ದುಃಖಿತ ಜನರೊಂದಿಗೆ ಕರುಣೆ ತೋರುವ ಹೃದಯ ವೈಶಾಲ್ಯತೆ ಮುಂದುವರಿಸಿ : ಕೈ ಕಾರ್ಯಕರ್ತರಿಗೆ ಮಾಜಿ ಸಚಿವ ರೈ ಕರೆ - Karavali Times ದುಃಖಿತ ಜನರೊಂದಿಗೆ ಕರುಣೆ ತೋರುವ ಹೃದಯ ವೈಶಾಲ್ಯತೆ ಮುಂದುವರಿಸಿ : ಕೈ ಕಾರ್ಯಕರ್ತರಿಗೆ ಮಾಜಿ ಸಚಿವ ರೈ ಕರೆ - Karavali Times

728x90

22 June 2021

ದುಃಖಿತ ಜನರೊಂದಿಗೆ ಕರುಣೆ ತೋರುವ ಹೃದಯ ವೈಶಾಲ್ಯತೆ ಮುಂದುವರಿಸಿ : ಕೈ ಕಾರ್ಯಕರ್ತರಿಗೆ ಮಾಜಿ ಸಚಿವ ರೈ ಕರೆ

ಬಂಟ್ವಾಳ, ಜೂನ್ 21, 2021 (ಕರಾವಳಿ ಟೈಮ್ಸ್) : ಸೋಂಕಿತರ ಮನೆಗೆ ಆಹಾರ-ಸಾಮಾಗ್ರಿ ಒದಗಿಸಿ ಮಾಡುತ್ತಿರುವ ಸೇವೆಯು ಅದು ದೇವರ ಸೇವೆಗೆ ಸಮಾನ. ಜನ ರೋಗ ಪೀಡಿತರಾಗಿ ಮನೆಯಿಂದ ಹೊರಗೆ ಬಾರದೆ ಸಂಕಷ್ಟ ಅನುಭವಿಸುತ್ತಿರುವ ಸಂದರ್ಭ ಅವರ ಅವಶ್ಯಕತೆ ಈಡೇರಿಸುವುದು ಅತ್ಯಂತ ಪುಣ್ಯದಾಯಕ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಅಭಿಪ್ರಾಯಪಟ್ಟರು. 

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಹಾಗೂ ಕಾವಳಪಡೂರು ಗ್ರಾಮ ಪಂಚಾಯತ್ ವತಿಯಿಂದ ಮಂಗಳವಾರ ಸ್ಥಳೀಯ ಕೊರೋನಾ ಸೋಂಕಿತ ಕುಟುಂಬಗಳಿಗೆ ಅಕ್ಕಿ ಸಹಿತ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು ಇಂದಿರಾ ಕ್ಷೇಮ ನಿಧಿಯ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಹೃದಯ ವೈಶಾಲ್ಯತೆಯಿಂದ ವಿತರಿಸುತ್ತಿರುವ ಈ ಒಂದು ಸೇವೆಯು ಮನಸ್ಸಿಗೆ ಅತ್ಯಂತ ಹೆಚ್ಚು ತೃಪ್ತಿಯನ್ನು ತಂದಿದೆ. ಇಂತಹ ದೇವರು ಮೆಚ್ಚುವ ಕಾರ್ಯಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಇನ್ನಷ್ಟು ರೀತಿಯಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮುಂದುವರಿಸುವಂತೆ ಕರೆ ನೀಡಿದರು. 

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜಿ ಪಂ ಸದಸ್ಯ ಬಿ ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೂಜಾರ ಜೋರ, ಜಿಲ್ಲ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಗೌಡ, ವಲಯ ಕಾಂಗ್ರೆಸ್ ಅಧ್ಯಕ್ಷ ಬಿ ಆರ್ ಅಂಚನ್, ಪಂಚಾಯತ್ ಸದಸ್ಯರಾದ ಖಲೀಲ್ ಅಹ್ಮದ್, ಜಯಂತಿ, ಪ್ರಮುಖರಾದ ಸದಾನಂದ ಶೆಟ್ಟಿ, ಇಸ್ಮಾಯಿಲ್ ಸಿದ್ದಿಕ್, ವಸಂತ್ ಶೆಟ್ಟಿ, ಚಂದ್ರಹಾಸ ಬಿಯನಡ್ಕ, ಪ್ರಮೋದ್ ಪದಂತ್ರಬೆಟ್, ಪುರುಷೋತ್ತಮ ಕೊಂಬೇಳು, ಪ್ರಭಾಕರ ಆಚಾರ್ಯ, ಜನಾರ್ದನ ಆಚಾರ್ಯ, ಅರುಣ್ ಭಟ್, ಹನೀಫ್ ಎಚ್ ಇ, ಮುಹಮ್ಮದ್ ಶರೀಫ್, ಹನೀಫ್ ಧೂಮಳಿಕೆ, ಆಸಿಫ್ ಎಂ ಕೆ, ಉಮನ ಕಂದ್ರೋಡಿ, ಕೃಷ್ಣ ನಾಯ್ಕ, ನಾರಾಯಣ ಶೆಟ್ಟಿ, ಶರಾಫತ್ ಕಾವಳಕಟ್ಟೆ, ಹರೀಶ್ ಪೂಂಜಾ ಮೊದಲಾದವರು ಸೇವಾ ಕಾರ್ಯದಲ್ಲಿ ಕೈ ಜೋಡಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ದುಃಖಿತ ಜನರೊಂದಿಗೆ ಕರುಣೆ ತೋರುವ ಹೃದಯ ವೈಶಾಲ್ಯತೆ ಮುಂದುವರಿಸಿ : ಕೈ ಕಾರ್ಯಕರ್ತರಿಗೆ ಮಾಜಿ ಸಚಿವ ರೈ ಕರೆ Rating: 5 Reviewed By: karavali Times
Scroll to Top