ಜುಲೈ 19 ರಿಂದ ರಾಜ್ಯದಲ್ಲಿ ಮತ್ತೊಂದು ಅನ್ ಲಾಕ್ ಆರಂಭ : ಚಿತ್ರಮಂದಿರ ಜೊತೆಗೆ ಪದವಿ ಕಾಲೇಜು ಆರಂಭಕ್ಕೂ ಗ್ರೀನ್ ಸಿಗ್ನಲ್, ರಾತ್ರಿ ನಿರ್ಬಂಧದಲ್ಲೂ ಸಡಿಲಿಕೆ - Karavali Times ಜುಲೈ 19 ರಿಂದ ರಾಜ್ಯದಲ್ಲಿ ಮತ್ತೊಂದು ಅನ್ ಲಾಕ್ ಆರಂಭ : ಚಿತ್ರಮಂದಿರ ಜೊತೆಗೆ ಪದವಿ ಕಾಲೇಜು ಆರಂಭಕ್ಕೂ ಗ್ರೀನ್ ಸಿಗ್ನಲ್, ರಾತ್ರಿ ನಿರ್ಬಂಧದಲ್ಲೂ ಸಡಿಲಿಕೆ - Karavali Times

728x90

18 July 2021

ಜುಲೈ 19 ರಿಂದ ರಾಜ್ಯದಲ್ಲಿ ಮತ್ತೊಂದು ಅನ್ ಲಾಕ್ ಆರಂಭ : ಚಿತ್ರಮಂದಿರ ಜೊತೆಗೆ ಪದವಿ ಕಾಲೇಜು ಆರಂಭಕ್ಕೂ ಗ್ರೀನ್ ಸಿಗ್ನಲ್, ರಾತ್ರಿ ನಿರ್ಬಂಧದಲ್ಲೂ ಸಡಿಲಿಕೆ

ಬೆಂಗಳೂರು, ಜುಲೈ 18, 2021 (ಕರಾವಳಿ ಟೈಮ್ಸ್) : ರಾಜ್ಯ ಮತ್ತೊಂದು ಅನ್ ಲಾಕ್ ವ್ಯವಸ್ಥೆಗೆ ಸಜ್ಜುಗೊಂಡಿದೆ. ಈ ಬಗ್ಗೆ ಸರಕಾರ ಮತ್ತೊಂದು ಮಾರ್ಗಸೂಚಿ ಪ್ರಕಟಿಸಿದೆ. ನಾಳೆಯಿಂದ ಅಂದರೆ ಜುಲೈ 19 ರಿಂದ ಈ ನಾಲ್ಕನೇ ಅನ್ ಲಾಕ್ ಜಾರಿಗೆ ಬರಲಿದ್ದು, ಸಿನಿಮಾ ಥಿಯೇಟರ್‍ಗಳು ಶೇ 50 ಸಾಮಥ್ರ್ಯದೊಂದಿಗೆ ಸೋಮವಾರದಿಂದ ಕಾರ್ಯಾಚರಣೆ ನಡೆಸಲು ಅನುಮತಿಸಲಾಗಿದೆ. ಅದೇ ರೀತಿ ಜುಲೈ 26ರಿಂದ ಪದವಿ ಕಾಲೇಜು ಪ್ರಾರಂಭಕ್ಕೂ ಗ್ರೀನ್ ಸಿಗ್ನಲ್ ನೀಡಲಾಗಿದೆ. 

ಸಿಎಂ ಯಡಿಯೂರಪ್ಪ ಭಾನುವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಈ ಮಾರ್ಗಸೂಚಿ ಪ್ರಕಟಿಸಿದ್ದಾರೆ. 

ಜೊತೆಗೆ ರಾತ್ರಿ ನಿರ್ಬಂಧವನ್ನು ಮುಖ್ಯಮಂತ್ರಿಗಳು ಒಂದು ಗಂಟೆ ಕಡಿತಗೊಳಿಸಿ ರಾತ್ರಿ  10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ವಿಧಿಸಿ ಆದೇಶಿಸಿದ್ದಾರೆ. ಪದವಿ ತರಗತಿಗಳನ್ನು ಜುಲೈ 26ರಿಂದ ಪ್ರಾರಂಬಿಸಲು ಆದೇಶಿಸಲಾಗಿದ್ದು, ವಿದ್ಯಾರ್ಥಿಗಳು ಕಡ್ಡಾಯವಾಗಿ ಮೊದಲ ಡೋಸ್ ಕೊರೋನಾ ಲಸಿಕೆ ಪಡೆದು ತರಗತಿಗಳಿಗೆ ಹಾಜರಾಗಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಜುಲೈ 19 ರಿಂದ ರಾಜ್ಯದಲ್ಲಿ ಮತ್ತೊಂದು ಅನ್ ಲಾಕ್ ಆರಂಭ : ಚಿತ್ರಮಂದಿರ ಜೊತೆಗೆ ಪದವಿ ಕಾಲೇಜು ಆರಂಭಕ್ಕೂ ಗ್ರೀನ್ ಸಿಗ್ನಲ್, ರಾತ್ರಿ ನಿರ್ಬಂಧದಲ್ಲೂ ಸಡಿಲಿಕೆ Rating: 5 Reviewed By: karavali Times
Scroll to Top