ತಲಪಾಡಿ : ಸರಕಾರಿ ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಗಾಯ - Karavali Times ತಲಪಾಡಿ : ಸರಕಾರಿ ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಗಾಯ - Karavali Times

728x90

22 March 2021

ತಲಪಾಡಿ : ಸರಕಾರಿ ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಗಾಯ
ಮಂಗಳೂರು, ಮಾ. 22, 2021 (ಕರಾವಳಿ ಟೈಮ್ಸ್) : ನಗರದ ಹೊರವಲಯದ ಉಳ್ಳಾಲ ಸಮೀಪದ ತಲಪಾಡಿ ಬಳಿ ಸರಕಾರಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಸೋಮವಾರ ನಡೆದಿದೆ. 

ಗಾಯಾಳು ಸ್ಕೂಟರ್ ಸವಾರನನ್ನು ಉದ್ಯಾವರ-ಮಾಡ ನಿವಾಸಿ ತುಳಸಿ (35) ಎಂದು ಹೆಸರಿಸಲಾಗಿದೆ. ತಲಪಾಡಿಯಲ್ಲಿ ಟಯರ್ ಅಂಗಡಿ ಹೊಂದಿರುವ ಇವರು ಮನೆಯಿಂದ ಸ್ಕೂಟರಿನಲ್ಲಿ ಬರುತ್ತಿರುವ ವೇಳೆ ಹೆದ್ದಾರಿ ಮಧ್ಯೆ ಡಿವೈಡರ್ ತಿರುವು ಬಳಿ ಸ್ಕೂಟರ್ ತಿರುಗಿಸುತ್ತಿದ್ದ ಸಂದರ್ಭ ಮಂಗಳೂರು-ಕಾಸರಗೋಡು ಮಾರ್ಗವಾಗಿ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಬಸ್ಸಿನಡಿಗೆ ಸಿಲುಕಿಕೊಂಡಿದೆ. 

  • Blogger Comments
  • Facebook Comments

0 comments:

Post a Comment

Item Reviewed: ತಲಪಾಡಿ : ಸರಕಾರಿ ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಗಾಯ Rating: 5 Reviewed By: karavali Times
Scroll to Top