥೆ ರಚಿಸುವ ಸರಕಾರಕ್ಕೆ ವಿನಾಯಕ ಬಾಳಿಗ ಕೊಲೆ ಪ್ರಕರಣ ತನಿಖೆಗೆ ಎಸ್‍ಐಟಿ ರಚನೆ ಏಕೆ ಸಾಧ್ಯವಾಗಿಲ್ಲ : ಪ್ರೊ. ನರೇಂದ್ರ ನಾಯಕ್ ಸವಾಲು Rating: 5 Reviewed By: karavali Times
Scroll to Top