ಲಯಕ್ಕೆ ಮರಳಿದ ಆಂಗ್ಲರ ಮುಂದೆ ಮೊದಲ ಟಿ-20 ಪಂದ್ಯ ಹೀನಾಯವಾಗಿ ಸೋತ ಕೊಹ್ಲಿ ಪಡೆ - Karavali Times ಲಯಕ್ಕೆ ಮರಳಿದ ಆಂಗ್ಲರ ಮುಂದೆ ಮೊದಲ ಟಿ-20 ಪಂದ್ಯ ಹೀನಾಯವಾಗಿ ಸೋತ ಕೊಹ್ಲಿ ಪಡೆ - Karavali Times

728x90

12 March 2021

ಲಯಕ್ಕೆ ಮರಳಿದ ಆಂಗ್ಲರ ಮುಂದೆ ಮೊದಲ ಟಿ-20 ಪಂದ್ಯ ಹೀನಾಯವಾಗಿ ಸೋತ ಕೊಹ್ಲಿ ಪಡೆ

 



ಅಹಮದಾಬಾದ್, ಮಾ. 13, 2021 (ಕರಾವಳಿ ಟೈಮ್ಸ್) :
ಸರ್ವಾಂಗೀಣ ಪ್ರದರ್ಶನ ನೀಡಿದ ಪ್ರವಾಸಿ ಇಂಗ್ಲಂಡ್ ತಂಡ ಟಿ-20 ಸರಣಿಯಲ್ಲಿ ಲಯಕ್ಕೆ ಮರಳಿದ್ದು, ಶುಕ್ರವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಭರ್ಜರಿ 8 ವಿಕೆಟ್‍ಗಳಿಂದ ಮಣಿಸುವ ಮೂಲಕ ಶುಭಾರಂಭ ಮಾಡಿದೆ. ಈ ಮೂಲಕ ಇಂಗ್ಲಂಡ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. 


    ಟೆಸ್ಟ್ ಸರಣಿಯನ್ನು 1-3 ಅಂತರದಿಂದ ಕಳೆದುಕೊಂಡು ಕಳೆಗುಂದಿದ್ದ ಇಂಗ್ಲಿಷರು ಟಿ-20 ಸರಣಿಯ ಮೊದಲ ಪಂದ್ಯವನ್ನು ಸವಾಲಾಗಿ ಸ್ವೀಕರಿಸಿ ಭಾರತಕ್ಕೆ ದಿಟ್ಟ ಪ್ರತಿರೋಧ ತೋರುವಲ್ಲಿ ಯಶಸ್ವಿಯಾಯಿತು. ಟಾಸ್ ಗೆದ್ದ ಇಂಗ್ಲಂಡ್ ನಾಯಕ ಭಾರತವನ್ನು ಮೊದಲು ಬ್ಯಾಟಿಂಗಿಗೆ ಇಳಿಸಿದರು. ಮೊದಲ ದಾಂಡುಗಾರಿಕೆ ನಡೆಸಿದ ಭಾರತ ಆಂಗ್ಲರ ಬಿಗು ದಾಳಿಯ ಮುಂದೆ ಆರಂಭದಲ್ಲೇ ಮುಗ್ಗರಿಸಿತು. ಪವರ್ ಪ್ಲೇ ಮುಕ್ತಾಯಕ್ಕೆ ಮುಂಚಿತವಾಗಿಯೇ ಟೀಂ ಇಂಡಿಯಾ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ (1) ಹಾಗೂ ನಾಯಕ ವಿರಾಟ್ ಕೊಹ್ಲಿ (0) ಹಾಗೂ ಶಿಖರ್ ಧವನ್ (4) ಅವರ ವಿಕೆಟ್‍ಗಳನ್ನು ಅಗ್ಗದಲ್ಲಿ ಕಳೆದುಕೊಂಡಿತು. 


    ಬಳಿಕ ಕ್ರೀಸಿಗಿಳಿದ ವಿಕೆಟ್ ಕೀಪರ್ ಬ್ಯಾಟ್ಸ್‍ಮೆನ್ ರಿಷಬ್ ಪಂತ್ ಸ್ಫೋಟಕ ಆಟದ ಸೂಚನೆ ನೀಡಿದರಾದರೂ ಹೆಚ್ಚು ಹೊತ್ತು ಕ್ರೀಸಿನಲ್ಲಿ ಉಳಿಯಲು ವಿಫಲರಾಗಿ 21 ರನ್( 23 ಎಸೆತ, 2 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾದರು. ನಂತರ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಐಯ್ಯರ್ 67 ರನ್ (48 ಎಸೆತ, 8 ಬೌಂಡರಿ, 1 ಸಿಕ್ಸರ್) ಸಿಡಿಸಿ ಜವಾಬ್ದಾರಿ ಮೆರೆದರು. ಅಂತಿಮವಾಗಿ ನಿಗದಿತ 20 ಓವರ್‍ಗಳ ಮುಕ್ತಾಯಕ್ಕೆ ಕೊಹ್ಲಿ ಪಡೆ 7 ವಿಕೆಟ್ ನಷ್ಟಕ್ಕೆ ಕೇವಲ 124 ರನ್ ಗಳಿಗೆ ಇನ್ನಿಂಗ್ಸ್ ಮುಕ್ತಾಯಗೊಳಿಸಿತು. 


    125 ರನ್‍ಗಳ ಸುಲಭ ಗುರಿ ಪಡೆದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಜೋಡಿ ಜೋಸನ್ ರಾಯ್ ಹಾಗೂ ಜೋಸ್ ಬಟ್ಲರ್ ಸ್ಪೋಟಕ ಆರಂಭ ನೀಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ ಬರೋಬ್ಬರಿ 72 ರನ್‍ಗಳನ್ನು ಒಟ್ಟುಗೂಡಿಸಿದರು. 24 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 28 ರನ್ ಗಳಿಸಿದ್ದ ಬಟ್ಲರ್ ಅವರನ್ನು ಚಹಾಲ್ ಪಡೆದರು. ಬಳಿಕ ಜೋಸನ್ ರಾಯ್ 49 ರನ್ (32 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟಾದರು. ನಂತರ ಬಂದ ಡೇವಿಡ್ ಮಲಾನ್ 24 ರನ್ (20 ಎಸೆತ, 2 ಬೌಂಡರಿ, 1 ಸಿಕ್ಸರ್) ಹಾಗೂ ಜಾನಿ ಬೈರ್ಸ್ಟೋವ್ 26 ರನ್ (17 ಎಸೆತ, 1 ಬೌಂಡರಿ, 2 ಸಿಕ್ಸರ್) ಸಿಡಿಸಿ ಅಜೇಯರಾಗುಳಿದರು. ಅಂತಿಮವಾಗಿ ಇಂಗ್ಲೆಂಡ್ ತಂಡ 15.3 ಓವರ್‍ಗಳಲ್ಲಿ 27 ಎಸೆತ ಬಾಕಿ ಇರುವಂತೆ 130 ರನ್‍ಗಳಿಸಿ ವಿಜಯದ ನಗೆ ಬೀರಿತು.

  • Blogger Comments
  • Facebook Comments

0 comments:

Post a Comment

Item Reviewed: ಲಯಕ್ಕೆ ಮರಳಿದ ಆಂಗ್ಲರ ಮುಂದೆ ಮೊದಲ ಟಿ-20 ಪಂದ್ಯ ಹೀನಾಯವಾಗಿ ಸೋತ ಕೊಹ್ಲಿ ಪಡೆ Rating: 5 Reviewed By: karavali Times
Scroll to Top