ಕೋವಿಡ್ ಬಾಧಿಸಿ ಮೃತಪಟ್ಟ ಹಿಂದೂ ಮಹಿಳಾ ಪ್ರೊಫೆಸರ್ ಅಂತಿಮ ಕ್ರಿಯೆ ನೆರವೇರಿಸಿದ ರಾಜ್ಯಸಭಾ ಸದಸ್ಯ ಡಾ. ನಾಸೀರ್ ಹುಸೇನ್ - Karavali Times ಕೋವಿಡ್ ಬಾಧಿಸಿ ಮೃತಪಟ್ಟ ಹಿಂದೂ ಮಹಿಳಾ ಪ್ರೊಫೆಸರ್ ಅಂತಿಮ ಕ್ರಿಯೆ ನೆರವೇರಿಸಿದ ರಾಜ್ಯಸಭಾ ಸದಸ್ಯ ಡಾ. ನಾಸೀರ್ ಹುಸೇನ್ - Karavali Times

728x90

20 May 2021

ಕೋವಿಡ್ ಬಾಧಿಸಿ ಮೃತಪಟ್ಟ ಹಿಂದೂ ಮಹಿಳಾ ಪ್ರೊಫೆಸರ್ ಅಂತಿಮ ಕ್ರಿಯೆ ನೆರವೇರಿಸಿದ ರಾಜ್ಯಸಭಾ ಸದಸ್ಯ ಡಾ. ನಾಸೀರ್ ಹುಸೇನ್

  


ಬೆಂಗಳೂರು, ಮೇ 21, 2021 (ಕರಾವಳಿ ಟೈಮ್ಸ್) :  ಕೋವಿಡ್ ವೈರಸ್ ಎರಡೇ ಅಲೆಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬ್ರಾಹ್ಮಣ ಮಹಿಳಾ ಪ್ರೊಫೆಸರ್ ಸಾವಿತ್ರಿ ವಿಶ್ವನಾಥನ್ ಅವರ ಅಂತಿಮ ವಿಧಿ ವಿಧಾನವನ್ನು ನೆರವೇರಿಸಲು ಯಾರೂ ಇಲ್ಲದಾದಾಗ ಮುಸ್ಲಿಂ ಸಂಸದರಾಗಿರುವ ನಾಸೀರ್ ಹುಸೇನ್ ಅವರು ನೆರವೇರಿಸಿ ಸುದ್ದಿಯಾಗಿದ್ದಾರೆ. 

 ಕೊರೊನಾ ಸೋಂಕಿನ ವ್ಯಾಪಕತೆ ಎಲ್ಲಾ ಜಾತಿ-ಧರ್ಮ, ವರ್ಗಗಳ ಎಲ್ಲೆ ಮೀರಿ ಕೇವಲ ಮಾನವೀಯತೆಯ ಹಲವು ಪಾಠಗಳನ್ನು ಕಲಿಸಿಕೊಟ್ಟಿದ್ದು, ಈ ಮಧ್ಯೆ ಇಂತಹದೇ ಉದಾಹರಣೆಗೆ ಇದೀಗ ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸೀರ್ ಹುಸೇನ್ ಕೂಡಾ ಸೇರಿದ್ದಾರೆ. 

 ಅಸ್ಥಿ ವಿಸರ್ಜನೆ ಸೇರಿದಂತೆ ಹಿಂದೂ ಸಂಪ್ರದಾಯದ ಪ್ರಕಾರ ಪ್ರೊ. ಸಾವಿತ್ರಿ ವಿಶ್ವನಾಥನ್ ಅವರ ಅಂತಿಮ ಕ್ರಿಯೆಯನ್ನು ನಾಸಿರ್ ಹುಸೇನ್ ಅವರೇ ನೆರವೇರಿಸಿದ್ದಾರೆ. 

ಸಾವಿತ್ರಿ ವಿಶ್ವನಾಥನ್ ಅವರು ದೆಹಲಿ ವಿಶ್ವವಿದ್ಯಾಲಯದ  ಜಪಾನಿ ಅಧ್ಯಯನ ಪೀಠದ ನಿವೃತ್ತ ಪ್ರಾಧ್ಯಾಪಕಿಯಾಗಿದ್ದರು. ನಿವೃತ್ತಿಯ ಬಳಿಕ ಬೆಂಗಳೂರಿನ ತನ್ನ ಸಹೋದರಿ ಅತ್ರೇಯ ಜೊತೆಗೆ ಸಾವಿತ್ರಿ ವಾಸವಾಗಿದ್ದರು.  ಅಕ್ಕ-ತಂಗಿ ಇಬ್ಬರಿಗೂ ಕೋವಿಡ್ ಭಾದಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಸಾವಿತ್ರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಅತ್ರೇಯ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸಂಬಂಧಿಕರೆಲ್ಲರೂ ದೂರದ ಊರಿನಲ್ಲಿ ಇದ್ದಿದ್ದರಿಂದ, ಯಾರಿಗೂ ಬೆಂಗಳೂರಿಗೆ ಬರಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರು ಎಲ್ಲಾ ಕ್ರಿಯೆಗಳನ್ನು ನಡೆಸಿ, ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆಯನ್ನೂ ಮಾಡಿದ್ದಾರೆ. ನಾಸೀರ್ ಹುಸೇನ್ ಅವರ ಈ ಕೆಲಸಕ್ಕೆ ಇದೀಗ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. 

 ಮೇ 18 ರಂದು ಮೈಸೂರಿನಲ್ಲಿ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದ್ದಾರೆ. ಅಂತಿಮ ಕಾರ್ಯ ಮಾಡಲೇಬೇಕಾದ ಕಾರಣಕ್ಕೆ ಧರ್ಮ ಸಹಿಷ್ಣುತೆಯ ಪರಿಕಲ್ಪನೆಯಲ್ಲಿ ಅಸ್ಥಿ ವಿಸರ್ಜನೆ ಮಾಡಿದ್ದೇನೆ. ಬ್ರಾಹ್ಮಣ ಸಂಪ್ರದಾಯದ ಪ್ರಕಾರ ವಿಧಿ ವಿಧಾನಗಳನ್ನು ಮಾಡಿದ ತೃಪ್ತಿ ನನಗಿದೆ. ಅರ್ಚಕರು ಹೇಳಿದ ಹಾಗೆ ಪೂಜಾ ವಿಧಿ ವಿಧಾನ ಪೂರೈಸಿದ್ದೇನೆ, ತಮ್ಮ ಸ್ನೇಹಿತೆಗಾಗಿ ಈ ಕೆಲಸ ಮಾಡಿರುವುದು ನನಗೆ ಸಮಾಧಾನ ತಂದಿದೆ ಎಂದು ಡಾ ನಾಸಿರ್ ಹುಸೇನ್ ತಿಳಿಸುತ್ತಾರೆ. 

 ವಿಶ್ವನಾಥನ್ ಚೈನೀಸ್ ಮತ್ತು ಜಪಾನೀಸ್ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದರು. ಜಪಾನೀಸ್ ಭಾಷೆ ಮತ್ತು ಅಧ್ಯಯನಗಳಿಗೆ ಅಪಾರ ಕೊಡುಗೆ ನೀಡಿದ್ದ ಅವರು ಜಪಾನ್-ಇಂಡಿಯಾ ಎಮಿನೆಂಟ್ ಪರ್ಸನ್ಸ್ ಗ್ರೂಪ್‌ನ ಸದಸ್ಯರಾಗಿದ್ದರು. ತಮಿಳುನಾಡು ಮೂಲದ ಅವರು 25 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಕೋವಿಡ್ ಬಾಧಿಸಿ ಮೃತಪಟ್ಟ ಹಿಂದೂ ಮಹಿಳಾ ಪ್ರೊಫೆಸರ್ ಅಂತಿಮ ಕ್ರಿಯೆ ನೆರವೇರಿಸಿದ ರಾಜ್ಯಸಭಾ ಸದಸ್ಯ ಡಾ. ನಾಸೀರ್ ಹುಸೇನ್ Rating: 5 Reviewed By: karavali Times
Scroll to Top