ಐಪಿಎಲ್ ಸೀಸನ್-14 : ಹೈದರಬಾದ್ ವಿರುದ್ದ ಕೆಕೆಆರ್ ತಂಡಕ್ಕೆ 10 ರನ್‍ಗಳ ರೋಚಕ ಜಯ - Karavali Times ಐಪಿಎಲ್ ಸೀಸನ್-14 : ಹೈದರಬಾದ್ ವಿರುದ್ದ ಕೆಕೆಆರ್ ತಂಡಕ್ಕೆ 10 ರನ್‍ಗಳ ರೋಚಕ ಜಯ - Karavali Times

728x90

11 April 2021

ಐಪಿಎಲ್ ಸೀಸನ್-14 : ಹೈದರಬಾದ್ ವಿರುದ್ದ ಕೆಕೆಆರ್ ತಂಡಕ್ಕೆ 10 ರನ್‍ಗಳ ರೋಚಕ ಜಯಚೆನ್ನೈ, ಎಪ್ರಿಲ್ 11, 2021 (ಕರಾವಳಿ ಟೈಮ್ಸ್) : ಐಪಿಎಲ್ 14ನೇ ಆವೃತ್ತಿಯ ಭಾನುವಾರ ನಡೆದ ಪಂದ್ಯದಲ್ಲಿ  ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೈದರಾಬಾದ್ ಸನ್ ರೈಸರ್ಸ್ ತಂಡವನ್ನು 10 ರನ್‍ಗಳಿಂದ ರೋಚಕವಾಗಿ ಸೋಲಿಸಿದೆ. 


    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ 6 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದರೆ ಹೈದರಾಬಾದ್ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ 10 ರನ್‍ಗಳಿಂದ ಸೋಲೊಪ್ಪಿಕೊಂಡಿತು. ತಂಡದ ಮೊತ್ತ 10 ರನ್ ಗಳಿಸಿದ್ದಾಗ ನಾಯಕ ಡೇವಿಡ್ ವಾರ್ನರ್ ಔಟಾದರೆ ಅದೇ ಮೊತ್ತಕ್ಕೆ ವೃದ್ಧಿಮಾನ್ ಸಹಾ ಕೂಡಾ ನಿರ್ಗಮಿಸಿದರು. 3ನೇ ವಿಕೆಟಿಗೆ ಮನೀಶ್ ಪಾಂಡೆ ಹಾಗೂ ಜಾನಿ ಬೈರ್‍ಸ್ಟೋವ್ 67 ಎಸೆತಗಳಲ್ಲಿ 92 ರನ್ ಜೊತೆಯಾಟ ನಡೆಸಿ ಗೆಲುವಿಗಾಗಿ ಶ್ರಮಿಸಿದರಾದರೂ ಕೊಲ್ಕತ್ತಾ ಹೋರಾಟಕ್ಕೆ ಅಂತಿಮವಾಗಿ ಶರಣಾಗಬೇಕಾಯಿತು. 


    ಬೈರ್‍ಸ್ಟೋವ್ 55 ರನ್ (40 ಎಸೆತ, 5 ಬೌಂಡರಿ, 3 ಸಿಕ್ಸರ್) ಭಾರಿಸಿದರೆ, ಮನೀಷ್ ಪಾಂಡೆ ಅಜೇಯ 61 ರನ್ (44 ಎಸೆತ, 2 ಬೌಂಡರಿ, 3 ಸಿಕ್ಸರ್) ಹಾಗೂ ಕೊನೆಯಲ್ಲಿ ಸಿಡಿದ ಅಬ್ದುಲ್ ಸವiದ್ ಅಜೇಯ 19 ರನ್ (8 ಎಸೆತ, 2 ಸಿಕ್ಸರ್) ಭಾರಿಸಿದರು. ಕೆಕೆಆರ್ ಪರವಾಗಿ ಪ್ರಸಿದ್ ಕೃಷ್ಣ 2 ವಿಕೆಟ್, ಶಕೀಬ್ ಉಲ್ ಹಸನ್, ಪ್ಯಾಟ್ ಕಮ್ಮಿನ್ಸ್ ಹಾಗೂ ಅಂಡ್ರೆ ರಸಲ್ ತಲಾ 1 ವಿಕೆಟ್ ಪಡೆದರು.


    ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ಪರವಾಗಿ ಆರಂಭಿಕ ಆಟಗಾರ ನಿತೀಶ್ ರಾಣಾ 80 ರನ್ (56 ಎಸೆತ, 9 ಬೌಂಡರಿ, 4 ಸಿಕ್ಸರ್) ಭಾರಿಸಿದರೆ, ರಾಹುಲ್ ತ್ರಿಪಾಠಿ 53 ರನ್ (29 ಎಸೆತ, 5 ಬೌಂಡರಿ, 2 ಸಿಕ್ಸರ್) ಭಾರಿಸಿದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ 22 ರನ್ (9 ಎಸೆತ, 2 ಬೌಂಡರಿ, 1 ಸಿಕ್ಸರ್) ಭಾರಿಸಿ ತಂಡದ ಬೃಹತ್ ಮೊತ್ತಕ್ಕೆ ಕೊಡುಗೆ ನೀಡಿದರು. ಹೈದ್ರಾಬಾದ್ ಪರವಾಗಿ ಮೊಹಮ್ಮದ್ ನಬಿ ಹಾಗೂ ರಶೀದ್ ಖಾನ್ ತಲಾ 2 ವಿಕೆಟ್ ಕಿತ್ತರೆ ಭುವನೇಶ್ವರ್ ಕುಮಾರ್, ಟಿ ನಟರಾಜನ್ ತಲಾ 1 ವಿಕೆಟ್ ಪಡೆದರು.

  • Blogger Comments
  • Facebook Comments

0 comments:

Post a Comment

Item Reviewed: ಐಪಿಎಲ್ ಸೀಸನ್-14 : ಹೈದರಬಾದ್ ವಿರುದ್ದ ಕೆಕೆಆರ್ ತಂಡಕ್ಕೆ 10 ರನ್‍ಗಳ ರೋಚಕ ಜಯ Rating: 5 Reviewed By: karavali Times
Scroll to Top