ಯೂಸುಫ್ ಪಠಾಣ್, ಯುವರಾಜ್ ಬ್ಯಾಟಿಂಗ್ ಅಬ್ಬರ : ಭಾರತ ಲೆಜೆಂಡ್ಸ್ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ20 ಚಾಂಪಿಯನ್ - Karavali Times ಯೂಸುಫ್ ಪಠಾಣ್, ಯುವರಾಜ್ ಬ್ಯಾಟಿಂಗ್ ಅಬ್ಬರ : ಭಾರತ ಲೆಜೆಂಡ್ಸ್ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ20 ಚಾಂಪಿಯನ್ - Karavali Times

728x90

21 March 2021

ಯೂಸುಫ್ ಪಠಾಣ್, ಯುವರಾಜ್ ಬ್ಯಾಟಿಂಗ್ ಅಬ್ಬರ : ಭಾರತ ಲೆಜೆಂಡ್ಸ್ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ20 ಚಾಂಪಿಯನ್

 


ಪಠಾಣ್ ಸಹೋದರರ ದಾಳಿಗೆ ಮಂಕಾದ ಲಂಕಾಗೆ  ಫೈನಲ್ ನಲ್ಲಿ 14 ರನ್ ಗಳ ಸೋಲು


ರಾಯ್ ಪುರ್, ಮಾ. 22, 2021 (ಕರಾವಳಿ ಟೈಮ್ಸ್) : ರಸ್ತೆ ಸುರಕ್ಷತೆಗಾಗಿ ನಡೆದ ಹಿರಿಯ ಆಟಗಾರರನ್ನೊಳಗೊಂಡ ವಿವಿಧ ರಾಷ್ಟ್ರಗಳ ಕ್ರಿಕೆಟ್ ತಂಡದ ಸರಣಿಯನ್ನು ಭಾರತ ಲೆಜೆಂಡ್ಸ್ ಗೆದ್ದುಕೊಳ್ಳುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು.

ಭಾನುವಾರ ಇಲ್ಲಿನ ಮೈದಾನದಲ್ಲಿ  ಶ್ರೀಲಂಕಾ ಲೆಜೆಂಡ್ಸ್ ವಿರುದ್ಧ ನಡೆದ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಯುವರಾಜ್ ಸಿಂಗ್, ಯೂಸುಫ್ ಪಠಾಣ್ ಹಾಗೂ ಸಚಿನ್ ತೆಂಡೂಲ್ಕರ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಪಠಾಣ್ ಸಹೋದರರ ಮಾರಕ ಬೌಲಿಂಗ್ ನೆರವಿನಿಂದ ಭಾರತ ಲೆಜೆಂಡ್ಸ್ ತಂಡ 14 ರನ್ ಗಳ ರೋಚಕ ಜಯ ಸಾಧಿಸಿ ಸರಣಿ ಕೈ ವಶ ಮಾಡಿಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಇಂಡಿಯಾ ಲೆಜೆಂಡ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಗಳನ್ನು ಕಲೆಹಾಕಿತು. ಭಾರತದ ಪರ ಸಚಿನ್ 30 ರನ್ ಗಳಿಸಿದರೆ, ಯುವರಾಜ್ ಸಿಂಗ್ 60 ರನ್ ಮತ್ತು ಯೂಸುಫ್ ಪಠಾಣ್ ಅಜೇಯ 62 ರನ್ ಗಳಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.

ಭಾರತ ನೀಡಿದ 182 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಶ್ರೀಲಂಕಾ ಲೆಜೆಂಡ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿ ಸೋಲೊಪ್ಪಿಕೊಂಡಿತು. ಲಂಕಾ ಪರ ಸನತ್ ಜಯಸೂರ್ಯ 43 ರನ್ ಗಳಿಸಿದರೆ, ಚಿಂತಕ ಜಯಸಿಂಘೆ 40 ಮತ್ತು ಕೌಶಲ್ಯ ವೀರರತ್ನೆ 38 ರನ್ ಗಳಿಸಿದರು. ಅಂತಿಮವಾಗಿ ಲಂಕಾ ತಂಡ 14 ರನ್ ಗಳ ಅಂತರದಲ್ಲಿ ಭಾರತದ ಎದುರು ಸೋಲೊಪ್ಪಿಕೊಂಡಿತು. ಭಾರತ ಪರವಾಗಿ ಇರ್ಫಾನ್ ಹಾಗೂ ಯೂಸುಫ್ ಪಠಾಣ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ-20 2021 ಸರಣಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರ ಹೊಮ್ಮಿತು.

  • Blogger Comments
  • Facebook Comments

0 comments:

Post a Comment

Item Reviewed: ಯೂಸುಫ್ ಪಠಾಣ್, ಯುವರಾಜ್ ಬ್ಯಾಟಿಂಗ್ ಅಬ್ಬರ : ಭಾರತ ಲೆಜೆಂಡ್ಸ್ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ20 ಚಾಂಪಿಯನ್ Rating: 5 Reviewed By: karavali Times
Scroll to Top