ಸೆ. 30 ರಂದು ಮಂಗಳೂರು ವಿಭಾಗದ ಅಂಚೆ ಅದಾಲತ್ - Karavali Times ಸೆ. 30 ರಂದು ಮಂಗಳೂರು ವಿಭಾಗದ ಅಂಚೆ ಅದಾಲತ್ - Karavali Times

728x90

27 September 2021

ಸೆ. 30 ರಂದು ಮಂಗಳೂರು ವಿಭಾಗದ ಅಂಚೆ ಅದಾಲತ್

ಮಂಗಳೂರು, ಸೆಪ್ಟಂಬರ್ 27, 2021 (ಕರಾವಳಿ ಟೈಮ್ಸ್) :  ಮಂಗಳೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ ಸೆಪ್ಟೆಂಬರ್ 30 ರಂದು ಸಂಜೆ 4 ಗಂಟೆಗೆ ಮಂಗಳೂರು ಅಂಚೆ ವಿಭಾಗದ ಬಲ್ಮಠದಲ್ಲಿರುವ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ನಡೆಯಲಿದೆ. 

ಈ ಅದಾಲತ್ತಿನಲ್ಲಿ ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದು-ಕೊರತೆ, ತಕರಾರುಗಳನ್ನು ಪರಿಶೀಲಿಸಲಾಗುವುದು. ಸಾರ್ವಜನಿಕರು ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಪತ್ರ ಮುಖೇನ ಅಂಚೆ ಅದಾಲತ್ ತಲೆ ಬರಹದಡಿಯಲ್ಲಿ ಸೆಪ್ಟೆಂಬರ್ 29 ರೊಳಗೆ “ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ಅಂಚೆ ವಿಭಾಗ, ಬಲ್ಮಠ, ಮಂಗಳೂರು-575002” ವಿಳಾಸಕ್ಕೆ ಅಥವಾ ದೂರುಗಳನ್ನು ವಾಟ್ಸಪ್ ಸಂಖ್ಯೆ 9448291072ಕ್ಕೆ ಕಳುಹಿಸಬಹುದು. 

ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಮಾತ್ರ ಕಳುಹಿಸುವಂತೆ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸೆ. 30 ರಂದು ಮಂಗಳೂರು ವಿಭಾಗದ ಅಂಚೆ ಅದಾಲತ್ Rating: 5 Reviewed By: karavali Times
Scroll to Top