ರೋಡ್ ಸೇಫ್ಟಿಗಾಗಿ ವಿಶ್ವ ಲೆಜೆಂಡ್ಸ್ ಟೂರ್ನಿ : ಸೆಹ್ವಾಗ್ ಸ್ಫೋಟಕ ಅರ್ಧಶತಕಕ್ಕೆ ಮಂಕಾದ ಬಾಂಗ್ಲಾ, ಭಾರತಕ್ಕೆ 10 ವಿಕೆಟ್‍ಗಳ ಭರ್ಜರಿ ಜಯ - Karavali Times ರೋಡ್ ಸೇಫ್ಟಿಗಾಗಿ ವಿಶ್ವ ಲೆಜೆಂಡ್ಸ್ ಟೂರ್ನಿ : ಸೆಹ್ವಾಗ್ ಸ್ಫೋಟಕ ಅರ್ಧಶತಕಕ್ಕೆ ಮಂಕಾದ ಬಾಂಗ್ಲಾ, ಭಾರತಕ್ಕೆ 10 ವಿಕೆಟ್‍ಗಳ ಭರ್ಜರಿ ಜಯ - Karavali Times

728x90

6 March 2021

ರೋಡ್ ಸೇಫ್ಟಿಗಾಗಿ ವಿಶ್ವ ಲೆಜೆಂಡ್ಸ್ ಟೂರ್ನಿ : ಸೆಹ್ವಾಗ್ ಸ್ಫೋಟಕ ಅರ್ಧಶತಕಕ್ಕೆ ಮಂಕಾದ ಬಾಂಗ್ಲಾ, ಭಾರತಕ್ಕೆ 10 ವಿಕೆಟ್‍ಗಳ ಭರ್ಜರಿ ಜಯ



ರಾಯ್‍ಪುರ, ಮಾ. 06, 2021 (ಕರಾವಳಿ ಟೈಮ್ಸ್) : ಇಲ್ಲಿನ ಮೈದಾನದಲ್ಲಿ ರಸ್ತೆ ಸುರಕ್ಷಾ ಅಭಿಯಾನದ ಪ್ರಯುಕ್ತ ನಡೆಯುತ್ತಿರುವ ವಿಶ್ವದ ಹಿರಿಯ ಕ್ರಿಕೆಟಿಗರ ಟೂರ್ನಿಯಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಮತ್ತೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಬಾಂಗ್ಲಾದೇಶ ಲೆಜೆಂಡ್ ವಿರುದ್ಧ ಭಾರತ ಲೆಜೆಂಡ್ ತಂಡ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ.

ರೋಡ್ ಸೇಫ್ಟಿಗಾಗಿ ಈ ವಿಶ್ವ ಸೀರಿಸ್ ಪಂದ್ಯಾಟ ನಡೆಯುತ್ತಿದೆ. ಟಾಸ್ ಗೆದ್ದ ಬಾಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಿ 19.4 ಓವರ್‍ಗಳಲ್ಲಿ 109 ರನ್‍ಗಳಿಗೆ ಆಲೌಟ್ ಆಯಿತು. 110 ರನ್‍ಗಳ ಸುಲಭ ಸವಾಲನ್ನು ಪಡೆದ ಭಾರತ 10.1 ಓವರ್‍ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 114 ರನ್ ಗಳಿಸಿ ಗುರಿ ತಲುಪಿತು. ವೀರೇಂದ್ರ ಸೆಹ್ವಾಗ್ ಸ್ಫೋಟಕ 80 ರನ್ (35 ಎಸೆತ, 10 ಬೌಂಡರಿ, 5 ಸಿಕ್ಸರ್) ಭಾರಿಸಿದರೆ, ನಾಯಕ ಸಚಿನ್ ತೆಂಡೂಲ್ಕರ್ 33 ರನ್ (26 ಎಸೆತ, 5 ಬೌಂಡರಿ) ಭಾರಿಸಿ ಅಜೇಯರಾಗುಳಿದರು. 

ಬಾಂಗ್ಲಾ ಪರ ನಿಝಾಮುದ್ದೀನ್ 49 ರನ್ ಭಾರಿಸಿದರು. ಭಾರತದ ಪರ ವಿನಯ್ ಕುಮಾರ್, ಪ್ರಗ್ಯಾನ್ ಓಜಾ, ಯುವರಾಜ್ ಸಿಂಗ್ ತಲಾ 2 ವಿಕೆಟ್ ಪಡೆದರು. ಮನ್‍ಪ್ರೀತ್ ಗೋನಿ, ಯೂಸುಫ್ ಪಠಾಣ್ ತಲಾ ಒಂದು ವಿಕೆಟ್ ಪಡೆದರು.

3 ಪಂದ್ಯಗಳನ್ನು ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದಿದೆ. ಭಾರತ ತಂಡ ಕಳೆದ ವರ್ಷವೇ 2 ಪಂದ್ಯಗಳನ್ನು ಗೆದ್ದುಕೊಂಡಿತ್ತು. ಕೊರೊನಾ ಕಾರಣದಿಂದ ಟೂರ್ನಿಯನ್ನು ಈ ವರ್ಷಕ್ಕೆ ಮುಂದೂಡಿಕೆಯಾಗಿತ್ತು.

  • Blogger Comments
  • Facebook Comments

0 comments:

Post a Comment

Item Reviewed: ರೋಡ್ ಸೇಫ್ಟಿಗಾಗಿ ವಿಶ್ವ ಲೆಜೆಂಡ್ಸ್ ಟೂರ್ನಿ : ಸೆಹ್ವಾಗ್ ಸ್ಫೋಟಕ ಅರ್ಧಶತಕಕ್ಕೆ ಮಂಕಾದ ಬಾಂಗ್ಲಾ, ಭಾರತಕ್ಕೆ 10 ವಿಕೆಟ್‍ಗಳ ಭರ್ಜರಿ ಜಯ Rating: 5 Reviewed By: karavali Times
Scroll to Top