ಪಡಿತರ ಕೇಳಿದ ಜನರಿಗೆ ಸಾಯಲು ಹೇಳಿದ ದುಷ್ಟ ಸಚಿವರ ಬಗ್ಗೆ ಮುಖ್ಯಮಂತ್ರಿಗಳೇ ಉದಾರತೆ ಬೇಡ, ಕಿತ್ತೊಗೆಯಿರಿ : ಡಿವೈಎಫ್ಐ ಆಗ್ರಹ - Karavali Times ಪಡಿತರ ಕೇಳಿದ ಜನರಿಗೆ ಸಾಯಲು ಹೇಳಿದ ದುಷ್ಟ ಸಚಿವರ ಬಗ್ಗೆ ಮುಖ್ಯಮಂತ್ರಿಗಳೇ ಉದಾರತೆ ಬೇಡ, ಕಿತ್ತೊಗೆಯಿರಿ : ಡಿವೈಎಫ್ಐ ಆಗ್ರಹ - Karavali Times

728x90

28 April 2021

ಪಡಿತರ ಕೇಳಿದ ಜನರಿಗೆ ಸಾಯಲು ಹೇಳಿದ ದುಷ್ಟ ಸಚಿವರ ಬಗ್ಗೆ ಮುಖ್ಯಮಂತ್ರಿಗಳೇ ಉದಾರತೆ ಬೇಡ, ಕಿತ್ತೊಗೆಯಿರಿ : ಡಿವೈಎಫ್ಐ ಆಗ್ರಹ

 

ಬೆಂಗಳೂರು, ಎಪ್ರಿಲ್ 29, 2021 (ಕರಾವಳಿ ಟೈಮ್ಸ್) : ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ವೈಫಲ್ಯ ಕಂಡಿರುವ ರಾಜ್ಯ ಸರಕಾರ ಕನಿಷ್ಠ ಪಕ್ಷ ರಾಜ್ಯದ ಜನತೆಗೆ ಆಹಾರ ಹಾಗೂ ಆರೋಗ್ಯ ಖಾತ್ರಿ ಪಡಿಸದೇ ಲಾಕ್ಡೌನ್ ಹೇರಿ ಸಂಕಷ್ಟಕ್ಕೆ ದೂಡಿದೆಯಲ್ಲದೇ ಪಡಿತರ ಕಡಿತ ಮಾಡಿರುವುದನ್ನು ಪ್ರಶ್ನಿಸಿದ ಜನರಿಗೆ 'ಸತ್ತುಹೋಗಿ' ಎಂದು ಹೇಳಿ ಸಮರ್ಥಿಸಿಕೊಂಡಿರುವ ಸರಕಾರದ ಆಹಾರ ಮಂತ್ರಿ ಉಮೇಶ್ ಕತ್ತಿ ನಡವಳಿಕೆ ಅಕ್ಷ್ಯಮ್ಯವಾದುದು ಎಂದು ಡಿವೈಎಫ್ಐ ರಾಜ್ಯ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.


ಈ ಬಗ್ಗೆ ಜಂಟಿ ಮಾಧ್ಯಮ‌ ಪ್ರಕಟಣೆ ಹೊರಡಿಸಿರುವ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹಾಗೂ ಕಾರ್ಯದರ್ಶಿ ಬಸವರಾಜ ಪೂಜಾರ  ಬಿಜೆಪಿ‌ ಸರಕಾರದ ಜನವಿರೋಧಿ ನಡವಳಿಕೆಯನ್ನು ಡಿವೈಎಫ್ಐ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.


ಇಂತಹ ಸಚಿವರ ಬಗ್ಗೆ ಮುಖ್ಯಮಂತ್ರಿಗಳು ಯಾವುದೇ ಉದಾರತೆ ತೋರದೆ ತಕ್ಷಣ ರಾಜೀನಾಮೆ ಪಡೆದು ಮಂತ್ರಿ ಮಂಡಲದಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿದ್ದಾರೆ.


ರಾಜ್ಯದ ಜನರಿಗೆ ಹೊಸ ಯೋಜನೆಗಳನ್ನು ನೀಡಲು ಯೋಗ್ಯತೆ ಇಲ್ಲದ ಬಿಜೆಪಿ ಸರಕಾರ ಹಿಂದಿನ ಸರಕಾರ ವಿತರಿಸುತ್ತಿದ್ದ ಪಡಿತರವನ್ನು ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಡಿತಗೊಳಿಸಿ ಜನಸಾಮಾನ್ಯರ ಮೇಲೆ ಕ್ರೌರ್ಯ ಮೆರೆಯುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದಿರುವ ಸಮಿತಿ ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಈಗಿರುವ ಪಡಿತರ ವಿತರಣೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ ಜನ ಸಾಮಾನ್ಯರಿಗೆ ಆಸರೆಯಾಗುವ ಬದಲಿಗೆ ಕಡಿತೊಳಿಸಿ ಜನವಿರೋಧಿತನವನ್ನು ಸಾಬೀತುಗೊಳಿಸಿದೆ‌ ಎಂದು ಟೀಕಿಸಿದೆ.


ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತದ ಪರಿಣಾಮವಾಗಿ ದೇಶ ಹಾಗೂ ರಾಜ್ಯವು ಹಸಿವಿನ ಸೂಚ್ಯಂಕದಲ್ಲಿ ಹಿನ್ನಡೆ ಕಾಣುತ್ತಿದ್ದೆಯಲ್ಲದೆ ಹಸಿವಿನ ಸಾವು ಹೆಚ್ವುತ್ತಿದೆ. ಈಗಂತೂ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿರುವ ಕ್ಲಿಷ್ಟಕರ ಸಂದರ್ಭದಲ್ಲಿ ಸಚಿವರ ದಾಷ್ಟ್ಯತನದ ಹೇಳಿಕೆಗೆ ಮುಖ್ಯಮಂತ್ರಿ ಕೇವಲ ವಿಷಾದ ವ್ಯಕ್ತಪಡಿಸದೇ ಅವರ ರಾಜೀನಾಮೆಯನ್ನು ಪಡೆಯಬೇಕು ಎಂದು ತಾಕೀತು ಮಾಡಿದೆ.


 ಲಾಕ್ಡೌನ್ ಸಂದರ್ಭದಲ್ಲಿ ಈಗಿರುವ ಪಡಿತರ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಹಿಂದಿನ ರೀತಿಯಲ್ಲಿ ಕನಿಷ್ಠ ಒಬ್ಬರಿಗೆ 7 ಕೆ.ಜಿ ಅಕ್ಕಿ, ಗೋಧಿ, ಸಕ್ಕರೆ ಹಾಗೂ ಅವಶ್ಯಕ ಪಡಿತರ ವಸ್ತುಗಳನ್ನು ಉಚಿತವಾಗಿ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್ಐ ರಾಜ್ಯ ಸಮಿತಿಯು ಸರಕಾರವನ್ನು ಆಗ್ರಹಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪಡಿತರ ಕೇಳಿದ ಜನರಿಗೆ ಸಾಯಲು ಹೇಳಿದ ದುಷ್ಟ ಸಚಿವರ ಬಗ್ಗೆ ಮುಖ್ಯಮಂತ್ರಿಗಳೇ ಉದಾರತೆ ಬೇಡ, ಕಿತ್ತೊಗೆಯಿರಿ : ಡಿವೈಎಫ್ಐ ಆಗ್ರಹ Rating: 5 Reviewed By: karavali Times
Scroll to Top