ಬೆಳ್ತಂಗಡಿ, ಜೂನ್ 02, 2021 (ಕರಾವಳಿ ಟೈಮ್ಸ್) : ಪೂಂಜಾಲಕಟ್ಟೆ ಠಾಣಾ ಪಿಎಸ್ಸೈ ಸೌಮ್ಯ ಹಾಗೂ ಸಿಬಂದಿಗಳು ಖಚಿತ ಮಾಹಿತಿ ಆಧರಿಸಿ ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಕಾಣೇಲು ನಿವಾಸಿ ರುಕ್ಮಯ್ಯ ಪೂಜಾರಿ ಎಂಬವರ ಪುತ್ರ ಭೋಜ ಪೂಜಾರಿ ಅವರ ಮನೆಗೆ ಮಂಗಳವಾರ ದಾಳಿ ನಡೆಸಿದ್ದು, ವಿವಿಧ ನಮೂನೆಯ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ಪೊಲೀಸರು 42,356/- ರೂಪಾಯಿ ಮೌಲ್ಯದ 58.68 ಲೀಟರ್ ಮದ್ಯ ಹಾಗೂ 14,125/- ರೂಪಾಯಿ ಮೌಲ್ಯದ 82.53 ಲೀಟರ್ ಬಿಯರ್ ವಶಪಡಿಸಿಕೊಂಡಿದ್ದಾರೆ. ಆದರೆ ಆರೋಪಿಗಳು ಸ್ಥಳದಿಂದ ಪರಾರಿಯಾಗಲು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 56/2021 ಕಲಂ 32,34 ಕೆಇ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.














0 comments:
Post a Comment