ಕಲ್ಲಡ್ಕ : ಅನ್ನಭಾಗ್ಯ ಯೋಜನೆಯ ಅಕ್ಕಿ ದಾಸ್ತಾನು ಸ್ಥಳಕ್ಕೆ ಅಧಿಕಾರಿಗಳ ದಾಳಿ, 25 ಕ್ವಿಂಟಾಲ್ ಅಕ್ಕಿ, ಅಟೋ ರಿಕ್ಷಾ ವಶಕ್ಕೆ, ಇಬ್ಬರ ವಿರುದ್ದ ಪ್ರಕರಣ ದಾಖಲು - Karavali Times ಕಲ್ಲಡ್ಕ : ಅನ್ನಭಾಗ್ಯ ಯೋಜನೆಯ ಅಕ್ಕಿ ದಾಸ್ತಾನು ಸ್ಥಳಕ್ಕೆ ಅಧಿಕಾರಿಗಳ ದಾಳಿ, 25 ಕ್ವಿಂಟಾಲ್ ಅಕ್ಕಿ, ಅಟೋ ರಿಕ್ಷಾ ವಶಕ್ಕೆ, ಇಬ್ಬರ ವಿರುದ್ದ ಪ್ರಕರಣ ದಾಖಲು - Karavali Times

728x90

23 August 2025

ಕಲ್ಲಡ್ಕ : ಅನ್ನಭಾಗ್ಯ ಯೋಜನೆಯ ಅಕ್ಕಿ ದಾಸ್ತಾನು ಸ್ಥಳಕ್ಕೆ ಅಧಿಕಾರಿಗಳ ದಾಳಿ, 25 ಕ್ವಿಂಟಾಲ್ ಅಕ್ಕಿ, ಅಟೋ ರಿಕ್ಷಾ ವಶಕ್ಕೆ, ಇಬ್ಬರ ವಿರುದ್ದ ಪ್ರಕರಣ ದಾಖಲು

 ಬಂಟ್ವಾಳ, ಆಗಸ್ಟ್ 23, 2025 (ಕರಾವಳಿ ಟೈಮ್ಸ್) : ಸರಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಖಾಸಗಿ ಕಟ್ಟಡದಲ್ಲಿ ಅಕ್ರಮ ದಾಸ್ತಾನಿರಿಸಲಾಗಿದ್ದ ಸ್ಥಳಕ್ಕೆ ಆಹಾರ ಇಲಾಖಾಧಿಕಾರಿಗಳು ದಾಳಿ ನಡೆಸಿ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿಕೊಂಡ ಘಟನೆ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಸಮೀಪದ ಪಟ್ಟೆಕೋಡಿ ಎಂಬಲ್ಲಿ ಶನಿವಾರ ನಡೆದಿದೆ. 

ಘಟನೆಗೆ ಸಂಬಂಧಿಸಿದಂತೆ ಕಲ್ಲಡ್ಕ ನಿವಾಸಿಗಳಾದ ಗೋಡೌನ್ ನಿರ್ವಾಹಕ ಉಮ್ಮರಬ್ಬ ಯಾನೆ ಪುತ್ತುಮೋನು (47) ಹಾಗೂ ಕೆಲಸಗಾರ ರಫೀಕ್ (42) ಎಂಬವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಅಂಗಡಿ ಕಟ್ಟಡವೊಂದರಲ್ಲಿ, ಪಡಿತರ ಅಕ್ಕಿಯನ್ನು ಆಕ್ರಮವಾಗಿ ದಾಸ್ತಾನು ಇಡಲಾಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ತಾಲೂಕು ಆಹಾರ ಇಲಾಖಾಧಿಕಾರಿ ಎ ಪ್ರಶಾಂತ್ ಎ ಶೆಟ್ಟಿ ಅವರು ಪೊಲೀಸರ ಜೊತೆಗೂಡಿ ಈ ದಾಳಿ ಸಂಘಟಿಸಿದ್ದಾರೆ.

ದಾಳಿ ವೇಳೆ ಒಟ್ಟು 64 ಗೋಣಿ ಚೀಲಗಳಲ್ಲಿ 58,288/- ರೂಪಾಯಿ ಮೌಲ್ಯದ 2103.35 ಕೆ ಜಿ ಬೆಳ್ತಿಗೆ ಅಕ್ಕಿ ಮತ್ತು 467.10 ಕೆ ಜಿ ಕುಚ್ಚಲಕ್ಕಿಯನ್ನು ಆಕ್ರಮವಾಗಿ ಸಂಗ್ರಹಿಸಿಟ್ಟಿರುವುದು ಕಂಡುಬಂದಿದೆ. ಸದ್ರಿ ಅಕ್ಕಿಯನ್ನು ಕೆ ಎ 19 ಡಿ 3896 ನೋಂದಣಿ ಸಂಖ್ಯೆಯ ಆಟೋರಿಕ್ಷಾದಲ್ಲಿ ಸಾಗಾಟ ಮಾಡಲು ಸಿದ್ದತೆ ನಡೆಸಿರುವುದು ಕಂಡು ಬಂದಿದೆ. ಸ್ಥಳದಲ್ಲಿದ್ದ  ಅಕ್ಕಿಯ ಗೋಣಿ ಚೀಲಗಳನ್ನು, ಸಾಗಾಟ ಮಾಡಲು ಬಳಸಿದ ಆಟೋರಿಕ್ಷಾ, ತೂಕದ ಯಂತ್ರ, ಖಾಲಿ ಗೋಣಿ ಚೀಲಗಳು ಸೇರಿದಂತೆ ಇತರೆ ಸೊತ್ತುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಸ್ವಾಧೀನಪಡಿಸಿಕೊಂಡು, ಆರೋಪಿಗಳ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 96/2025 ಕಲಂ 3, 7 ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ಕಲಂ 18 ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ (ನಿಯಂತ್ರಣ ಆದೇಶ) 2016 ರಂತೆ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕಲ್ಲಡ್ಕ : ಅನ್ನಭಾಗ್ಯ ಯೋಜನೆಯ ಅಕ್ಕಿ ದಾಸ್ತಾನು ಸ್ಥಳಕ್ಕೆ ಅಧಿಕಾರಿಗಳ ದಾಳಿ, 25 ಕ್ವಿಂಟಾಲ್ ಅಕ್ಕಿ, ಅಟೋ ರಿಕ್ಷಾ ವಶಕ್ಕೆ, ಇಬ್ಬರ ವಿರುದ್ದ ಪ್ರಕರಣ ದಾಖಲು Rating: 5 Reviewed By: lk
Scroll to Top