ಸಂಕಷ್ಟದಲ್ಲಿರುವ ಮಂಡಾಡಿಯ ವೃದ್ದ ದಂಪತಿಗೆ ಆರ್ಥಿಕ ಸಹಾಯ ಹಸ್ತಾಂತರ - Karavali Times ಸಂಕಷ್ಟದಲ್ಲಿರುವ ಮಂಡಾಡಿಯ ವೃದ್ದ ದಂಪತಿಗೆ ಆರ್ಥಿಕ ಸಹಾಯ ಹಸ್ತಾಂತರ - Karavali Times

728x90

25 March 2021

ಸಂಕಷ್ಟದಲ್ಲಿರುವ ಮಂಡಾಡಿಯ ವೃದ್ದ ದಂಪತಿಗೆ ಆರ್ಥಿಕ ಸಹಾಯ ಹಸ್ತಾಂತರ


ಬಂಟ್ವಾಳ, ಮಾ. 25, 2021 (ಕರಾವಳಿ ಟೈಮ್ಸ್) : ತಾಲೂಕಿನ ಮಂಡಾಡಿ ನಿವಾಸಿ ವೃದ್ದ ದಂಪತಿಗಳಾದ ಗಿರಿಜ ಹಾಗೂ ಅವರ ಪತಿ ಯಾವುದೇ ದುಡಿಮೆ ಇಲ್ಲದೆ, ದುಡಿಯಲು ಶಕ್ತಿಯಿಲ್ಲದೆ ಅನಾರೋಗ್ಯಕ್ಕೀಡಾಗಿದ್ದು, ಮಾತ್ರವಲ್ಲ ಇವರ ಆಸರೆಗೆ ಯಾರೂ ಇಲ್ಲದೆ ಕಷ್ಟದ ಪರಿಸ್ಥಿತಿಯಲ್ಲಿ ಜೀವನ ನಿರ್ವಹಿಸುತ್ತಿರುವುದನ್ನು ಗುರುತಿಸಿದ ಡಿ ವೈ ಎಫ್ ಐ ಜಿಲ್ಲಾ ಮುಖಂಡ ಸಂತೋಷ್ ಬಜಾಲ್ ಅವರು ಅನಿವಾಸಿ ಸಂಘ ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ (ಎಂಎಎಸ್‍ಎ) ಸಂಸ್ಥೆಯ ಗಮನಕ್ಕೆ ತಂದು ಆ ಮೂಲಕ ಆರ್ಥಿಕ ಸಹಾಯ ಒದಗಿಸಿಕೊಸಡುವಲ್ಲಿ ಸಹಕರಿಸಿರುತ್ತಾರೆ. 

ಸಂಸ್ಥೆಯು ನೀಡಿದ 20 ಸಾವಿರ ರೂಪಾಯಿ ಮೊತ್ತದ ಆರ್ಥಿಕ ಸಹಾಯದ ಚೆಕನ್ನು ಗುರುವಾರ ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಡಿವೈಎಫ್‍ಐ ಬಂಟ್ವಾಳ ತಾಲೂಕಿನ ಪ್ರಮುಖರಾದ ತುಳಸಿದಾಸ್ ವಿಟ್ಲ, ಉದಯ ಕುಮಾರ್ ಮಂಡಾಡಿ, ರಾಜಾ ಚೆಂಡ್ತಿಮಾರ್,  ಸುರೇಂದ್ರ ಕೋಟ್ಯಾನ್, ಲೋಲಾಕ್ಷಿ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಸಂಕಷ್ಟದಲ್ಲಿರುವ ಮಂಡಾಡಿಯ ವೃದ್ದ ದಂಪತಿಗೆ ಆರ್ಥಿಕ ಸಹಾಯ ಹಸ್ತಾಂತರ Rating: 5 Reviewed By: karavali Times
Scroll to Top