ಬೆಡ್ ಬ್ಲಾಕ್ ದಂಧೆಗೆ ಕೋಮು ಬಣ್ಣ ಬಳಿದ ಸಂಸದ ಸೂರ್ಯಗೆ ಪ್ರಶ್ನೆಗಳ ಸುರಿಮಳೆ ಮೂಲಕ ಕಾಲೆಳೆದ ಮಾಜಿ ಸಚಿವ ಯು.ಟಿ. ಖಾದರ್ - Karavali Times ಬೆಡ್ ಬ್ಲಾಕ್ ದಂಧೆಗೆ ಕೋಮು ಬಣ್ಣ ಬಳಿದ ಸಂಸದ ಸೂರ್ಯಗೆ ಪ್ರಶ್ನೆಗಳ ಸುರಿಮಳೆ ಮೂಲಕ ಕಾಲೆಳೆದ ಮಾಜಿ ಸಚಿವ ಯು.ಟಿ. ಖಾದರ್ - Karavali Times

728x90

5 May 2021

ಬೆಡ್ ಬ್ಲಾಕ್ ದಂಧೆಗೆ ಕೋಮು ಬಣ್ಣ ಬಳಿದ ಸಂಸದ ಸೂರ್ಯಗೆ ಪ್ರಶ್ನೆಗಳ ಸುರಿಮಳೆ ಮೂಲಕ ಕಾಲೆಳೆದ ಮಾಜಿ ಸಚಿವ ಯು.ಟಿ. ಖಾದರ್

ಬೆಂಗಳೂರು, ಮೇ 05, 2021 (ಕರಾವಳಿ ಟೈಮ್ಸ್) : ಬೆಡ್ ಬ್ಲಾಕ್ ದಂಧೆಗೆ ಕೋಮು ಬಣ್ಣದ ಲೇಪ ಅಂಟಿಸಿರುವ ಬಗ್ಗೆ ಸಂಬಂಧಿಸಿದಂತೆ ಸುದೀರ್ಘವಾದ ಪ್ರಶ್ನೆಗಳ ಮೂಲಕ ಮಾಜಿ ಸಚಿವ, ಮಂಗಳೂರು ಶಾಸಕ ಯು ಟಿ ಖಾದರ್ ಅವರು ಸಂಸದ ತೇಜಸ್ವಿ ಸೂರ್ಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಿಬಿಎಂಪಿ ವ್ಯಾಪ್ತಿಯಲ್ಲಿ 8 ವಲಯಗಳಿದ್ದು ಅದರಲ್ಲಿ ಬೆಂಗಳೂರು ದಕ್ಷಿಣ ವಲಯ ವಾರ್ ರೂಮ್ ಜವಾಬ್ದಾರಿ ತುಳಸಿ ಮದ್ದಿನೇನಿ ಹಾಗೂ ವೀರಭದ್ರಯ್ಯ ಅವರದ್ದಾಗಿದ್ದು ದಕ್ಷಿಣ ವಲಯಕ್ಕೆ ಸಂಬಂಧಿಸಿದ ಸರ್ಪರಾಜ್ ಖಾನ್ ಅವರ ವಿರುದ್ದ ಆರೋಪ ಮಾಡಿದ್ದು ಏಕೆ?

ತುಳಸಿ ಮದ್ದಿನೇನಿ ಹಾಗೂ ವೀರಭದ್ರಯ್ಯ ನವರೇ ಜಾಹಿರಾತು ಕರೆದು ಅರ್ಜಿ ಸ್ವೀಕರಿಸಿ ವಾಕಿನ್ ಇಂಟರ್ವ್ಯೂ  ನಡೆಸಿ 214 ಸಿಬ್ಬಂದಿ ನೇಮಕಾತಿ ಮಾಡಿದ್ದಾರೆ. ಆ ಪೈಕಿ 17 ಮಂದಿ ಮಾತ್ರ ಅಲ್ಪ ಸಂಖ್ಯಾತಸಮುದಾಯಕ್ಕೆ ಸೇರಿದವರು, ಹಾಗೇ 7 ರಿಂದ 8 ವೈದ್ಯರ ಪೈಕಿ 1 ಇಬ್ಬರು ಮಾತ್ರ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಹೀಗಿರುವಾಗ ಪ್ರಕರಣದಲ್ಲಿ ಒಂದು ಸಮುದಾಯವನ್ನೇ ಗುರಿಯಾಗಿರಿಸಿ ಹೆಸರು ಪ್ರಸ್ತಾಪಿಸಿರುವ ಹಿಂದಿನ ಉದ್ದೇಶ ಏನು?

ಇದು ಕಾಲ್ ಸೆಂಟರ್ ಮಾದರಿ ಕೆಲಸವಾಗಿದ್ದು ಕರೆ ಸ್ವೀಕರಿಸಿ ಮಾಹಿತಿ ನೀಡುವುದಷ್ಟೇ ಇವರ ಕೆಲಸ, ಇಷ್ಟಕ್ಕೂ ಈ ಅಧಿಕಾರಿಗಳು ವಾಕಿನ್ ಇಂಟರ್ ವ್ಯೂ ಮಾಡಿದಾಗ ನಿಮಗೆ ಮಾಹಿತಿ ಇರಲಿಲ್ಲವೇ? ದಕ್ಷಿಣ ವಲಯದ ಸಂಬಂಧಿಸಿದ ಅಧಿಕಾರಿ ಯಾರು ಎಂಬುದು ನಿಮಗೆ ಗೊತ್ತಿರಲಿಲ್ಲವೇ? ಮಾಹಿತಿ ಇಲ್ಲದೇ ಮಾತನಾಡಿದ್ದರೆ ಅದು ನಿಮ್ಮ ಅಪ್ರಬುದ್ದತೆ ತೋರಿಸುತ್ತದೆ ಸಂಸದರಾಗಿರುವವರಿಗೆ ಮಾಹಿತಿಯ ಕೊರತೆ ಇದೆ ಎಂಬ ಸಂದೇಶ ರವಾನೆಯಾಗುತ್ತದೆ. ಇನ್ನೂ ವಿಚಾರ ಗೊತ್ತಿದ್ದು ಗೊತ್ತಿಲ್ಲದವರಂತೆ ಆರೋಪಿಸಿರುವುದರ ಹಿಂದಿನ ದುರುದ್ದಶವೇನು?

ಇದು ಚಾಮರಾಜನಗರ ಸಾವಿನ ಘಟನೆಯನ್ನು ಜನರ ಗಮನದಿಂದ ಬೇರೆಡೆಗೆ ಸೆಳೆಯುವ ಯತ್ನವೇ, ಚಾಮರಾಜನಗರದಲ್ಲಿ ಜನ ಸಾಲು ಸಾಲಾಗಿ ಸತ್ತಾಗ ನೀವು ತುಟಿ ಬಿಚ್ಚಲಿಲ್ಲ ಏಕೆ?

ರಾಜ್ಯದಲ್ಲಿ ಕೊರತೆಯಾಗಿರುವ ಆಕ್ಸಿಜನ್ ಪೂರೈಕೆಗೆ ಕೇಂದ್ರದಿಂದ ನೆರವು ಕೊಡಿಸಲು ಇದೇ ಆಸಕ್ತಿ ತೋರಿಸಲ್ಲ ಏಕೆ? ಈಗಾಗಲೇ ಸಿಸಿಬಿ ತನಿಖೆ ನಡೆಸುತ್ತಿದ್ದು ತನಿಖೆಯಲ್ಲಿ ನೀವು ಹೆಸರಿಸಿದ ವ್ಯಕ್ತಿಗಳ ಪಾತ್ರವಿಲ್ಲದೇ ಇದ್ದರೆ ನೀವು ಕ್ಷಮೆ ಕೇಳುವಿರಾ ಅಥವಾ ರಾಜೀನಾಮೆ ನೀಡುವಿರಾ?

ನಿಮ್ಮ ಆರೋಪ ಉಲ್ಟಾ ಚೋರ್ ಚೌಕಿದಾರ್ ಕೋ ದಾಟ ಎಂಬಂತಿದೆ, ನಿಮ್ಮ ಸರಕಾರದ ಅಡಿಯಲ್ಲೇ ದಂಧೆ ನಡೆಯುತ್ತಿದ್ದರು ಅದನ್ನ ತಡೆಯಲಾಗದೆ ಈಗ ಇಷ್ಟೆಲ್ಲಾ ಹೈಡ್ರಾಮಾ ಏಕೆ? ಮಗುವಿಗೆ ಚಿವುಟೋದು ನೀವೇ

ತೊಟ್ಟಿಲು ತೂಗೋದೂ ನೀವೇ, ಆತ್ಮ ನಿರ್ಭರ ಭಾರತದ ಹೆಸರಲ್ಲಿ ಆತ್ಮ ಬರ್ಭರತೆ ಸೃಷ್ಠಿಸುತ್ತಿದ್ದೀರಿ ಏಕೆ? ಎಂದು ಶಾಸಕ ಯು ಟಿ ಖಾದರ್ ಪ್ರಶ್ನಿಸುವ ಮೂಲಕ ಸಂಸದ ತೇಜಸ್ವಿ ಸೂರ್ಯ ಅವರ ಕಾಲೆಳೆದಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬೆಡ್ ಬ್ಲಾಕ್ ದಂಧೆಗೆ ಕೋಮು ಬಣ್ಣ ಬಳಿದ ಸಂಸದ ಸೂರ್ಯಗೆ ಪ್ರಶ್ನೆಗಳ ಸುರಿಮಳೆ ಮೂಲಕ ಕಾಲೆಳೆದ ಮಾಜಿ ಸಚಿವ ಯು.ಟಿ. ಖಾದರ್ Rating: 5 Reviewed By: karavali Times
Scroll to Top