ಅಸಂಘಟಿತ ಕಾಂಗ್ರೆಸ್ ವತಿಯಿಂದ ಜುಲೈ 5 ರಂದು ಅಮ್ಮುಂಜೆಯಲ್ಲಿ ಉಚಿತ ಕಾರ್ಮಿಕರ ನೋಂದಣಿ ಶಿಬಿರ - Karavali Times ಅಸಂಘಟಿತ ಕಾಂಗ್ರೆಸ್ ವತಿಯಿಂದ ಜುಲೈ 5 ರಂದು ಅಮ್ಮುಂಜೆಯಲ್ಲಿ ಉಚಿತ ಕಾರ್ಮಿಕರ ನೋಂದಣಿ ಶಿಬಿರ - Karavali Times

728x90

1 July 2021

ಅಸಂಘಟಿತ ಕಾಂಗ್ರೆಸ್ ವತಿಯಿಂದ ಜುಲೈ 5 ರಂದು ಅಮ್ಮುಂಜೆಯಲ್ಲಿ ಉಚಿತ ಕಾರ್ಮಿಕರ ನೋಂದಣಿ ಶಿಬಿರ

ಬಂಟ್ವಾಳ, ಜುಲೈ 02, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿ ಹಾಗೂ ಪಾಣೆಮಂಗಳೂರು ಬ್ಲಾಕ್ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿ ಇವುಗಳ ಜಂಟಿ ಅಶ್ರಯದಲ್ಲಿ ಅಸಂಘಟಿತ ಕಾರ್ಮಿಕರ ಉಚಿತ ನೋಂದಣಿ ಕಾರ್ಯಕ್ರಮವು ಜುಲೈ 5 ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಅಮ್ಮುಂಜೆಯಲ್ಲಿ ನಡೆಯಲಿದೆ. 

ಮಾಜಿ ಸಚಿವ ಬಿ ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಸಂಘಟಿತ ಕಾರ್ಮಿಕರಾದ ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಗೃಹ ನಿರ್ಮಾಣ ಕಾರ್ಮಿಕರು, ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ಟೈಲರ್‍ಗಳು, ಚಿಂದಿ ಆಯುವವರು, ಹಮಾಲರು, ಮೆಕ್ಯಾನಿಕ್‍ಗಳು, ಚಾಲಕರು, ನಿರ್ವಾಹಕರು, ಕ್ಲೀನರ್ ಮೊದಲಾದ ವೃತ್ತಿ ನಿರ್ವಹಿಸುವ ಕಾರ್ಮಿಕ ಬಂಧುಗಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು. 

ನೋಂದಾಯಿಸಲು ಬಯಸುವ ಕಾರ್ಮಿಕರು ತಮ್ಮ ಕುಟುಂಬದ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪಾಸ್ ಪೋರ್ಟ್ ಅಳತೆಯ 3 ಭಾವಚಿತ್ರಗಳು, ಆಧಾರ್  ಕಾರ್ಡಿಗೆ ಜೋಡಿಸಿದ ಮೊಬೈಲ್ ಸಂಖ್ಯೆ ಸಹಿತ ಮೊದಲಾದ ದಾಖಲೆಗಳನ್ನು ತರುವಂತೆ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಹಾಗೂ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ರೋಶನ್ ಕೆ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅಸಂಘಟಿತ ಕಾಂಗ್ರೆಸ್ ವತಿಯಿಂದ ಜುಲೈ 5 ರಂದು ಅಮ್ಮುಂಜೆಯಲ್ಲಿ ಉಚಿತ ಕಾರ್ಮಿಕರ ನೋಂದಣಿ ಶಿಬಿರ Rating: 5 Reviewed By: karavali Times
Scroll to Top