ತುಂಬೆ ಡ್ಯಾಂ ನೀರಿನ ಮಟ್ಟ ಯಥೇಚ್ಛ : ಮಹಾನಗರ ವಾಸಿಗಳಿಗೆ ಈ ಬಾರಿ ನೀರಿನ ಬವಣೆ ಇಲ್ಲ - Karavali Times ತುಂಬೆ ಡ್ಯಾಂ ನೀರಿನ ಮಟ್ಟ ಯಥೇಚ್ಛ : ಮಹಾನಗರ ವಾಸಿಗಳಿಗೆ ಈ ಬಾರಿ ನೀರಿನ ಬವಣೆ ಇಲ್ಲ - Karavali Times

728x90

23 May 2021

ತುಂಬೆ ಡ್ಯಾಂ ನೀರಿನ ಮಟ್ಟ ಯಥೇಚ್ಛ : ಮಹಾನಗರ ವಾಸಿಗಳಿಗೆ ಈ ಬಾರಿ ನೀರಿನ ಬವಣೆ ಇಲ್ಲ

ಬಂಟ್ವಾಳ, ಮೇ 23, 2021 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರಕ್ಕೆ ಕುಡಿಯವ ನೀರು ಸರಬರಾಜು ಮಾಡುವ ಸಲುವಾಗಿ ತುಂಬೆಯಲ್ಲಿ ನಿರ್ಮಿಸಲಾಗಿರುವ ತುಂಬೆ ಡ್ಯಾಂನಲ್ಲಿ ಈ ಬಾರಿ ಮೇ 23ರ ವೇಳೆಗೆ ನೀರಿನ ಹರಿವು ಯಥೇಚ್ಛವಾಗಿದ್ದು, ಮಹಾನಗರದ ಜನರಿಗೆ ಈ ಬಾರಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಬಾರದಂತೆ ಕಂಡು ಬರುತ್ತಿದೆ. 


    ಮಳೆಗಾಲ ಸಕಾಲದಲ್ಲಿ ಪ್ರಾರಂಭವಾಗುವ ಬಗ್ಗೆ ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನಲೆಯಲ್ಲಿ ಜೂನ್ 1ರ ವೇಳೆಗೆ ಮುಂಗಾರು ಪ್ರಾರಂಭವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಇದರಿಂದಾಗಿ ಮಹಾನಗರ ಜನ ನಿಟ್ಟುಸಿರುವ ಬಿಡುವಂತಾಗಿದೆ. ಸಕಾಲದಲ್ಲಿ ಮುಂಗಾರು ಆರಂಭವಾದದ್ದೇ ಆದರಲ್ಲಿ ಈ ಬಾರಿ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣದಲ್ಲಿ ಕುಸಿತ ಕಂಡು ಬರುವ ಯಾವುದೇ ಸೂಚನೆ ಇಲ್ಲದೆ ಇದ್ದು, ವರ್ಷಪೂರ್ತಿ ಕುಡಿಯುವ ನೀರಿನ ಸಮಸ್ಯೆ ಬರಲಾರದು.


    ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಅಧಿಕಾರಿಗಳ ತಂಡ ತುಂಬೆ ಡ್ಯಾಂನ ಸ್ಥಿತಿಯನ್ನು ಅವಲೋಕನ ನಡೆಸುತ್ತಿದ್ದು, ನೀರಿನ ಒಳ ಹರಿವು ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ತುಂಬೆ ಡ್ಯಾಂ ನೀರಿನ ಮಟ್ಟ ಯಥೇಚ್ಛ : ಮಹಾನಗರ ವಾಸಿಗಳಿಗೆ ಈ ಬಾರಿ ನೀರಿನ ಬವಣೆ ಇಲ್ಲ Rating: 5 Reviewed By: karavali Times
Scroll to Top