ಕೋವಿಡ್ ಸಂಕಷ್ಟದ ಸಂದರ್ಭ ಬಿಪಿಎಲ್ ಕಾರ್ಡ್ ರದ್ದು : ಡಿಸಿಗೆ ಮನವಿ ಸಲ್ಲಿಸಿದ ಉಮ್ಮರ್ ಫಾರೂಕ್ - Karavali Times ಕೋವಿಡ್ ಸಂಕಷ್ಟದ ಸಂದರ್ಭ ಬಿಪಿಎಲ್ ಕಾರ್ಡ್ ರದ್ದು : ಡಿಸಿಗೆ ಮನವಿ ಸಲ್ಲಿಸಿದ ಉಮ್ಮರ್ ಫಾರೂಕ್ - Karavali Times

728x90

19 May 2021

ಕೋವಿಡ್ ಸಂಕಷ್ಟದ ಸಂದರ್ಭ ಬಿಪಿಎಲ್ ಕಾರ್ಡ್ ರದ್ದು : ಡಿಸಿಗೆ ಮನವಿ ಸಲ್ಲಿಸಿದ ಉಮ್ಮರ್ ಫಾರೂಕ್

ಬಂಟ್ವಾಳ, ಮೇ 19, 2021 (ಕರಾವಳಿ ಟೈಮ್ಸ್) : ಕೋವಿಡ್ 2ನೇ ಅಲೆ ವ್ಯಾಪಕವಾಗಿ ಒಂದು ಕಡೆ ಹರಡುವ ಮೂಲಕ ಜನರನ್ನು ಆರೋಗ್ಯ ಸಮಸ್ಯೆಗೆ ತಳ್ಳಿದರೆ, ಇನ್ನೊಂದೆ ಯಾವುದೇ ಪ್ಯಾಕೇಜ್ ಇಲ್ಲದೆ ಸರಕಾರ ಲಾಕ್ ಡೌನ್ ಘೋಷಿಸುವ ಮೂಲಕ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. 

ಈ ಎಲ್ಲದರ ಮಧ್ಯೆ ಬಿಪಿಎಲ್ ಪಡಿತರ ಚೀಟಿದಾರರ ಪಡಿತರ ಚೀಟಿಯನ್ನು ವಿನಾ ನೆಪವೊಡ್ಡಿ ಆಹಾರ ಇಲಾಖೆ ಅಮಾನತುಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಸರಕಾರದ ಪಡಿತರ ವ್ಯವಸ್ಥೆ ಪಡೆದುಕೊಳ್ಳಲಾಗದೆ ಬಡವರು ಸಂಕಷ್ಟಕ್ಕೆ ಒಳಗಾದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. ಕುಟುಂಬದ ಯಾರಾದರೊಬ್ಬ ಸದಸ್ಯ ಕಾರು, ಬೈಕ್ ಅಥವಾ ಇನ್ಯಾವುದೇ ವಾಹನ ಕೊಳ್ಳುವ ಸಂದರ್ಭ ಬ್ಯಾಂಕಿಗೆ ತಾತ್ಕಾಲಿಕ ಐಟಿ ರಿಟರ್ನ್ ಸಲ್ಲಿಸಿದ್ದಾರೆ ಎಂಬ ಕುಂಟು ನೆಪವೊಡ್ಡಿ ಆಹಾರ ಇಲಾಖೆ ಇದೀಗ ಬಡವರ ಬಿಪಿಎಲ್ ಪಡಿತರ ಚೀಟಿಗೆ ಅಮಾನತು ಶಿಕ್ಷೆ ನೀಡಿದ್ದು, ಬಡವರು ಲಾಕ್ ಡೌನ್ ಸಂದರ್ಭದಲ್ಲಿ ಅನಿವಾರ್ಯ ಸಂಧಿಗ್ಧತೆಗಾಗಿ ಆಹಾರ ಸಾಮಾಗ್ರಿ ಪಡಕೊಳ್ಳಲು ರೇಶನ್ ಅಂಗಡಿಗೆ ತೆರಳಿದಾಗ ಅಂಗಡಿಯವರು ರೇಶನ್ ಕಾರ್ಡ್ ಅಮಾನತುಗೊಂಡಿರುವ ಬಗ್ಗೆ ತಿಳಿಸಿದಾಗಲೇ ಸರಕಾರದ ಆಹಾರ ಇಲಾಖೆಯ ಈ ಬಡವರ ವಿರೋಧಿ ಧೋರಣೆ ಬೆಳಕಿಗೆ ಬಂದಿದೆ. ಇದರಿಂದ ಬಡ ಕುಟುಂಬ ರೇಶನ್ ಪಡೆಯಲಾಗದೆ ತೀವ್ರ ಕಷ್ಟ ಅನುಭವಿಸುವಂತಾಗಿದೆ. 

 ಆಹಾರ ಇಲಾಖೆಯ ಈ ಜನ ವಿರೋಧಿ‌‌ ನೀತಿಯ ಬಗ್ಗೆ ಮಾಜಿ ಆಹಾರ ಸಚಿವ ಹಾಗೂ ಹಾಲಿ ಶಾಸಕ ಯು ಟಿ ಖಾದರ್ ಅವರ ಗಮನಕ್ಕೆ ತಂದಿರುವ ಜಿ‌ ಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ ಅವರು ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಲಿಖಿತ ಅಹವಾಲು ಸಲ್ಲಿಸಿ ಶೀಘ್ರ ಆಹಾರ ಇಲಾಖೆಯ ಆದೇಶ ಹಿಂಪಡೆದು ಬಡವರಿಗೆ ತಕ್ಷಣ ರೇಶನ್ ಸಾಮಾಗ್ರಿ ಒದಗಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

 ಈಗಾಗಲೇ ಬಡವರ ಪರ ಎಂದು ಬಿಂಬಿಸಿರುವ ಸರಕಾರ ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ, ಪಡಿತರ ಚೀಟಿ ವಿತರಣೆಯಾಗದೆ ಪರಿಶೀಲನಾ ಹಂತದಲ್ಲಿರುವವರಿಗೂ‌ ಮೇ-ಜೂನ್ ತಿಂಗಳಲ್ಲಿ ಪಡಿತರ ಸಾಮಾಗ್ರಿ‌ ವಿತರಿಸುವಂತೆ ಇತ್ತೀಚೆಗೆ ಆದೇಶ ನೀಡಿತ್ತು. ಆದರೆ ಈ ಮಧ್ಯೆ ಕುಂಟು ನೆಪ ಒಡ್ಡಿ ಇನ್ನೊಂದೆಡೆ ಬಡವರ ರಂದು ರೇಶನ್ ಕಾರ್ಡ್ ಅಮಾನತು ಮಾಡುವ ಮೂಲಕ ದ್ವಂದ್ವ ನೀತಿ ಅನುಸರಿಸುತ್ತಿದೆ. ಒಂದೆಡೆ ನೀಡಿದಂತೆ ನಟಿಸುವ ಸರಕಾರ ಇನ್ನೊಂದೆಡೆ ಕಸಿದು ಕೊಳ್ಳುತ್ತಿದೆ. ಇದು ಸರಿಯಾದ ಕ್ರಮವಲ್ಲ. ಸಂಕಷ್ಟದ ಸಮಯದಲ್ಲಿ ಸರಕಾರ ಸಂಪೂರ್ಣವಾಗಿ ಬಡವರ ಹಿತ ಕಾಪಾಡುವ ಕೆಲಸ ಮಾಡಬೇಕೇ ಹೊರತು ಕಸಿದುಕೊಳ್ಳುವ ಕೆಲಸಕ್ಕಿಳಿಯಬಾರದು ಎಂದು ಉಮ್ಮರ್ ಫಾರೂಕ್ ಆಗ್ರಹಿಸಿದ್ದಾರೆ. 

 ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ನಿಯೋಗದಲ್ಲಿ ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಪೇರಿಮಾರ್, ಯುವ ಕಾಂಗ್ರೆಸ್ ಮುಖಂಡ ಹಿಶಾಂ ಫರಂಗಿಪೇಟೆ, ಪುದು ಗ್ರಾ ಪಂ ಸದಸ್ಯರಾದ ರಝಾಕ್ ಅಮೆಮಾರ್, ಫೈಝಲ್ ಅಮೆಮಾರ್, ಯುವ ಕಾಂಗ್ರೆಸ್ ಸದಸ್ಯರಾದ ರಿಲ್ವಾನ್ ಅಮೆಮಾರ್, ಝಾಹಿದ್ ಮಾರಿಪಳ್ಳ, ಮುಸ್ತಫಾ ಅಮೆಮಾರ್ ಮೊದಲಾದವರು ಜೊತೆಗಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಕೋವಿಡ್ ಸಂಕಷ್ಟದ ಸಂದರ್ಭ ಬಿಪಿಎಲ್ ಕಾರ್ಡ್ ರದ್ದು : ಡಿಸಿಗೆ ಮನವಿ ಸಲ್ಲಿಸಿದ ಉಮ್ಮರ್ ಫಾರೂಕ್ Rating: 5 Reviewed By: karavali Times
Scroll to Top