ಜುಲೈ 28 (ನಾಳೆ) ಪುದು ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್ ವಾರು ಲಸಿಕಾ ಕ್ಯಾಂಪ್ ಸುಜೀರು ಶಾಲೆಯಲ್ಲಿ - Karavali Times ಜುಲೈ 28 (ನಾಳೆ) ಪುದು ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್ ವಾರು ಲಸಿಕಾ ಕ್ಯಾಂಪ್ ಸುಜೀರು ಶಾಲೆಯಲ್ಲಿ - Karavali Times

728x90

27 July 2021

ಜುಲೈ 28 (ನಾಳೆ) ಪುದು ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್ ವಾರು ಲಸಿಕಾ ಕ್ಯಾಂಪ್ ಸುಜೀರು ಶಾಲೆಯಲ್ಲಿ

ಬಂಟ್ವಾಳ, ಜುಲೈ 27, 2021 (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮದ ಸುಜೀರ್ ವಾರ್ಡಿಗೆ ಸಂಬಂಧಪಟ್ಟಂತೆ ಮಾರಿಪಳ್ಳ ಹಾಗೂ ಪೇರಿಮಾರ್ ನಿವಾಸಿಗಳಿಗೆ ಸುಜೀರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜುಲೈ 28 ರಂದು ಬುಧವಾರ (ನಾಳೆ) ಕೋವಿಶೀಲ್ಡ್ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಮೊದಲ ಡೋಸ್ ಪಡೆದು 84 ದಿನಗಳು ಕಳೆದವರು 2ನೇ ಡೋಸ್ ಪಡೆಯಲು ಮೊದಲ ಆದ್ಯತೆ ನೀಡಲಾಗುವುದು. ಬೆಳಿಗ್ಗೆ 11 ರಿಂದ 12 ಗಂಟೆವರೆಗೆ 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 

ಬಳಿಕ ಲಸಿಕೆ ಲಭ್ಯವಿದ್ದಲ್ಲಿ ಮಧ್ಯಾಹ್ನ 12 ಗಂಟೆಯ ಬಳಿಕ 18 ವರ್ಷ ಮೇಲ್ಪಟ್ಟ ಆದ್ಯತಾ ವಲಯದವರಿಗೆ ಕಡ್ಡಾಯ ಅನೆಕ್ಷರ್-3 ಫಾರ್ಮ್ ನೊಂದಿಗೆ ನೀಡಲಾಗುವುದು. 

ಇತ್ತೀಚೆಗೆ ನಡೆದ ಪುದು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಗ್ರಾಮಸ್ಥರು ಲಸಿಕೆಯನ್ನು ವಾರ್ಡ್‍ವಾರು ನೀಡುವಂತೆ ಆಗ್ರಹಿಸಿದ ಹಿನ್ನಲೆಯಲ್ಲಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು ಈ ಬಗ್ಗೆ ಸ್ಥಳೀಯ ಶಾಸಕ ಯು ಟಿ ಖಾದರ್ ಅವರೊಂದಿಗೆ ಚರ್ಚಿಸಿ, ಶಾಸಕರು ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದ ಹಿನ್ನಲೆಯಲ್ಲಿ ಪುದು ಗ್ರಾಮ ಪಂಚಾಯತಿನ ವಾರ್ಡ್‍ವಾರು ಲಸಿಕೆ ನೀಡುವ ಪ್ರಯುಕ್ತ ಬುಧವಾರ 3ನೇ ಬಾರಿಗೆ ಪಂಚಾಯತ್ ವ್ಯಾಪ್ತಿಯ ಪ್ರಮುಖವಾಗಿ ಸುಜೀರು ವಾರ್ಡಿನ ಪೇರಿಮಾರ್ ಹಾಗೂ ಮಾರಿಪಳ್ಳ ನಿವಾಸಿಗಳಿಗೆ ಈ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಮೊದಲ ಬಾರಿಗೆ ಅಮೆಮಾರು ಹಾಗೂ ಕುಮ್ಡೇಲು ಶಾಲೆಯಲ್ಲಿ ಹಾಗೂ ಎರಡನೇ ಬಾರಿಗೆ ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೀಗ 3ನೇ ಕ್ಯಾಂಪ್ ಸುಜೀರು ಶಾಲೆಯಲ್ಲಿ ನಡೆಯುತ್ತಿದ್ದು, ಲಸಿಕೆ ಪಡೆಯಲು ಬಾಕಿ ಇರುವವರು ಈ ಲಸಿಕಾ ಕ್ಯಾಂಪಿನ ಸದುಪಯೋಗ ಪಡೆದುಕೊಳ್ಳುವಂತೆ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಜುಲೈ 28 (ನಾಳೆ) ಪುದು ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್ ವಾರು ಲಸಿಕಾ ಕ್ಯಾಂಪ್ ಸುಜೀರು ಶಾಲೆಯಲ್ಲಿ Rating: 5 Reviewed By: karavali Times
Scroll to Top