ರಾಜ್ಯಾದ್ಯಂತ ನೈಟ್ ಕರ್ಫ್ಯೂ ಬಗ್ಗೆ ಫೇಕ್ ಮಾರ್ಗಸೂಚಿ ವೈರಲ್ : ಗೊಂದಲಕ್ಕೀಡಾದ ಸಾರ್ವಜನಿಕರು - Karavali Times ರಾಜ್ಯಾದ್ಯಂತ ನೈಟ್ ಕರ್ಫ್ಯೂ ಬಗ್ಗೆ ಫೇಕ್ ಮಾರ್ಗಸೂಚಿ ವೈರಲ್ : ಗೊಂದಲಕ್ಕೀಡಾದ ಸಾರ್ವಜನಿಕರು - Karavali Times

728x90

19 April 2021

ರಾಜ್ಯಾದ್ಯಂತ ನೈಟ್ ಕರ್ಫ್ಯೂ ಬಗ್ಗೆ ಫೇಕ್ ಮಾರ್ಗಸೂಚಿ ವೈರಲ್ : ಗೊಂದಲಕ್ಕೀಡಾದ ಸಾರ್ವಜನಿಕರು

ಬೆಂಗಳೂರು, ಎಪ್ರಿಲ್ 19, 2021 (ಕರಾವಳಿ ಟೈಮ್ಸ್) : ರಾಜ್ಯ ಸರಕಾರದ ಹೆಸರಿನಲ್ಲಿ ಫೇಕ್ ಮಾರ್ಗಸೂಚಿಯೊಂದು ಸಂಜೆಯಿಂದ ವೈರಲ್ ಆಗಿದ್ದು, ಯಾರೋ ಕಿಡಿಗೇಡಿಗಳು ಎಡಿಟ್ ಮಾಡಿ ಹರಿಬಿಟ್ಟ ಈ ನಕಲಿ ಗೈಡ್ ಲೈನ್ಸ್ ನಿಂದಾಗಿ ಸಾರ್ವಜನಿಕರು ಗೊಂದಲಕ್ಕೀಡಾಗಿದ್ದಾರೆ. 


    ರಾಜ್ಯ ಸರಕಾರ ನಾಳೆಯಿಂದ ಮೇ 3 ರವರೆಗೆ ರಾಜ್ಯದಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ. ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಜಾರಿಯಲ್ಲಿರುವ ಈ ನೈಟ್ ಕರ್ಫ್ಯೂ ರಾಜ್ಯಕ್ಕೆ ಅನ್ವಯಿಸಲಿದ್ದು, ಸಾರ್ವಜನಿಕ ಸ್ಥಳದಲ್ಲಿ ಕಾರಣವಿಲ್ಲದೆ ಗುಂಪು ಸೇರುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದ್ದು, ಶಾಲಾ ಕಾಲೇಜು, ಸಿನಿಮಾ ಹಾಲ್, ಜಿಮ್, ಮನರಂಜನಾ ಪಾರ್ಕ್, ಶಾಪಿಂಗ್ ಕಾಂಪ್ಲೆಕ್ಸ್ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಈ ಎಂದು ಈ ನಕಲಿ ಮಾರ್ಗಸೂಚಿಯಲ್ಲಿ ನಮೂದಿಸಲಾಗಿದೆ. ಈ ಬಗ್ಗೆ ಪ್ರತಿಕ್ರಯಿಸಿರುವ ಸರಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಇದೊಂದು ನಕಲಿ ಮಾರ್ಗಸೂಚಿ ಎಂದು ಸ್ಪಷ್ಟಪಡಿಸಿದ್ದಾರೆ. 


    ನೈಟ್ ಕರ್ಫ್ಯೂ ಜಾರಿಗೆ ಸರಕಾರ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿರಲಿಲ್ಲ. ಆದರೆ ಯಾರೋ ಈ ಮಾರ್ಗಸೂಚಿ ಬಹಿರಂಗಗೊಳಿಸಿದ್ದಾರೆ ಎಂದಿರುವ ರವಿಕುಮಾರ್  ನಾಳೆ ನಡೆಯಲಿರುವ ಸರ್ವಪಕ್ಷ ಸಭೆಯ ಬಳಿಕ ರಾಜ್ಯದಲ್ಲಿ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು. ಕಳೆದ ವರ್ಷದ ಮಾರ್ಗಸೂಚಿಯ ದಿನಾಂಕ ಬದಲಿಸಿ ಯಾರೋ ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಿ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ರವಿ ಕುಮಾರ್ ಹೇಳಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯಾದ್ಯಂತ ನೈಟ್ ಕರ್ಫ್ಯೂ ಬಗ್ಗೆ ಫೇಕ್ ಮಾರ್ಗಸೂಚಿ ವೈರಲ್ : ಗೊಂದಲಕ್ಕೀಡಾದ ಸಾರ್ವಜನಿಕರು Rating: 5 Reviewed By: karavali Times
Scroll to Top