ಪೊಲಾರ್ಡ್ ಅಬ್ಬರ : ಒಂದೇ ಓವರಿನ 6 ಎಸೆತಗಳಲ್ಲಿ 6 ಸಿಕ್ಸರ್ - Karavali Times ಪೊಲಾರ್ಡ್ ಅಬ್ಬರ : ಒಂದೇ ಓವರಿನ 6 ಎಸೆತಗಳಲ್ಲಿ 6 ಸಿಕ್ಸರ್ - Karavali Times

728x90

3 March 2021

ಪೊಲಾರ್ಡ್ ಅಬ್ಬರ : ಒಂದೇ ಓವರಿನ 6 ಎಸೆತಗಳಲ್ಲಿ 6 ಸಿಕ್ಸರ್

ಆಂಟಿಗಾ, ಮಾ. 04, 2021 (ಕರಾವಳಿ ಟೈಮ್ಸ್) : ವೆಸ್ಟ್ ಇಂಡೀಸ್ ನಾಯಕ ಕೀರಾನ್ ಪೆÇೀಲಾರ್ಡ್ ಒಂದೇ ಓವರಿನ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಕೀರಾನ್ ಪೆÇೀಲಾರ್ಡ್ ಶ್ರೀಲಂಕಾದ ಬೌಲರ್ ಅಖಿಲ ಧನಂಜಯ್ ಬೌಲಿಂಗ್‍ನಲ್ಲಿ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ, ಅಂತರಾಷ್ಟ್ರೀಯ ಪಂದ್ಯದಲ್ಲಿ ಯುವರಾಜ್ ಸಿಂಗ್ ಮತ್ತು ಹರ್ಷಲ್ ಗಿಬ್ಸ್ ನಂತರ ಈ ಸಾಧನೆ ಮಾಡಿದ ದಾಂಡಿಗ ಎಂಬ ಖ್ಯಾತಿಗೆ ಪಾತ್ರರಾದರು. 2007ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತದ ಯುವರಾಜ್ ಸಿಂಗ್, ಇಂಗ್ಲೆಂಡ್ ತಂಡದ ದಾಳಿಗಾರ ಫ್ಲಿಂಟಾಪ್ ಅವರ 6 ಎಸೆತಗಳಲ್ಲಿ ಸತತ ಸಿಕ್ಸರ್ ಭಾರಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದರು, ಬಳಿಕ ಹರ್ಷಲ್ ಗಿಬ್ಸ್ ನೆದರ್‍ಲ್ಯಾಂಡ್ ವಿರುದ್ಧ 6 ಸಿಕ್ಸ್ ಸಿಡಿಸಿದ್ದರು. ಇದೀಗ ಪೊಲಾರ್ಡ್ ಮತ್ತೊಮ್ಮೆ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಪೆÇೀಲಾರ್ಡ್ ಮೊದಲು ಫಿಲ್ಡಿಂಗ್ ಮಾಡುವ ನಿರ್ಧಾರ ಕೈಗೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿದ ವೆಸ್ಟ್ ಇಂಡೀಸ್ ತಂಡದ ಬೌಲರ್‍ಗಳು ಶ್ರೀಲಂಕಾವನ್ನು 131 ರನ್ ಗಳಿಗೆ ಕಟ್ಟಿಹಾಕಿದರು. 132 ರನ್‍ಗಳ ಗುರಿಯೊಂದಿಗೆ ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್ 3,1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 52 ಗಳಿಸಿತ್ತು ಈ ಹಂತದಲ್ಲಿ ದಾಳಿಗಿಳಿದ ಅಖಿಲ ಧನಂಜಯ ಅವರು ಲೂಯಿಸ್, ಗೇಲ್ ಹಾಗೂ ಪೂರನ್ ಅವರ ವಿಕೆಟ್ ಕಬಳಿಸುವ ಮೂಲಕ ಹ್ಯಾಟ್ರಿಕ್ ವಿಕೆಟ್ ಸಂಪಾದಿಸಿ ಮಿಂಚಿದ್ದರು. ಬಳಿಕ ಮೈದಾನಕ್ಕಿಳಿದ ಟಿ-20 ಸ್ಪೇಷಲಿಷ್ಟ್ ಖ್ಯಾತಿಯ ದಾಂಡಿಗ ಕೀರಾನ್ ಪೆÇಲಾರ್ಡ್ ಅಖಿಲ ಧನಂಜಯ ಅವರ ಆರನೇ ಓವರಿನ ಎಲ್ಲಾ ಆರು ಎಸೆತಗಳನ್ನು ಸಿಕ್ಸರ್‍ಗೆ ಅಟ್ಟಿ ಅಬ್ಬರಿಸಿದರು. ಪೆÇಲಾರ್ಡ್ 38 ರನ್ (11 ಎಸೆತ, 6 ಸಿಕ್ಸ್) ಸಿಡಿಸಿ ಔಟ್ ಆದರು. ವೆಸ್ಟ್ ಇಂಡೀಸ್ ತಂಡ ಅಂತಿಮವಾಗಿ 13.1 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 132 ರನ್‍ಗಳನ್ನು ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.
  • Blogger Comments
  • Facebook Comments

0 comments:

Post a Comment

Item Reviewed: ಪೊಲಾರ್ಡ್ ಅಬ್ಬರ : ಒಂದೇ ಓವರಿನ 6 ಎಸೆತಗಳಲ್ಲಿ 6 ಸಿಕ್ಸರ್ Rating: 5 Reviewed By: karavali Times
Scroll to Top