ಅಂಚೆ ಇಲಾಖೆಯಿಂದ ಆಧಾರ್ ಸೀಡಿಂಗ್ ಸಮಸ್ಯೆ ಪರಿಹಾರಕ್ಕೆ ಹೊಸ ಸೇವೆ ಆರಂಭ - Karavali Times ಅಂಚೆ ಇಲಾಖೆಯಿಂದ ಆಧಾರ್ ಸೀಡಿಂಗ್ ಸಮಸ್ಯೆ ಪರಿಹಾರಕ್ಕೆ ಹೊಸ ಸೇವೆ ಆರಂಭ - Karavali Times

728x90

8 April 2021

ಅಂಚೆ ಇಲಾಖೆಯಿಂದ ಆಧಾರ್ ಸೀಡಿಂಗ್ ಸಮಸ್ಯೆ ಪರಿಹಾರಕ್ಕೆ ಹೊಸ ಸೇವೆ ಆರಂಭ


ಮಂಗಳೂರು, ಎಪ್ರಿಲ್ 08, 2021 (ಕರಾವಳಿ ಟೈಮ್ಸ್) : ಆಧಾರ್ ಸೀಡಿಂಗ್ ಸಮಸ್ಯೆಯ ಪರಿಹಾರಕ್ಕೆ ಮಂಗಳೂರು ಹಾಗೂ ಪುತ್ತೂರು ಅಂಚೆ ವಿಭಾಗದ ವತಿಯಿಂದ ಹೊಸ ಸೇವೆಯಾದ “ಸರಕಾರದ ಸವಲತ್ತುಗಳ ಪಡೆಯುವ  ನನ್ನ ಖಾತೆ” ಸೇವೆಯನ್ನು ಅರಂಭಿಸಲಾಗಿದೆ. 

ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರದ ಹೆಚ್ಚಿನ ಸಂಖ್ಯೆಯ ಯೋಜನೆಗಳ ಸಹಾಯಧನ ನೇರ ನಗದು ವರ್ಗಾವಣೆಯ ಮೂಲಕ ಫಲಾನುಭವಿಗಳ ಖಾತೆಗೆ ಜಮೆಗೊಳ್ಳುತ್ತಿದೆ. ಆರ್ಥಿಕ ವರ್ಷ 2020-21 ರಲ್ಲಿ  3,30,990/- ಕೋಟಿ  ರೂಪಾಯಿ, ದೇಶದ 77.2 ಕೋಟಿ ಜನರ ಖಾತೆಗೆ ಜಮೆ ಗೊಂಡಿದೆ. ದೇಶಾದ್ಯಂತ 316 ಯೋಜನೆಗಳ ಪಾವತಿ ಈ ವಿಧಾನದ ಮೂಲಕ ನಡೆಯುತ್ತಿದೆ.  

ಉದ್ಯೋಗ ಖಾತ್ರಿ - ವೇತನ ಪಾವತಿ, ಪಿ ಎಂ ಕಿಸಾನ್, ರಾಜ್ಯ ಸರಕಾರದಿಂದ ಹಾಲಿನ ಸಬ್ಸಿಡಿ ಪಾವತಿ, 

ಫಸಲ್ ವಿಮಾ ಯೋಜನೆಯ ವಿಮಾ ಮೊತ್ತದ ಪಾವತಿ, ಹವಾಮಾನ ಆಧಾರಿತ ಬೆಳೆ ವಿಮೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತ ಇಲಾಖೆಗಳ ವಿವಿಧ ಪ್ರಿಮೆಟ್ರಿಕ್ ಹಾಗೂ ಪೆÇೀಸ್ಟ್  ಮೆಟ್ರಿಕ್ ವಿದ್ಯಾರ್ಥಿ ವೇತನ ಮೊತ್ತ ಪಾವತಿ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಬಸವ ವಸತಿ ಯೋಜನೆ ಸಹಿತ ವಿವಿಧ ವಸತಿ ಯೋಜನೆಗಳ ಸಹಾಯಧನದ ಪಾವತಿ ಈ ಎಲ್ಲಾ ಯೋಜನೆಗಳ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಲು “ಆಧಾರ್ ಸೀಡಿಂಗ್” ಸರಿಯಾಗಿ ಆಗಿರುವುದು ಅತ್ಯಗತ್ಯವಾಗಿದೆ. 

ಆಧಾರ್ ಸೀಡಿಂಗ್ ಪರಿಕಲ್ಪನೆಯಲ್ಲಿನ ಗೊಂದಲದಿಂದಾಗಿ ಲಕ್ಷಾಂತರ ಫಲಾನುಭವಿಗಳು ಹಲವು ಸಮಸ್ಯೆಗಳಾದ ಆಧಾರ್ ಸೀಡಿಂಗ್ ಆಗಿರದ ಕಾರಣ ಹಣ ಖಾತೆಗೆ ಜಮೆ ಆಗುತ್ತಿಲ್ಲ, ಸೀಡಿಂಗ್ ಆಗಿಲ್ಲ ಎಂದು ಬ್ಯಾಂಕಿಗೆ ಹೋದಾಗ ಸೀಡಿಂಗ್ ಆಗಿದೆ ಎಂಬ ಉತ್ತರ ಬರುತ್ತಿದೆ, ಹಲವು ಯೋಜನೆಗಳಿಗೆ ಅರ್ಜಿ ಕೊಡುವಾಗ ಕೊಟ್ಟ ಬ್ಯಾಂಕ್ ಖಾತೆಗೆ ಹಣ ಜಮೆ ಆಗುತ್ತಿಲ್ಲ.  ಇನ್ಯಾವುದೋ ಖಾತೆಗೆ ಜಮಾ  ಆಗುತ್ತಿದೆ.  ತಮಗೆ ಬೇಕಾದ ಖಾತೆಗೆ, ತಮಗೆ ಒಳ್ಳೆಯ ಸೇವೆ ದೊರಕುವ ಖಾತೆಗೆ ಅಥವಾ ತಮಗೆ ಸಮೀಪವಿರುವ ಅಂಚೆ ಕಚೇರಿ ಖಾತೆಗೆ ಜಮಾ ಆಗುವಂತೆ ಮಾಡುವ ವಿಧಾನ ಹೇಗೆ ಎಂಬ ಮಾಹಿತಿ ತಿಳಿಯದೆಯೇ ಪ್ರತಿ ಬಾರಿ ಹಣ ತೆಗೆಯುವ ತೊಂದರೆ ಅನುಭವಿಸುತ್ತಿದ್ದಾರೆ.

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಭಾರತೀಯ ಅಂಚೆ ಇಲಾಖೆ, ಮಂಗಳೂರು ಹಾಗೂ ಪುತ್ತೂರು ವಿಭಾಗ ಹೊಸ ಪರಿಹಾರವನ್ನು ಕಂಡುಕೊಂಡಿದೆ. ಗ್ರಾಹಕರು ತಮಗೆ ಬರಬೇಕಾದ ಯಾವುದೇ ನೇರ ನಗದು ವರ್ಗಾವಣೆ  ತಮ್ಮ ಯಾವ ಖಾತೆಗೆ ಬರುತ್ತಿದೆ ಎಂಬುದನ್ನು  ತಮ್ಮ ಸಮೀಪದ ಅಂಚೆ ಕಚೇರಿಯಲ್ಲಿ ಅಥವಾ ಪೆÇೀಸ್ಟ್ ಮ್ಯಾನ್ ಮೂಲಕ ತಿಳಿಯಬಹುದಾಗಿದೆ. ಈ ಸೇವೆ ಪಡೆಯಲು ವಿನ್ಯಾಸಗೊಳಿಸಲಾದ ಸರಳ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. 

ಈ ಸೇವೆಯನ್ನು ಪಡೆಯಲು ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್ ಅಥವಾ ಸಂಖ್ಯೆಯನ್ನು ಮೊಬೈಲ್‍ನಲ್ಲಿ ಅಥವಾ ಒಂದು ಚೀಟಿಯಲ್ಲಿ ಬರೆದು ತರಬೇಕು.  ಆಧಾರ್‍ನೊಂದಿಗೆ ಜೋಡಣೆಗೊಂಡ ಮೊಬೈಲ್ ತರಬೇಕು. ಅವರಿಗೆ ಕೇವಲ 100 ರೂಪಾಯಿಯಲ್ಲಿ ಒಂದು ಐಪಿಪಿಬಿ ಖಾತೆಯನ್ನು ಮಾಡಿ ಜೊತೆಯಲ್ಲಿ ಈಗ ಅವರಿಗೆ ಬರುವ ಹಲವು ಯೋಜನೆಗಳ ಹಣ ನೇರ ನಗದು ಹಣ ವರ್ಗಾವಣೆ ಯಾವ ಬ್ಯಾಂಕ್ ಖಾತೆಗೆ ಬರುತ್ತಿದೆ  ಅಥವಾ ಆಧಾರ್ ಸೀಡಿಂಗ್ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿಸಲಾಗುತ್ತದೆ.  ಜೊತೆಗೆ ಅವರು ಹಲವು ಯೋಜನೆಗಳ ಮೊತ್ತದ ಜಮಾವಣೆಗೆ ನೇರ ನಗದು ಹಣ ವರ್ಗಾವಣೆಗಾಗಿ ಈಗಿರುವ ಅವರ ಬ್ಯಾಂಕ್ ಖಾತೆಯನ್ನು ಮುಂದುವರಿಸಬಹುದು ಅಥವಾ ಐಪಿಪಿಬಿ ಖಾತೆಗೆ ವರ್ಗಾವಣೆ ಮಾಡೆಬಹುದು.

ಅಂಚೆ ಕಚೇರಿಯ ಇಂಡಿಯಾ ಪೆÇೀಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಗೆ ಆಧಾರ್ ಆಧಾರಿತ ಯೋಜನೆಗಳ ಮುಂದಿನ ಕಂತುಗಳು ಜಮೆಯಾಗಲು ಆಧಾರ್ ಸೀಡಿಂಗನ್ನು ಬದಲಾಯಿಸುವುದರಿಂದ ಹಲವು ಅನುಕೂಲತೆಗಳಿವೆ. 

ಸೀಡಿಂಗ್‍ನಲ್ಲಿ ಸಮಸ್ಯೆಯಿಲ್ಲದವರಿಗೂ ಕೂಡ, ಒಂದು ವೇಳೆ ಈಗ ಹಣ ಜಮೆಯಾಗುತ್ತಿರುವ ಬ್ಯಾಂಕ್ ಖಾತೆಯಿಂದ ಅನಾನುಕೂಲವಿದ್ದರೆ, ಅವರಿಗೆ ತಮ್ಮ ಸಮೀಪದ ಅಂಚೆ ಕಚೇರಿಯಲ್ಲಿ ಮುಂದಿನ ಕಂತುಗಳು ಜಮೆಯಾಗಬೇಕಿದ್ದಲ್ಲಿ, ಸಾರ್ವಜನಿಕರು ಕೇವಲ ಆಧಾರ್ ಸೀಡಿಂಗ್‍ನ್ನು ಅಂಚೆ ಉಳಿತಾಯ ಖಾತೆ ಅಥವಾ ಇಂಡಿಯಾ ಪೆÇಸ್ಟ್ ಪೇಮೆಂಟ್ ಖಾತೆಗೆ ಬದಲಾವಣೆ ಮಾಡಿದರೆ ಸಾಕು.  ಆ ಬಗೆಗೂ ಸೂಕ್ತ ವ್ಯವಸ್ಠೆ ಮಾಡಲಾಗುವುದು.

ಗ್ರಾಮೀಣ ಪ್ರದೇಶದ ಗ್ರಾಹಕರು ಸರಕಾರದ ಹಣ (ಡಿಬಿಟಿ) ಯಾವ ಖಾತೆಗೆ ಜಮೆ ಆಗುತ್ತದೆ ಎಂದು ಗೊತ್ತಿಲ್ಲದೇ ಇದ್ದರೆ ತಮ್ಮ ಪೆÇೀಸ್ಟ್‍ಮ್ಯಾನ್ ಮುಖಾಂತರವೂ ತಿಳಿದುಕೊಳ್ಳಬಹುದು. ಪೆÇೀಸ್ಟ್‍ಮ್ಯಾನ್ ಯಾವ ಬ್ಯಾಂಕ್‍ಗೆ ಜಮಾ ಆಗುತ್ತದೆ ಎಂದು ತಿಳಿಸುತ್ತಾರೆ. ಹಾಗೆಯೇ ಒಂದು ವೇಳೆ ನೀವು  ಐಪಿಪಿಬಿ ಖಾತೆ ಹೊಂದಿಲ್ಲದಿದ್ದಲ್ಲಿ 100/- ರೂಪಾಯಿ ಜಮೆಯೊಂದಿಗೆ ನಿಮಗೆ ಐಪಿಪಿಬಿ ಖಾತೆ ತೆರೆದುಕೊಡುತ್ತಾರೆ. ಒಂದು ವೇಳೆ ನಿಮ್ಮ ಸರಕಾರದ ಹಣ ಜಮೆ ಆಗುವ ಖಾತೆ ಬೇರೆ ಬ್ಯಾಂಕಿನಲ್ಲಿ ಇದ್ದಲ್ಲಿ ನೀವು ತೆರೆದ ಹೊಸ ಐಪಿಪಿಬಿ ಖಾತೆಗೆ ಸೀಡಿಂಗ್ ಮಾಡಿಕೊಡಲಾಗುವುದು.  ಹೀಗೆ ಮಾಡಿದಲ್ಲಿ ನಿಮ್ಮ ಸಂದಾಯವಾದ ಡಿಬಿಟಿ ಹಣವನ್ನು ಫಲಾನುಭವಿಗಳೆ ತಮ್ಮ ಮೊಬೈಲ್ ಮೂಲಕ ವ್ಯವಹಾರ ಮಾಡಬಹುದು. ಹಾಗೆಯೇ ಹಣ ಬೇಕಿದ್ದಲ್ಲಿ ನಿಮ್ಮ ಪೆÇೀಸ್ಟ್‍ಮ್ಯಾನ್ ಮುಖಾಂತರ    ನಿಮ್ಮ ಮನೆ ಬಾಗಿಲಲ್ಲಿ ಪಡೆಯಬಹುದು ಅಥವಾ ಸಮೀಪದ ಅಂಚೆ ಕಚೇರಿಯಲ್ಲಿ ಪಡೆಯಬಹುದು. 

ಈ ಹೊಸ ಸೇವೆಯನ್ನು ಅಂಚೆ ಕಚೇರಿಯಲ್ಲಿ, ಪೆÇಸ್ಟ್‍ಮ್ಯಾನ್ ಮೂಲಕ ಸಾರ್ವಜನಿಕರ ಅನುಕೂಲತೆಗಾಗಿ ನೀಡಲಾಗುತ್ತದೆ ಎಂದು ಮಂಗಳೂರು ಹಿರಿಯ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಂಚೆ ಇಲಾಖೆಯಿಂದ ಆಧಾರ್ ಸೀಡಿಂಗ್ ಸಮಸ್ಯೆ ಪರಿಹಾರಕ್ಕೆ ಹೊಸ ಸೇವೆ ಆರಂಭ Rating: 5 Reviewed By: karavali Times
Scroll to Top