ಕೋವಿಡ್ ಪರಿಣಾಮ : ಜೆಇಇ ಮೇನ್‌ ಮೇ ಸೆಶನ್ ಪರೀಕ್ಷೆ ಮುಂದೂಡಿ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಘೋಷಣೆ - Karavali Times ಕೋವಿಡ್ ಪರಿಣಾಮ : ಜೆಇಇ ಮೇನ್‌ ಮೇ ಸೆಶನ್ ಪರೀಕ್ಷೆ ಮುಂದೂಡಿ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಘೋಷಣೆ - Karavali Times

728x90

4 May 2021

ಕೋವಿಡ್ ಪರಿಣಾಮ : ಜೆಇಇ ಮೇನ್‌ ಮೇ ಸೆಶನ್ ಪರೀಕ್ಷೆ ಮುಂದೂಡಿ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಘೋಷಣೆ

 ನವದೆಹಲಿ, ಮೇ 05, 2021 (ಕರಾವಳಿ ಟೈಮ್ಸ್) : ದೇಶಾದ್ಯಂತ  ಕೋವಿಡ್ ಎರಡನೇ ಅಲೆ ವ್ಯಾಕಪವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜಂಟಿ ಪ್ರವೇಶ ಪರೀಕ್ಷೆ - ಮೇನ್ (ಜೆಇಇ ಮೇನ್) ಮೇ 2021ರ ಸೆಶನ್ ಅನ್ನು ಮುಂದೂಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಂಗಳವಾರ ಪ್ರಕಟಿಸಿದ್ದಾರೆ.

ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಎನ್‌ಟಿಎಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ ಎಂದು ಪೋಖ್ರಿಯಾಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಜೆಇಇ (ಮೇನ್) - 2021 ಮೇ ಸೆಶನ್ ಅನ್ನು 2021 ರ  ಮೇ 24, 25, 26, 27, 28 ರಂದು ನಡೆಸಲು ನಿಗದಿಪಡಿಸಲಾಗಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಜೆಇಇ (ಮೇನ್) - 2021 ಮೇ ಸೆಶನ್  ಅನ್ನು ಮುಂದೂಡಲಾಗುತ್ತಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿದೆ.

 ಈ ಹಿಂದೆ ದೇಶಾದ್ಯಂತ ಕೋವಿಡ್-19 ಪ್ರಕರಣಗಳ ಹೆಚ್ಚಳಕ್ಕಾಗಿ ಜೆಇಇ-ಮೇನ್ ಎಪ್ರಿಲ್ ಸೆಶನ್ ಅನ್ನು ಮುಂದೂಡಲಾಗಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಎಪ್ರಿಲ್ 27, 28 ಮತ್ತು 30 ರಂದು ನಿಗದಿಯಾಗಿದ್ದ ಜೆಇಇ (ಮೇನ್ ) - 2021 ಎಪ್ರಿಲ್ ಸೆಶನ್ ಅನ್ನು  ಈಗಾಗಲೇ ಮುಂದೂಡಲಾಗಿದೆ. ಎಪ್ರಿಲ್ ಮತ್ತು ಮೇ ಸೆಶನ್ ಗಳ ಮರು ಹೊಂದಿಸುವಿಕೆಯನ್ನು ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ. ಮೇ ಸೆಶನ್ ನ ನೋಂದಣಿಯನ್ನು ನಂತರದ ಹಂತದಲ್ಲಿ ಪ್ರಕಟಿಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ. ಮೊದಲ ಎರಡು ಸೆಷನ್‌ಗಳು ಈಗಾಗಲೇ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಪೂರ್ಣಗೊಂಡಿವೆ.

ಪರೀಕ್ಷೆಗಳಿಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳಿಗಾಗಿ ಅಧಿಕೃತ ಎನ್‌ಟಿಎ ವೆಬ್‌ಸೈಟ್ www.nta.ac.in ಹಾಗೂ https://jeemain.nta.nic.in/ ಗೆ ಭೇಟಿ ನೀಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕೋವಿಡ್ ಪರಿಣಾಮ : ಜೆಇಇ ಮೇನ್‌ ಮೇ ಸೆಶನ್ ಪರೀಕ್ಷೆ ಮುಂದೂಡಿ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಘೋಷಣೆ Rating: 5 Reviewed By: karavali Times
Scroll to Top