ಮಡಿಕೇರಿ : ಮನೆಗೆ ಬೆಂಕಿ ಇಟ್ಟು 7 ಮಂದಿ ಸಜೀವ ದಹನಕ್ಕೆ ಕಾರಣನಾದ ಆರೋಪಿ ಶವವಾಗಿ ಪತ್ತೆ - Karavali Times ಮಡಿಕೇರಿ : ಮನೆಗೆ ಬೆಂಕಿ ಇಟ್ಟು 7 ಮಂದಿ ಸಜೀವ ದಹನಕ್ಕೆ ಕಾರಣನಾದ ಆರೋಪಿ ಶವವಾಗಿ ಪತ್ತೆ - Karavali Times

728x90

6 April 2021

ಮಡಿಕೇರಿ : ಮನೆಗೆ ಬೆಂಕಿ ಇಟ್ಟು 7 ಮಂದಿ ಸಜೀವ ದಹನಕ್ಕೆ ಕಾರಣನಾದ ಆರೋಪಿ ಶವವಾಗಿ ಪತ್ತೆ


ಮಡಿಕೇರಿ, ಎಪ್ರಿಲ್ 06, 2021 (ಕರಾವಳಿ ಟೈಮ್ಸ್) : ಕೊಡಗಿನ ಪೆÇನ್ನಂಪೇಟೆ ತಾಲೂಕಿನ ಮುಗುಟಗೇರಿಯಲ್ಲಿ ಕಳೆದ ಶುಕ್ರವಾರ ರಾತ್ರಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಏಳು ಜನರ ಸಜೀವ ದಹನಕ್ಕೆ ಕಾರಣನಾಗಿದ್ದ ಆರೋಪಿ ಭೋಜ (55)ನ ಮೃತದೇಹ ಮಂಗಳವಾರ ಪತ್ತೆಯಾಗಿದ್ದು, ಆತ್ಮಹತ್ಯೆಗೈದಿರುವ ಬಗ್ಗೆ ಶಂಕಿಸಲಾಗಿದೆ. 

ಆರೋಪಿ ಭೋಜನ ಮೃತದೇಹ ಮಂಗಳವಾರ ಮುಂಜಾನೆ ಆತನಿದ್ದ ಲೈನ್ ಮನೆಯ ಸಮೀಪದ ಮುಗುಟಗೇರಿಯ ಕಾಫಿ ತೋಟದಲ್ಲಿ ಪತ್ತೆಯಾಗಿದೆ. ಬೋಜ ಬೆಂಕಿ ಇಟ್ಟ ದಿನವೇ ತನ್ನ ಇನ್ನೊಂದು ಮಗಳಿಗೆ ಕರೆ ಮಾಡಿ ಮನೆಗೆ ಬೆಂಕಿ ಹಾಕಿರುವ ಬಗ್ಗೆ ಮಾತನಾಡಿರುವ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಕರೆ ಮಾಡಿದ ಮರುಕ್ಷಣವೇ ಬೋಜ ಲೈನ್ ಮನೆಯ ಸಮೀಪವೇ ಆತ್ಮಹತ್ಯೆಗೆ ಶರಣಾಗಿರುವ ಸಂಶಯ ವ್ಯಕ್ತವಾಗಿದೆ.

ಬೆಂಕಿ ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾಗ್ಯ (28) ಮಂಗಳವಾರ ಮುಂಜಾನೆ ಸಾವನ್ನಪ್ಪಿದ್ದಾರೆ. ಈ ಮೂಲಕ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 7ಕ್ಕೇರಿದಂತಾಗಿದೆ. 

ಇಬ್ಬರು ಮಕ್ಕಳನ್ನು ಕಳೆದುಕೊಂಡ ಭಾಗ್ಯ ಗಾಯಾಳು ತೋಲ ಎಂಬವರ ಪತ್ನಿಯಾಗಿದ್ದಾರೆ. ಒಟ್ಟು 7 ಜನರ ಹತ್ಯೆಗೆ ಕಾರಣನಾಗಿದ್ದ ಬೋಜನ ಹುಡುಕಾಟಕ್ಕೆ ಕೊಡಗಿನ ಪೆÇಲೀಸರ ವಿಶೇಷ ತಂಡ ರಚನೆ ಮಾಡಿದ್ದರು. ಇದೀಗ ಭೋಜನ ಮೃತದೇಹ ಪತ್ತೆಯಾಗುವ ಮೂಲಕ ಇಡೀ ಪ್ರಕರಣ ತಾರ್ಕಿಕ ಅಂತ್ಯ ಕಂಡಂತಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಡಿಕೇರಿ : ಮನೆಗೆ ಬೆಂಕಿ ಇಟ್ಟು 7 ಮಂದಿ ಸಜೀವ ದಹನಕ್ಕೆ ಕಾರಣನಾದ ಆರೋಪಿ ಶವವಾಗಿ ಪತ್ತೆ Rating: 5 Reviewed By: karavali Times
Scroll to Top