ಅತ್ಯುತ್ತಮ ವೆಬ್ ಸೈಟ್ ವರದಿಗೆ ರಾಜ್ಯ ಮಟ್ಟದ ಬಿ ಜಿ ಮೋಹನ್ ದಾಸ್ ಪ್ರಶಸ್ತಿಗೆ ಅರ್ಜಿ ಆಹ್ವಾನ - Karavali Times ಅತ್ಯುತ್ತಮ ವೆಬ್ ಸೈಟ್ ವರದಿಗೆ ರಾಜ್ಯ ಮಟ್ಟದ ಬಿ ಜಿ ಮೋಹನ್ ದಾಸ್ ಪ್ರಶಸ್ತಿಗೆ ಅರ್ಜಿ ಆಹ್ವಾನ - Karavali Times

728x90

16 July 2021

ಅತ್ಯುತ್ತಮ ವೆಬ್ ಸೈಟ್ ವರದಿಗೆ ರಾಜ್ಯ ಮಟ್ಟದ ಬಿ ಜಿ ಮೋಹನ್ ದಾಸ್ ಪ್ರಶಸ್ತಿಗೆ ಅರ್ಜಿ ಆಹ್ವಾನ

ಬಂಟ್ವಾಳ, ಜುಲೈ 16, 2021 (ಕರಾವಳಿ ಟೈಮ್ಸ್) : ನಿರತ ಸಾಹಿತ್ಯ ಸಂಪದ ಹಾಗೂ ಗಲ್ಫ್ ಕನ್ನಡಿಗ ಇವುಗಳ  ಜಂಟಿ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ನೀಡಲ್ಪಡುವ ಅತ್ಯುತ್ತಮ ವೆಬ್‍ಸೈಟ್ (ಅಂತರ್ಜಾಲ) ವರದಿಗೆ ರಾಜ್ಯ ಮಟ್ಟದ ಬಿ ಜಿ ಮೋಹನ್‍ದಾಸ್ ಪ್ರಶಸ್ತಿ-2021ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಶಸ್ತಿಯು 5 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಹಾಗೂ ಸನ್ಮಾನವನ್ನು ಒಳಗೊಂಡಿದೆ. ಪ್ರಶಸ್ತಿಗೆ ಕನ್ನಡ ವೆಬ್‍ಸೈಟಿನಲ್ಲಿ ಪ್ರಕಟಗೊಂಡ ವರದಿಗಳನ್ನು ಮಾತ್ರ ಪರಿಗಣಿಸಲಾಗುವುದು. ಜುಲೈ 01, 2000  ಇಸವಿಯಿಂದ 2021 ರ ಜೂನ್ 30ವರೆಗೆ ಪ್ರಕಟವಾದ ಮಾನವೀಯ ಮೌಲ್ಯ, ಗ್ರಾಮೀಣ ಸಮಸ್ಯೆ, ತನಿಖಾ ಆಧಾರಿತ ವರದಿ, ಎಕ್ಸ್‍ಕ್ಲೂಸಿವ್ ಸೇರಿದಂತೆ ಅತ್ಯುತ್ತಮ ವರದಿಗಳಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಲಾಗುವುದು. ಒಬ್ಬ ಪತ್ರಕರ್ತರಿಗೆ ಒಂದು ವರದಿ ಕಳುಹಿಸಲು ಮಾತ್ರ ಅವಕಾಶವಿದೆ. ವರದಿಯು ಬೇರೆ ಯಾವುದೇ ಪತ್ರಿಕೆ ಅಥವಾ ಸುದ್ದಿ ಜಾಲದಲ್ಲಿ ಪ್ರಕಟವಾಗಿರಬಾರದು. 

ಆಯ್ಕೆಗೆ ವರದಿಯ ಮುದ್ರಿತ 3 ಪ್ರತಿಗಳನ್ನು ದಿನೇಶ್ ಎನ್ ತುಂಬೆ, ಕಾರ್ಯದರ್ಶಿ, ನಿರತ ಸಾಹಿತ್ಯ ಸಂಪದ, ಪ್ರಗತಿ ಪ್ರಿಂಟರ್ಸ್, ತುಂಬೆ, ಬಂಟ್ವಾಳ ತಾಲೂಕು, ದ ಕ--574143 ವಿಳಾಸಕ್ಕೆ ಜುಲೈ 31ರೊಳಗೆ ಕಳುಹಿಸತಕ್ಕದ್ದು. ಮುದ್ರಿತ ವರದಿಯ ವೆಬ್‍ಸೈಟ್ ಲಿಂಕ್ (URL Adress) ನ್ನು ಕಡ್ಡಾಯವಾಗಿ 9844619763 ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಬೇಕು. ಸಂಘಟಕರ ತೀರ್ಮಾನವೇ ಅಂತಿಮ ಎಂದು ನಿರತ ಸಾಹಿತ್ಯ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅತ್ಯುತ್ತಮ ವೆಬ್ ಸೈಟ್ ವರದಿಗೆ ರಾಜ್ಯ ಮಟ್ಟದ ಬಿ ಜಿ ಮೋಹನ್ ದಾಸ್ ಪ್ರಶಸ್ತಿಗೆ ಅರ್ಜಿ ಆಹ್ವಾನ Rating: 5 Reviewed By: karavali Times
Scroll to Top