ಬೆಳ್ತಂಗಡಿ : ದನ ಕಳ್ಳತನ ಆರೋಪ ಹೊರಿಸಿ ಇಬ್ಬರ ಮೇಲೆ ವಿನಾ ಕಾರಣ ಗುಂಪು ಹಲ್ಲೆ - Karavali Times ಬೆಳ್ತಂಗಡಿ : ದನ ಕಳ್ಳತನ ಆರೋಪ ಹೊರಿಸಿ ಇಬ್ಬರ ಮೇಲೆ ವಿನಾ ಕಾರಣ ಗುಂಪು ಹಲ್ಲೆ - Karavali Times

728x90

1 April 2021

ಬೆಳ್ತಂಗಡಿ : ದನ ಕಳ್ಳತನ ಆರೋಪ ಹೊರಿಸಿ ಇಬ್ಬರ ಮೇಲೆ ವಿನಾ ಕಾರಣ ಗುಂಪು ಹಲ್ಲೆ


ಬೆಳ್ತಂಗಡಿ, ಎ. 01, 2021 (ಕರಾವಳಿ ಟೈಮ್ಸ್) : ಪಿಕಪ್ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ಮುಸ್ಲಿಂ ಯುವಕರ ಮೇಲೆ ದನ ಕಳ್ಳತನ ಆರೋಪ ಹೊರಿಸಿದ ತಂಡವೊಂದು ವಾಹನ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬುಧವಾರ ರಾತ್ರಿ ಬೆಳ್ತಂಗಡಿ ಸಮೀಪದ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಬಳಿ ನಡೆದಿದೆ. 

ಗಾಯಾಳುಗಳನ್ನು ಬೆಳ್ತಂಗಡಿ ನಿವಾಸಿಗಳಾದ ಅಬ್ದುಲ್ ರಹೀಂ ಹಾಗೂ ಮುಹಮ್ಮದ್ ಮುಸ್ತಾಫಾ ಎಂದು ಹೆಸರಿಸಲಾಗಿದೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಬೆಳ್ತಂಗಡಿ ತಾಲೂಕು, ಕುಪ್ಪೆಟ್ಟಿ ನಿವಾಸಿ ಅಬ್ದುಲ್ ರಹೀಂ ಎಂಬವರು ಬುಧವಾರ ಸಂಜೆಯ ವೇಳೆ ತಮ್ಮ  ಪಿಕ್ ಅಪ್ ವಾಹನ ದುರಸ್ತಿಗಾಗಿ ಮಹಮ್ಮದ್ ಮುಸ್ತಾಫ ಎಂಬವರ ಜೊತೆ ಬೆಳ್ತಂಗಡಿ ಚರ್ಚ್ ರೋಡಿಗೆ ಬಂದಿದ್ದವರು ಆ ಬಳಿಕ ಸವಣಾಲಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿ ರಾತ್ರಿ ಊಟ ಮುಗಿಸಿ ಮನೆಗೆ  ಹಿಂತಿರುಗುವ ವೇಳೆ  ಸವಣಾಲಿನಿಂದ ಸ್ವಲ್ಪ ಮುಂದೆ ಸಾಗುತ್ತಿದ್ದಾಗ ರಾತ್ರಿ ಸುಮಾರು 10.30-10.45 ರ ವೇಳೆಗೆ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಬಳಿ ತಲುಪಿದಾಗ ಬೈಕಿನಲ್ಲಿ ಬಂದ ಇಬ್ಬರು ವಾಹನ ನಿಲ್ಲಿಸಲು ಸೂಚಿಸಿದ್ದು,  ವಾಹನ ನಿಲ್ಲಿಸಿದ ವೇಳೆ ಓಮ್ನಿ ಕಾರಿನಲ್ಲಿ ಬಂದ ಕೆಲವರು ಸೇರಿದಂತೆ ಒಂದು ಗುಂಪು ದನ ಕಳ್ಳತನದ ಆರೋಪ ಹೊರಿಸಿ ರಹೀಂ ಹಾಗೂ ಮುಸ್ತಫಾ ಅವರ ಮೇಲೆ ದೊಣ್ಣೆ ಮತ್ತು ಪಾದರಕ್ಷೆಗಳಿಂದ ಹಲ್ಲೆ ನಡೆಸಿ, ಪಿಕ್ ಅಪ್ ವಾಹನವನ್ನು ಜಖಂಗೊಳಿಸಿ, ಜೀವ ಬೆದರಿಕೆ ಹಾಕಿರುತ್ತಾರೆ. 

ಹಲ್ಲೆಯಿಂದ ಗಂಭೀರ ಗಾಯಗೊಂಡ ಅಬ್ದುಲ್ ರಹೀಮ್ ಮತ್ತು ಮಹಮ್ಮದ್ ಮುಸ್ತಾಫ ಅವರನ್ನು ಅಲ್ಲಿಗೆ ಬಂದ ಓರ್ವರು ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಹಲ್ಲೆಗೊಳಗಾದ ಅಬ್ದುಲ್ ರಹೀಮ್ ರವರು ಹಲ್ಲೆ ನಡೆಸಿದವರಲ್ಲಿ ಸಾಬು, ರಾಜೇಶ್ ಭಟ್, ರಾಕೇಶ್ ಭಟ್, ಗುರುಪ್ರಸಾದ್, ಲೋಕೇಶ್ ಮತ್ತು ಚಿದಾನಂದ ಎಂಬವರುಗಳನ್ನು ಗುರುತಿಸಿದ್ದು,  ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಕಲಂ 143, 147, 341, 504 506 323 324 326 355 427 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಆರೋಪಿಗಳಾದ ರಾಜೇಶ್ ಭಟ್, ರಾಕೇಶ್ ಭಟ್, ಗುರುಪ್ರಸಾದ್, ಲೋಕೇಶ್ ಹಾಗೂ ಚಿದಾನಂದ ಅವರನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ : ದನ ಕಳ್ಳತನ ಆರೋಪ ಹೊರಿಸಿ ಇಬ್ಬರ ಮೇಲೆ ವಿನಾ ಕಾರಣ ಗುಂಪು ಹಲ್ಲೆ Rating: 5 Reviewed By: karavali Times
Scroll to Top