ಅಸ್ಸಾಂ : ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಪತ್ತೆ ವೀಡಿಯೋ ವೈರಲ್ : ಆಯೋಗದಿಂದ ಪ್ರಕರಣ ದಾಖಲು - Karavali Times ಅಸ್ಸಾಂ : ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಪತ್ತೆ ವೀಡಿಯೋ ವೈರಲ್ : ಆಯೋಗದಿಂದ ಪ್ರಕರಣ ದಾಖಲು - Karavali Times

728x90

2 April 2021

ಅಸ್ಸಾಂ : ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಪತ್ತೆ ವೀಡಿಯೋ ವೈರಲ್ : ಆಯೋಗದಿಂದ ಪ್ರಕರಣ ದಾಖಲು


ನವದೆಹಲಿ, ಎ. 02, 2021 (ಕರಾವಳಿ ಟೈಮ್ಸ್) : ಅಸ್ಸಾಂ ವಿಧಾನಸಭಾ ಚುನಾವಣೆಯ ದ್ವಿತೀಯ ಹಂತದ ಮತದಾನ ಮುಕ್ತಾಯವಾಗಿ ಕೆಲವೇ ಗಂಟೆಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂ ಪತ್ತೆಯಾಗಿರುವ ವೀಡಿಯೋ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿರುವ ಮಧ್ಯೆ ಈ ಬಗ್ಗೆ ಚುನಾವಣಾ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಚಾಲನೆ ನೀಡಿದೆ.

ಅಸ್ಸಾಂ ಮೂಲದ ಪತ್ರಕರ್ತ ಅತಾನು ಭುಯಾನ್ ಇವಿಎಂಗಳಿರುವ ಕಾರಿನ ವಿಡಿಯೊ ಟ್ವೀಟಿಸಿದ್ದು, ಈ ಘಟನೆಯ ಬಳಿಕ ಪಥರ್‍ಕಾಂಡಿ ಕ್ಷೇತ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಇವಿಎಂಗಳಿದ್ದ ಕಾರು (ಬೊಲೆರೊ) ಬಿಜೆಪಿ ಅಭ್ಯರ್ಥಿ ಕೃಷ್ಣೆಂದು ಪೌಲ್ ಅವರಿಗೆ ಸೇರಿದ್ದು ಎಂದು ಆರೋಪಿಸಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಬಿಜೆಪಿಯ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸುತ್ತಿವೆ. ಪ್ರಸ್ತುತ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದು ತನಿಖೆ  ನಡೆಸುತ್ತಿದ್ದಾರೆ.

ಈ ಮಧ್ಯೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಪ್ರತೀ ಚುನಾವಣೆಗಳಲ್ಲೂ ಇಂತಹ ದೃಶ್ಯಗಳು ಸಾಮಾನ್ಯವಾಗಿವೆ. ಇವಿಎಂಗಳ ಬಳಕೆಗೆ ಸಂಬಂಧಿಸಿದಂತೆ ಎಲ್ಲ ರಾಷ್ಟ್ರೀಯ ಪಕ್ಷಗಳು ಮತ್ತೆ ಪರಿಶೀಲನೆ ನಡೆಸಬೇಕಾದ ಅಗತ್ಯವಿದೆ. ಇಂತಹ ದೂರುಗಳ ಬಗ್ಗೆ ಚುನಾವಣಾ ಆಯೋಗ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ. 

ಪ್ರತಿ ಬಾರಿಯೂ ಚುನಾವಣೆಯ ಸಂದರ್ಭದಲ್ಲಿ ಇವಿಎಂಗಳನ್ನು ಸಾಗಿಸುತ್ತಿರುವ ಖಾಸಗಿ ವಾಹನಗಳ ಕುರಿತು ವಿಡಿಯೊ ಲಭ್ಯವಾಗುತ್ತದೆ. ಅವುಗಳಲ್ಲಿ ಈ ಸಮಾನ ಅಂಶಗಳನ್ನು ಕಾಣಬಹುದಾಗಿರುತ್ತದೆ. ಸೆರೆಹಿಡಿಯಲಾಗಿರುವ ವಿಡಿಯೊದಲ್ಲಿ ಕಾಣುವ ವಾಹನಗಳು  ಸಾಮಾನ್ಯವಾಗಿ ಬಿಜೆಪಿ ಅಭ್ಯರ್ಥಿ ಅಥವಾ ಅವರ ಸಹಚರರದ್ದಾಗಿರುತ್ತವೆ, ಇಂತಹ ಘಟನೆಗಳಿಗೆ ಸಂಬಂಧಿಸಿದ ವಿಡಿಯೊಗಳನ್ನು ನಿರ್ಲಕ್ಷಿಸಲಾಗುತ್ತದೆ., ಸೋಲಿನ ಭಯದಿಂದ ವಿಡಿಯೊ ಬಹಿರಂಗ ಪಡಿಸಿದ್ದಾರೆ ಎಂದು ಬಿಜೆಪಿ ತನ್ನ ಮಾಧ್ಯಮಗಳ ಮೂಲಕ ಆರೋಪಿಸುತ್ತದೆ. ಇಂತಹ ಹಲವು ಸಾಮಾನ್ಯ ಘಟನೆಗಳು ವರದಿಯಾಗುತ್ತಿರುತ್ತವೆ. ಆದರೆ ಇವುಗಳ ಬಗ್ಗೆ ಯಾವುದೇ ಕ್ರಮಕೈಗೊಳ್ಳಲಾಗುತ್ತಿಲ್ಲ. ಈ ದೂರುಗಳ ಬಗ್ಗೆ ಚುನಾವಣಾ ಆಯೋಗ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟಿಸಿದ್ದಾರೆ.

ಅಸ್ಸಾಂನಲ್ಲಿ ಗುರುವಾರ 39 ವಿಧಾನಸಭೆ ಸ್ಥಾನಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆದಿದ್ದು, ಸಂಜೆ 6ರವರೆಗೆ ಒಟ್ಟು ಶೇ 73.03ರಷ್ಟು ಮತದಾನ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಅಸ್ಸಾಂ : ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಪತ್ತೆ ವೀಡಿಯೋ ವೈರಲ್ : ಆಯೋಗದಿಂದ ಪ್ರಕರಣ ದಾಖಲು Rating: 5 Reviewed By: karavali Times
Scroll to Top