10,11,12ನೇ ತರಗತಿ ಸಾಧನೆ ಆಧಾರದಲ್ಲಿ 12ನೇ ತರಗತಿ ಫಲಿತಾಂಶ : ಕೋರ್ಟಿಗೆ ಸಿಬಿಎಸ್‍ಇ ವರದಿ - Karavali Times 10,11,12ನೇ ತರಗತಿ ಸಾಧನೆ ಆಧಾರದಲ್ಲಿ 12ನೇ ತರಗತಿ ಫಲಿತಾಂಶ : ಕೋರ್ಟಿಗೆ ಸಿಬಿಎಸ್‍ಇ ವರದಿ - Karavali Times

728x90

17 June 2021

10,11,12ನೇ ತರಗತಿ ಸಾಧನೆ ಆಧಾರದಲ್ಲಿ 12ನೇ ತರಗತಿ ಫಲಿತಾಂಶ : ಕೋರ್ಟಿಗೆ ಸಿಬಿಎಸ್‍ಇ ವರದಿ

ನವದೆಹಲಿ, ಜೂನ್ 17, 2021 (ಕರಾವಳಿ ಟೈಮ್ಸ್) : 12ನೇ ತರಗತಿ ವಿದ್ಯಾರ್ಥಿಗಳಿಗೆ ಈ ಬಾರಿ ನೀಡುವ ಗ್ರೇಡ್ ಹಾಗೂ ಮೌಲ್ಯಮಾಪನ ಮಾನದಂಡಗಳ ಬಗ್ಗೆ ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‍ಇ) ವರದಿ ತಯಾರಿಸಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿದೆ. 

10 ಮತ್ತು 11ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಸಾಧನೆ ಮತ್ತು ಫಲಿತಾಂಶವನ್ನು ಆಧರಿಸಿ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಒಟ್ಟು ಅಂಕಗಳನ್ನು ನೀಡಲಾಗುತ್ತದೆ. ಶೇಕಡಾ 40ರಷ್ಟು ಅಂಕಗಳು ವಿದ್ಯಾರ್ಥಿಯ 12ನೇ ತರಗತಿಯ ಹಿಂದಿನ ಪರೀಕ್ಷೆಗಳನ್ನು ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಗೆ ಸಲ್ಲಿಸಿರುವ ಮೌಲ್ಯಮಾಪನ ಮಾನ ದಂಡಗಳ ಬಗ್ಗೆ ಸಿಬಿಎಸ್ಇ ಹೇಳಿದೆ.

ಶೇಕಡಾ 30ರಷ್ಟು ವಿದ್ಯಾರ್ಥಿಯು 11ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ತೆಗೆದುಕೊಂಡ ಅಂಕಗಳು, ಶೇಕಡಾ 30ರಷ್ಟು 10ನೇ ತರಗತಿಯ ಮೂರು ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳು ಯಾವ ಪರೀಕ್ಷೆಯಲ್ಲಿ ಬಂದಿರುತ್ತದೋ ಅದರಿಂದ ಸೇರಿಸಿ ಹಾಗೂ ಉಳಿದ ಶೇಕಡಾ 40ನ್ನು 12ನೇ ತರಗತಿಯ ಈ ಹಿಂದಿನ ಪರೀಕ್ಷೆಗಳಲ್ಲಿ ತೆಗೆದುಕೊಂಡ ಅಂಕಗಳನ್ನು ಆಧರಿಸಿ ಫಲಿತಾಂಶ ನೀಡಲಾಗುತ್ತದೆ ಎಂದು ವರದಿ ಸಲ್ಲಿಸಲಾಗಿದೆ. 

ಮೂರೂ ವರ್ಷಗಳ ಅಂಕಗಳನ್ನು ತೆಗೆದುಕೊಂಡರೂ ವಿದ್ಯಾರ್ಥಿ ಅರ್ಹತಾ ಮಾನದಂಡವನ್ನು ಪೂರೈಸದಿದ್ದರೆ ಅವರನ್ನು ಅಗತ್ಯ ಪುನರಾವರ್ತನೆ ಅಥವಾ ವರ್ಗ ವಿಭಾಗವೆಂದು ಪರಿಗಣಿಸಲಾಗುತ್ತದೆ. ಅರ್ಹ ತೇರ್ಗಡೆ ಮಾನದಂಡಗಳನ್ನು ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಸಿಬಿಎಸ್ಇ ನಡೆಸುವ 12ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಮತ್ತೆ ತೆಗೆದುಕೊಳ್ಳಬಹುದು ಎಂದು ಸಿಬಿಎಸ್ಇ ಪರ ಕೋರ್ಟ್ ಗೆ ಹಾಜರಾದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಹೇಳಿದ್ದಾರೆ.

ಪ್ರಸ್ತುತ ಕಾರ್ಯವಿಧಾನದ ಮೂಲಕ ಅಂಕಗಳು/ ಶ್ರೇಣೀಕರಣದಿಂದ ತೃಪ್ತರಾಗದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಭೌತಿಕ ಪರೀಕ್ಷೆಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಉತ್ತಮವಾಗಿ ಅಥವಾ ತಮ್ಮ ಅಂಕಗಳನ್ನು ಸುಧಾರಿಸಬಹುದು, ಕೋವಿಡ್ ಪರಿಸ್ಥಿತಿ ತಿಳಿಗೊಂಡ ನಂತರ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದರು.

ಜುಲೈ 31ರ ವೇಳೆಗೆ ಸಿಬಿಎಸ್‍ಇ 12ನೇ ತರಗತಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಇದೇ ವೇಳೆ ಅವರು ಹೇಳಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: 10,11,12ನೇ ತರಗತಿ ಸಾಧನೆ ಆಧಾರದಲ್ಲಿ 12ನೇ ತರಗತಿ ಫಲಿತಾಂಶ : ಕೋರ್ಟಿಗೆ ಸಿಬಿಎಸ್‍ಇ ವರದಿ Rating: 5 Reviewed By: karavali Times
Scroll to Top