ಮುಂಬೈ ವಿರುದ್ದ 5 ವಿಕೆಟ್ : ದಾಖಲೆ ಬರೆದ ಹರ್ಷಲ್ ಪಟೇಲ್ - Karavali Times ಮುಂಬೈ ವಿರುದ್ದ 5 ವಿಕೆಟ್ : ದಾಖಲೆ ಬರೆದ ಹರ್ಷಲ್ ಪಟೇಲ್ - Karavali Times

728x90

9 April 2021

ಮುಂಬೈ ವಿರುದ್ದ 5 ವಿಕೆಟ್ : ದಾಖಲೆ ಬರೆದ ಹರ್ಷಲ್ ಪಟೇಲ್



ಚೆನ್ನೈ, ಎಪ್ರಿಲ್ 10, 2021 (ಕರಾವಳಿ ಟೈಮ್ಸ್) : ಐಪಿಎಲ್ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಆರ್.ಸಿ.ಬಿ. ವೇಗಿ ಹರ್ಷಲ್ ಪಟೇಲ್ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 5 ಬಾರಿಯ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ತಂಡದ ವಿರುದ್ಧ ಇದುವರೆಗೆ ಯಾವುದೇ ಬೌಲರ್ 5 ವಿಕೆಟ್ ಪಡೆದಿರಲಿಲ್ಲ. ಆದರೆ ಈ ಬಾರಿ ಹರ್ಷಲ್ ಪಟೇಲ್ 5 ವಿಕೆಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.


    ಹರ್ಯಾಣದ ಮಧ್ಯಮ ವೇಗಿ ಬೌಲರ್ ಹರ್ಷಲ್ ಪಟೇಲ್ ಅವರನ್ನು ಕೊಹ್ಲಿ 5ನೇಯವರಾಗಿ ದಾಳಿಗಿಳಿಸಿದ್ದರು. 105 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಮುಂಬೈ ತಂಡ ಹರ್ಷಲ್ ಪಟೇಲ್ ದಾಳಿಗಿಳಿದ ತಕ್ಷಣ ದಿಢೀರ್ ಪತನಕ್ಕೆ ಜಾರಿತು. ಇಶನ್ ಕಿಶಾನ್ ಅವರನ್ನು ಎಲ್‍ಬಿಗೆ ಕೆಡವಿ ನಂತರ ಹಾರ್ದಿಕ್ ಪಾಂಡ್ಯ, ಕಿರಾನ್ ಪೆÇಲಾರ್ಡ್, ಕೃನಾಲ್ ಪಾಂಡ್ಯ, ಮಾರ್ಕೋ ಜನ್‍ಸೆನ್ ಅವರನ್ನು ಔಟ್ ಮಾಡಿ ಮುಂಬೈ ಇಂಡಿಯನ್ಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ ಹರ್ಷಲ್ ಪಟೇಲ್ 4 ಓವರ್ ಎಸೆದು 27 ರನ್ ನೀಡಿ 5 ವಿಕೆಟ್ ಪಡೆದರು.


    ನನ್ನ ಟಿ-20 ಕ್ರಿಕೆಟ್ ಜೀವನದಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆದಿದ್ದೇನೆ. ಅದರಲ್ಲೂ ಮಂಬೈ ತಂಡದ ವಿರುದ್ಧ ಈ ಸಾಧನೆ ಮಾಡಿದ್ದಕ್ಕೆ ಬಹಳ ಸಂತಸವಿದೆ ಎಂದು ಹರ್ಷಲ್ ಪಟೇಲ್ ಹೇಳಿಕೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮುಂಬೈ ವಿರುದ್ದ 5 ವಿಕೆಟ್ : ದಾಖಲೆ ಬರೆದ ಹರ್ಷಲ್ ಪಟೇಲ್ Rating: 5 Reviewed By: karavali Times
Scroll to Top