ಬಿಜೆಪಿ ನೇತೃತ್ವದ ಸರಕಾರಗಳು ಸಂಪೂರ್ಣ ವಿಫಲವಾಗಿದ್ದು, ಕೈ ಕಾರ್ಯಕರ್ತರು ಜನರಿಗಾಗಿ ಕೆಲಸ ನಿರ್ವಹಿಸಿ : ಖಾದರ್ ಸಲಹೆ - Karavali Times ಬಿಜೆಪಿ ನೇತೃತ್ವದ ಸರಕಾರಗಳು ಸಂಪೂರ್ಣ ವಿಫಲವಾಗಿದ್ದು, ಕೈ ಕಾರ್ಯಕರ್ತರು ಜನರಿಗಾಗಿ ಕೆಲಸ ನಿರ್ವಹಿಸಿ : ಖಾದರ್ ಸಲಹೆ - Karavali Times

728x90

23 June 2021

ಬಿಜೆಪಿ ನೇತೃತ್ವದ ಸರಕಾರಗಳು ಸಂಪೂರ್ಣ ವಿಫಲವಾಗಿದ್ದು, ಕೈ ಕಾರ್ಯಕರ್ತರು ಜನರಿಗಾಗಿ ಕೆಲಸ ನಿರ್ವಹಿಸಿ : ಖಾದರ್ ಸಲಹೆ

ಬಂಟ್ವಾಳ, ಜೂನ್ 23, 2021 (ಕರಾವಳಿ ಟೈಮ್ಸ್) : ಕ್ಷೇತ್ರ ವಿಂಗಡನೆಯ ಬಳಿಕ ಇರಾ ಗ್ರಾಮದ ಅಭಿವೃದ್ದಿಯನ್ನು ಆದ್ಯತೆಯ ಮೇಲೆ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲೂ ಇಲ್ಲಿನ ನಾಯಕರ ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಮತ್ತಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಬದ್ದನಾಗಿದ್ದೇನೆ ಎಂದು ಮಂಗಳೂರು ಶಾಸಕ ಯು ಟಿ ಖಾದರ್ ಭರವಸೆ ನೀಡಿದರು. 

ಇರಾ ವಲಯ ಕಾಂಗ್ರೆಸ್ ವತಿಯಿಂದ ದಿವಂಗತ ರವೀಂದ್ರ ಕರ್ಕೇರ ಅವರ ಮನೆಯಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಎಲ್ಲಾ ಸ್ಥರಗಳಲ್ಲೂ ವಿಫಲವಾಗಿದ್ದು, ಜನರ ವಿಶ್ವಾಸ ಸಂಪೂರ್ಣ ಕಳೆದುಕೊಂಡಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಜನರ ಸೇವೆ ಮಾಡಲು ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೇರಬೇಕಾಗಿರುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಜನರಿಗಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. 

ಬಂಟ್ವಾಳ ತಾ ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಿ ಪಂ ಸದಸ್ಯೆ ಮಮತಾ ಡಿ ಎಸ್ ಗಟ್ಟಿ, ಗ್ರಾ ಪಂ ಅಧ್ಯಕ್ಷೆ ಆಗ್ನೆಸ್ ಡಿ’ಸೋಜ, ಉಪಾಧ್ಯಕ್ಷ ಮೊಯಿದಿನ್ ಕುಂಞÂ, ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಂಪಿಲ, ಪ್ರಮುಖರಾದ ಅಚ್ಯುತ ಪೂಜಾರಿ, ಉಸ್ಮಾನ್ ಕುರಿಯಾಡಿ, ಪುಷ್ಪಲತಾ ಕರ್ಕೇರಾ, ನಳಿನಾಕ್ಷಿ, ಸಿ ಎಚ್ ಮುಹಮ್ಮದ್ ಹಾಜಿ, ಎಂ ಬಿ ಉಮ್ಮರ್, ಯಾಕೂಬ್, ಪ್ರತಾಪ್ ಕರ್ಕೇರಾ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. 

ಗ್ರಾ ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಸ್ವಾಗತಿಸಿ, ವಲಯ ಕಾಂಗ್ರೆಸ್ ಅಧ್ಯಕ್ಷ ಅಶ್ರಫ್ ಸಂಪಿಲ ವಂದಿಸಿದರು. 


  • Blogger Comments
  • Facebook Comments

0 comments:

Post a Comment

Item Reviewed: ಬಿಜೆಪಿ ನೇತೃತ್ವದ ಸರಕಾರಗಳು ಸಂಪೂರ್ಣ ವಿಫಲವಾಗಿದ್ದು, ಕೈ ಕಾರ್ಯಕರ್ತರು ಜನರಿಗಾಗಿ ಕೆಲಸ ನಿರ್ವಹಿಸಿ : ಖಾದರ್ ಸಲಹೆ Rating: 5 Reviewed By: karavali Times
Scroll to Top