ವಿಟ್ಲ : ಜಾಗದ ತಕರಾರಿಗೆ ಸಂಬಂಧಿಸಿ ಮಗಳು-ಅಳಿಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಾಳೇಶ್ವರ ಸ್ವಾಮಿ - Karavali Times ವಿಟ್ಲ : ಜಾಗದ ತಕರಾರಿಗೆ ಸಂಬಂಧಿಸಿ ಮಗಳು-ಅಳಿಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಾಳೇಶ್ವರ ಸ್ವಾಮಿ - Karavali Times

728x90

28 August 2021

ವಿಟ್ಲ : ಜಾಗದ ತಕರಾರಿಗೆ ಸಂಬಂಧಿಸಿ ಮಗಳು-ಅಳಿಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಾಳೇಶ್ವರ ಸ್ವಾಮಿ

ಬಂಟ್ವಾಳ, ಆಗಸ್ಟ್ 27, 2021 (ಕರಾವಳಿ ಟೈಮ್ಸ್) : ತಾಲೂಕಿನ ಕೊಳ್ನಾಡು ಗ್ರಾಮದ ಖಂಡಿಗ ನಿವಾಸಿ ಸುರೇಶ ಪ್ರಭು ಅಲಿಯಾಸ್ ಕಾಳೀಶ್ವರ ಸ್ವಾಮಿ ಎಂಬಾತ ಜಾಗದ ವಿವಾದಕ್ಕೆ ಸಂಬಂಧಿಸಿ ತನ್ನ ಮಗಳು ಕಿರಣ್ ಕೆ (30) ಹಾಗೂ ಮಗಳ ಗಂಡನ ಚೇತನ್ ಕೆ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ. 

ಪ್ರಕರಣದ ಪ್ರಮುಖ ಆರೋಪಿ ಕಾಳೀಶ್ವರ ಸ್ವಾಮಿಯ ಮಗಳು ಕಿರಣ್ ಕೆ ಅವರು ತನ್ನ ಗಂಡನ ಮನೆಯಾಗಿರುವ ಸುಳ್ಯ ತಾಲೂಕಿನ, ಆಲಟ್ಟಿ ಗ್ರಾಮದ ಕುಂಜ ಮನೆ ಎಂಬಲ್ಲಿಂದ ಆ 27 ರಂದು ಶುಕ್ರವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ತನ್ನ ಗಂಡ ಚೇತನ್ ಹಾಗೂ ಮಕ್ಕಳೊಂದಿಗೆ ಖಂಡಿಗದ ತನ್ನ ತಂದೆಯ ಮನೆಗೆ ಬಂದಿದ್ದು, ಅವರ ಗಂಡ ಚೇತನ್ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಹೊಗುತ್ತಿರುವ ಸಂದರ್ಭ ಪತ್ನಿಯ ತಂದೆ ಸುರೇಶ ಪ್ರಭು @ ಕಾಳೀಶ್ವರ ಸ್ವಾಮಿಯು ತನ್ನ ಹೆಂಡತಿ ಸುಮತಿ, ಶಿವಾನಂದ ಕಾಮತ್, ಆತನ ಹೆಂಡತಿ ಜಯಲಕ್ಷ್ಮೀ ಹಾಗೂ ಇತರರು ಸೇರಿಕೊಂಡು ಕಬ್ಬಿಣದ ರಾಡಿನಿಂದ ತಲೆಗೆ ಹಲ್ಲೆ ನಡೆಸಿದ್ದು, ಮಾರಣಾಂತಿಕ ಹಲ್ಲೆಯಿಂದ ಚೇತನ್ ಅವರು ರಕ್ತದ ಗಾಯವಾಗಿ ನೆಲಕ್ಕೆ ಬಿದ್ದಿರುತ್ತಾರೆ. ಬಳಿಕ ಶಿವಾನಂದ ಕಾಮತ್ ಕಿರಣ್ ಕೆ ಅವರ ಕತ್ತು ಹಿಡಿದು ದೂಡಿ ಹಾಕಿ ಬಟ್ಟೆ ಹರಿದಿದುಲ್ಲದೆ ಕೈಗೆ ಮತ್ತು ಕಾಲಿಗೆ ದೊಣ್ಣೆ ಮತ್ತು ಹಗ್ಗದಿಂದ ಮನೆಯ ಕೆಲಸಕ್ಕೆ ಬಂದವರು ಹಲ್ಲೆ ನಡೆಸಿ ಅಲ್ಲಿಂದ ಹೊರಟು ಹೋಗಿರುತ್ತಾರೆ. 

ಬಳಿಕ ಕಿರಣ್ ಕೆ ಅವರು ತನ್ನ ಗಂಡ ಚೇತನ್ ಕೆ ಅವರನ್ನು ವಾಹನದಲ್ಲಿ ವಿಟ್ಲ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ನೀಡಿ ನಂತರ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಚೇತನ್ ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಈ ಬಗ್ಗೆ ಕಿರಣ್ ಕೆ ಅವರು ವಿಟ್ಲ ಪೆÇಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 115/2021 ರಂತೆ ಕಲಂ: 143, 147, 148, 354, 323, 324, 326 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಈ ಬಗ್ಗೆ ಕಾರ್ಯಪ್ರವೃತ್ತರಾದ ವಿಟ್ಲ ಪೊಲೀಸರು ಆರೋಪಿಗಳಾದ ದೂರುದಾರಳ ತಂದೆ ಸುರೇಶ್ ಪ್ರಭು ಅಲಿಯಾಸ್ ಕಾಳೇಶ್ವರ ಸ್ವಾಮಿ (57), ಬಂಟ್ವಾಳ ತಾಲೂಕು, ಕೊಳ್ನಾಡು ಗ್ರಾಮದ ಖಂಡಿಗ ನಿವಾಸಿ ದಿವಂಗತ ಗೋಪಾಲ ಕಾಮತ್ ಅವರ ಪುತ್ರ ಶಿವಾನಂದ ಕಾಮತ್ (33), ವಿಟ್ಲಪಡ್ನೂರು ಗ್ರಾಮದ ಕಡಂಬು ನಿವಾಸಿ ತಿಮ್ಮ ಮುಗೇರಾ ಅವರ ಪುತ್ರ ಚಂದ್ರ (30) ಅವರನ್ನು ಬಂಧಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ವಿಟ್ಲ : ಜಾಗದ ತಕರಾರಿಗೆ ಸಂಬಂಧಿಸಿ ಮಗಳು-ಅಳಿಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಾಳೇಶ್ವರ ಸ್ವಾಮಿ Rating: 5 Reviewed By: karavali Times
Scroll to Top