ಮಾರ್ಗಸೂಚಿ ಪಾಲನೆಯೊಂದಿಗೆ ಆ. 23 ರಿಂದ ಶಾಲಾರಂಭಕ್ಕೆ ಸರಕಾರ ಗ್ರೀನ್ ಸಿಗ್ನಲ್ - Karavali Times ಮಾರ್ಗಸೂಚಿ ಪಾಲನೆಯೊಂದಿಗೆ ಆ. 23 ರಿಂದ ಶಾಲಾರಂಭಕ್ಕೆ ಸರಕಾರ ಗ್ರೀನ್ ಸಿಗ್ನಲ್ - Karavali Times

728x90

16 August 2021

ಮಾರ್ಗಸೂಚಿ ಪಾಲನೆಯೊಂದಿಗೆ ಆ. 23 ರಿಂದ ಶಾಲಾರಂಭಕ್ಕೆ ಸರಕಾರ ಗ್ರೀನ್ ಸಿಗ್ನಲ್

ಬೆಂಗಳೂರು, ಆಗಸ್ಟ್ 16, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಆಗಸ್ಟ್ 23ರಿಂದ 9 ಹಾಗೂ 10ನೇ ತರಗತಿಗೆ ತರಗತಿ ಆರಂಭಿಸಲು ಚಿಂತನೆ ನಡೆಸಿರುವ ರಾಜ್ಯ ಸರಕಾರ ಈ ಸಂಬಂಧ ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮೂಲಕ ಮೊದಲು ತಿಳಿಸಿದಂತೆ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಯಲ್ಲಿ ಶಾಲೆಗಳು ಆರಂಭವಾಗಲಿದೆ.

ಪ್ರತಿ ನಿತ್ಯ ಅರ್ಧ ದಿನ ಅಂದರೆ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮಾತ್ರ ತರಗತಿ ನಡೆಸಲು ಸರಕಾರ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ತರಗತಿ ನಡೆಸಬೇಕು. ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.50 ವರೆಗೆ ತರಗತಿ ನಡೆಸಲು ಸೂಚಿಸಲಾಗಿದೆ. ತರಗತಿಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಗೂ ಪೆÇೀಷಕರ ಅನುಮತಿ ಪತ್ರ ಕಡ್ಡಾಯ ಎಂದು ತಿಳಿಸಲಾಗಿದೆ. 

ಮಕ್ಕಳು ಮನೆಯಿಂದ ನೀರು, ಉಪಹಾರ ತರಲು ಅವಕಾಶವಿದ್ದು, ಶಾಲೆಗಳಲ್ಲಿ ಕುಡಿಯುವ ಬಿಸಿ ನೀರು ವ್ಯವಸ್ಥೆ ಮಾಡಬೇಕು. ಹಾಜರಾತಿ ಕಡ್ಡಾಯವಿಲ್ಲ. ಆನ್‍ಲೈನ್ ತರಗತಿ ಬೇಕಾದವರು ಅದನ್ನೂ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ತಂಡದಲ್ಲಿ 15-20 ವಿದ್ಯಾರ್ಥಿಗಳು ಮಾತ್ರ ಇರಬೇಕು. ವಿದ್ಯಾರ್ಥಿಗಳು ಪೆನ್ನು, ಪುಸ್ತಕ, ರಬ್ಬರ್ ಸೇರಿದಂತೆ ಯಾವ ವಸ್ತುಗಳನ್ನು ಹಂಚಿಕೊಳ್ಳಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 

ನಿತ್ಯ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ತಾಪಮಾನ ಪರಿಶೀಲನೆ ಮಾಡಬೇಕು. ಡೆಸ್ಕ್‍ನಲ್ಲಿ ಕೂರಿಸುವುದು, ವಿದ್ಯಾರ್ಥಿಗಳ ಆಗಮನ ಮತ್ತು ನಿರ್ಗಮದ ವೇಳೆ ಶಾಲಾ-ಕಾಲೇಜುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ಕ್ರಮವಹಿಸಬೇಕು. ಶಾಲಾ-ಕಾಲೇಜು ಕೊಠಡಿಗಳು, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸ್ಯಾನಿಟೈಸ್ ವ್ಯವಸ್ಥೆ ಶಾಲಾ-ಕಾಲೇಜುಗಳಲ್ಲಿ ಮಾಡಬೇಕು. 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ ಶೀಲ್ಡ್ ಧರಿಸಬೇಕು. ಪ್ರತಿ ದಿನ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಆರೋಗ್ಯದ ಮಾಹಿತಿ ದಾಖಲಿಸಬೇಕು.

ಆರೋಗ್ಯ ವ್ಯತ್ಯಾಸ ಇರೋ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಶಾಲೆಗೆ ಪ್ರವೇಶವಿಲ್ಲ. ಪ್ರಾರ್ಥನೆ ಸಮಯ, ಊಟದ ಸಮಯದಲ್ಲಿ ಅಗತ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಬೇಕು. ಗುಂಪು ಕ್ರೀಡೆಗಳ ಆಯೋಜನೆ ಮಾಡುವಾಗ ಎಚ್ಚರ ವಹಿಸಬೇಕು. ಕಾಲೇಜುಗಳಲ್ಲಿ ಸ್ವಿಮ್ಮಿಂಗ್ ಪೂಲ್ ಇದ್ದರೆ ಕಡ್ಡಾಯವಾಗಿ ಅದನ್ನ ಕ್ಲೋಸ್ ಮಾಡಬೇಕು. ಶಾಲಾ-ಕಾಲೇಜು ಕ್ಯಾಂಪಸ್‍ಗೆ ಸಾರ್ವಜನಿಕ ಪ್ರವೇಶ ನಿಷೇಧಿಸಬೇಕು. ವಿದ್ಯಾರ್ಥಿಗಳು ಲೈಬ್ರರಿಗಳಲ್ಲಿ ಕುಳಿತು ಓದವುದನ್ನು ನಿಷೇಧಿಸಲಾಗಿದೆ. ಪುಸ್ತಕ ಪಡೆದು ಮನೆಯಲ್ಲಿ ಓದುವ ನಿಯಮ ಪಾಲನೆ ಮಾಡಬೇಕು. ಶಾಲಾ-ಕಾಲೇಜುಗಳ ಹಂತದ ಕ್ರೀಡಾ ಕೂಟಗಳ ಆಯೋಜನೆಗೆ ಅವಕಾಶವಿಲ್ಲ. 

ಬಿಸಿಯೂಟ ಬದಲಾಗಿ ದಿನಸಿ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ಕೊಡುವ ನಿಯಮ ಮುಂದುವರೆಸಬೇಕು. ತರಗತಿಗಳು ಮುಗಿದ ಮೇಲೆ ನಿತ್ಯ ಕೊಠಡಿಗಳನ್ನ ಸ್ಯಾನಿಟೈಸ್ ಮಾಡಲು ಅಗತ್ಯ ಕ್ರಮವಹಿಸಬೇಕು. ಆರೋಗ್ಯ ವ್ಯತ್ಯಾಸ ಇರೋ ವಿದ್ಯಾರ್ಥಿಗಳಿಗೆ ಶಾಲೆಗೆ ಪ್ರವೇಶ ನೀಡಬಾರದು. ಪ್ರತಿ ಶಾಲೆಯಲ್ಲಿ ಐಸೋಲೇಷನ್ ಕೊಠಡಿ ತೆರೆಯಬೇಕು. ಆರೋಗ್ಯ ವ್ಯತ್ಯಾಸ ಕಂಡು ಬರೋ ವಿದ್ಯಾರ್ಥಿಗೆ ಈ ಕೊಠಡಿಯಲ್ಲಿ ಕೂರಿಸುವ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸ್ ವ್ಯವಸ್ಥೆ ಮಾಡಲು ಕ್ರಮವಹಿಸಬೇಕು. ಕೊರೋನಾ ನಿಯಮಗಳು ಪಾಲನೆಯಾಗುತ್ತ ಇಲ್ಲವೇ ಎಂಬುದರ ಬಗ್ಗೆ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಎಸ್‍ಡಿಎಂಸಿ ಸಮಿತಿ ಜತೆ ಸಮುದಾಯದ ಸಹಭಾಗಿತ್ವದಲ್ಲಿ ಶಾಲೆ ನಡೆಸಬೇಕು ಇವೇ ಮೊದಲಾದ ಮಾರ್ಗಸೂಚಿಯಡಿ ಆಗಸ್ಟ್ 23 ರಿಂದ ಶಾಲೆ ತೆರೆಯಲು ಸದ್ಯ ಸರಕಾರ ಅನುಮತಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾರ್ಗಸೂಚಿ ಪಾಲನೆಯೊಂದಿಗೆ ಆ. 23 ರಿಂದ ಶಾಲಾರಂಭಕ್ಕೆ ಸರಕಾರ ಗ್ರೀನ್ ಸಿಗ್ನಲ್ Rating: 5 Reviewed By: karavali Times
Scroll to Top