ಪೇರಿಮಾರ್ : ಕೋವಿಡ್ ಟಾಸ್ಕ್ ಫೋರ್ಸ್ ಸಭೆ  - Karavali Times ಪೇರಿಮಾರ್ : ಕೋವಿಡ್ ಟಾಸ್ಕ್ ಫೋರ್ಸ್ ಸಭೆ  - Karavali Times

728x90

19 May 2021

ಪೇರಿಮಾರ್ : ಕೋವಿಡ್ ಟಾಸ್ಕ್ ಫೋರ್ಸ್ ಸಭೆ 

 

ಬಂಟ್ವಾಳ, ಮೇ 19, 2021 (ಕರಾವಳಿ ಟೈಮ್ಸ್) : ಮಾಜಿ ಸಚಿವ, ಮಂಗಳೂರು ಶಾಸಕ ಯು ಟಿ ಖಾದರ್ ಸೂಚನೆಯಂತೆ ಪುದು ಗ್ರಾಮದ ಪೇರಿಮಾರ್ ವಾರ್ಡಿನಲ್ಲಿ ಕೋವಿಡ್ ವೈರಸ್ ನಿರ್ಮೂಲನೆ ಮಾಡುವ ಸಲುವಾಗಿ ಕೋವಿಡ್-19 ವಾರ್ಡ್ ಮಟ್ಟದ ಟಾಸ್ಕ್ ಫೋರ್ಸ್ ಕಾರ್ಯಪಡೆ ಜನಜಾಗೃತಿ ಸಭೆ ಪೇರಿಮಾರ್ ಎಸ್ಸೆಸ್ಸೆಫ್ ಶಾಖಾ‌ ಕಛೇರಿಯಲ್ಲಿ ಮಂಗಳವಾರ ನಡೆಯಿತು. 

 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ ಅವರ ನೇತೃತ್ವದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಪುದು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು, ಹಾಲಿ ಸದಸ್ಯ ಎಂ. ಹಾಶೀರ್ ಪೇರಿಮಾರ್ ವಹಿಸಿದ್ದರು. 

 ಈ ಸಂದರ್ಭ ಮಾತನಾಡಿದ ಹಾಶೀರ್ ಪೇರಿಮಾರ್, ಕಾರ್ಯಪಡೆ ಸಮಿತಿಯಲ್ಲಿ ಸೇರಿದ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಸಂಸ್ಥೆಯಲ್ಲಿ ಗುರುತಿಸಿಕೊಂಡು ನಮ್ಮ ವಾರ್ಡಿನ ಸ್ವಚ್ಛತೆ ಮತ್ತು ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿದ ತಾವುಗಳು ಶ್ರಮದಾನ ಮೂಲಕ ಅನೇಕ ಕಾರ್ಯಕ್ರಮವನ್ನು ಮಾಡಿರುವುದು ಅತ್ಯಂತ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇದೇ ತರ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ನಾವುಗಳು ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸಿದರೆ ಕೋವಿಡ್ ನಿಯಂತ್ರಣ ಮಾಡಲು ಸುಲಭವಾಗಲಿದೆ. ಕೋರೋನಾ ಬಾಧಿತರನ್ನು ಶೋಚನೀಯ ಸ್ಥಿತಿಯಲ್ಲಿ ನೋಡಿದಾಗ ಧೈರ್ಯವನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು ಇಂತಹ ಸಂದರ್ಭದಲ್ಲಿ ಅವರಿಗೆ ಧೈರ್ಯವನ್ನು ತುಂಬಿದರೆ ಕೊರೊನಾ ರೋಗದಿಂದ ಮುಕ್ತರಾಗಲು ಸಾಧ್ಯ ಎಂದವರು ಅಭಿಪ್ರಾಯಪಟ್ಟರು. 

 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ ಎ ಮಾತನಾಡಿ, ಜನರು ಕೆಲವು ದಿನಗಳ ಮಟ್ಟಿಗಾದರೂ ಸಾರ್ವಜನಿಕವಾಗಿ ಸುತ್ತಾಟ ಕಡಿಮೆ ಮಾಡಿ ಸ್ವಯಂಪ್ರೇರಿತರಾಗಿ ಮನೆಯಲ್ಲಿದ್ದುಕೊಂಡು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ ಕೊರೊನಾ ರೋಗವನ್ನು ಹಿಮ್ಮೆಟ್ಟಿಸಲು ಕೈ ಜೋಡಿಸುವಂತೆ ಮನವಿ ಮಾಡಿಕೊಂಡರು. 

 ಮುಖ್ಯ ಅತಿಥಿಯಾಗಿದ್ದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, ವಾರ್ಡ್ ಮಟ್ಟದಲ್ಲಿ ಕೊರೋನ ನಿಯಂತ್ರಣ ಆದರೆ ಗ್ರಾಮದಲ್ಲಿ ನಿಯಂತ್ರಣ ಸಾಧ್ಯವಾಗುತ್ತದೆ. ಇದಕ್ಕೆ ಸಂಪೂರ್ಣವಾದ ಸಹಕಾರ ಗ್ರಾಮಸ್ಥರಿಂದ ಅಗತ್ಯ ಎಂದರು.

 ಗ್ರಾ.ಪಂ ಸದಸ್ಯರಾದ ಎಂ.ಎಂ ಅಖ್ತಾರ್ ಹುಸೈನ್ ಅಮ್ಮೆಮಾರ್, ಮನೋಜ್ ಆಚಾರ್ಯ, ಪುದು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಪ್ರಿಯಾ ಅವರು ಕೊರೊನಾ ನಿಯಂತ್ರಣದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. 

 ಸುಜೀರ್ ಪ್ರೌಢಶಾಲಾ ನಿವೃತ್ತ ಶಿಕ್ಷಕ ಮಹಮ್ಮದ್ ಮಾಸ್ಟರ್ ಸಭೆಯನ್ನು ಉದ್ಘಾಟಿಸಿ ಪ್ರಸ್ತಾವನೆಗೈದರು. ಗ್ರಾ.ಪಂ ಸದಸ್ಯರಾದ ಹುಸೈನ್ ಪಾಡಿ, ರಿಯಾಝ್ ಅಮ್ಮೆಮಾರ್, ರಶೀದಾ ಬಾನು, ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಪೇರಿಮಾರ್ ಶಾಖಾಧ್ಯಕ್ಷ ನಝೀರ್ ಪೇರಿಮಾರ್, ಮಂಗಳೂರು ಯುವ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಶೌಕತ್ ಆಲಿ ಮಾರಿಪಳ್ಳ, ಎಸ್ಕೆಎಸ್ಎಸ್ಎಫ್ ವಿಖಾಯ ಜಲಾಲಿಯಾ ನಗರ ಶಾಖೆಯ ಕನ್ವೀನರ್ ಫಾಝೀಲ್ ಬಾಲ್ದಬೆಟ್ಟು ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. 

 ಊರಿನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಪಿ.ಎಂ. ಸಿರಾಜ್ ಪೇರಿಮಾರ್, ಸಮದ್ ಪೇರಿಮಾರ್, ರಿಕಾಝ್ ಬಾಲ್ದಬೆಟ್ಟು, ರಮೀಝ್ ದೇವಸ್ಯ, ಆಮೀನ್ ಮಾಲೀಕ್ ಬಾಲ್ದಬೆಟ್ಟು, ಶಿಹಾಬ್ ಪೇರಿಮಾರ್, ಮುಸ್ತಾಫ ಪೇರಿಮಾರ್, ಹಂಝ ಪೇರಿಮಾರ್, ರಿಯಾಝ್ ಎಸ್.ಕೆ. ಬಾಲ್ದಬೆಟ್ಟು, ರಹೀಂ ಬಿ.ಆರ್. ಪೇರಿಮಾರ್, ಆಸೀಫ್ ಪೇರಿಮಾರ್, ಇಮ್ರಾನ್ ಖಾನಾ ದೇವಸ್ಯ, ಹಫೀಝ್ ದೇವಸ್ಯ, ಅಬ್ಬಾಸ್ ಆಶೀಕ್ ಪೇರಿಮಾರ್, ಅನ್ವರ್ ಹುಸೈನ್ ಪೇರಿಮಾರ್, ಸಲೀಂ ಪೇರಿಮಾರ್, ನೌಫಲ್ ಪೇರಿಮಾರ್, ಜುನೈದ್ ಪೇರಿಮಾರ್, ಸದೀದ್ ಪೇರಿಮಾರ್, ಇಕ್ಬಾಲ್ ಸ್ವಾದಿಕ್ ಬಾಲ್ದಬೆಟ್ಟು, ಇಸಾಕ್ ಬಾಲ್ದಬೆಟ್ಟು, ಉಮರಬ್ಬ ಪೇರಿಮಾರ್, ಇರ್ಫಾನ್ ಪೇರಿಮಾರ್, ಶಮ್ಮಾಸ್ ಪೇರಿಮಾರ್, ದಾವೂದ್ ಪೇರಿಮಾರ್, ಮುಹ್ಶಿನ್ ಪೇರಿಮಾರ್, ತಾಜುದ್ದೀನ್ ಪೇರಿಮಾರ್, ರಿಯಾಝ್ ಮಾರಿಪಳ್ಳ, ತಾಬಶೀರ್ ಪೇರಿಮಾರ್ ಹಾಗೂ ಪೇರಿಮಾರ್-ನಾಣ್ಯ ಅಂಗನವಾಡಿ ಕೇಂದ್ರದ ಶಿಕ್ಷಕಿ ಕುಸುಮ ಕುಮ್ಡೇಲು, ಪೇರಿಮಾರ್ ವಾರ್ಡಿನ ಆಶಾ ಕಾರ್ಯಕರ್ತೆ ಕುಸುಮ ನಾಣ್ಯ ಹಾಗೂ ವಾರ್ಡಿನ ನಾಗರಿಕರು. ಉಪಸ್ಥಿತರಿದ್ದರು. ಉನೈಸ್ ಬಾಲ್ದಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಪೇರಿಮಾರ್ : ಕೋವಿಡ್ ಟಾಸ್ಕ್ ಫೋರ್ಸ್ ಸಭೆ  Rating: 5 Reviewed By: karavali Times
Scroll to Top