ತೆಂಕಕಜೆಕಾರು : ಕ್ಲುಲ್ಲಕ ಕಾರಣಕ್ಕಾಗಿ ವ್ಯಕ್ತಿಯ ಕೊಲೆ - Karavali Times ತೆಂಕಕಜೆಕಾರು : ಕ್ಲುಲ್ಲಕ ಕಾರಣಕ್ಕಾಗಿ ವ್ಯಕ್ತಿಯ ಕೊಲೆ - Karavali Times

728x90

13 September 2021

ತೆಂಕಕಜೆಕಾರು : ಕ್ಲುಲ್ಲಕ ಕಾರಣಕ್ಕಾಗಿ ವ್ಯಕ್ತಿಯ ಕೊಲೆ

ಬಂಟ್ವಾಳ, ಸೆಪ್ಟಂಬರ್ 13, 2021 (ಕರಾವಳಿ ಟೈಮ್ಸ್) : ಕ್ಷುಲ್ಲಕವಾಗಿ ಗಲಾಟೆ ಮಾಡುತ್ತಿದ್ದ ಎಂಬ ಕಾರಣಕ್ಕೆ ತೆಂಕಕಜೆಕಾರು ಗ್ರಾಮದ ಕೆಳಗಿನ ಕರ್ಲ ನಿವಾಸಿ, ಆರೋಪಿ ಸಿದ್ದೀಕ್ ಎಂಬಾತ ರಫೀಕ್ (20) ಎಂಬಾತನನ್ನು ಕರ್ಲ ಸಮೀಪದ ಗುಡ್ಡದಲ್ಲಿ ಚೂರಿಯಿಂದ ಇರಿದು ಬಳಿಕ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಲ್ಲದೆ ಬಳಿಕ ಮೃತದೇಹವನ್ನು ಸ್ನೇಹಿತನ ಜೊತೆ ಸೇರಿ ಕಾರಿನಲ್ಲಿ ತಂದು ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಬೇರೆ ಸ್ಥಳದಲ್ಲಿ ಎಸೆದು ಹೋದ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ಮೃತ ರಫೀಕ್ ಕ್ಷುಲ್ಲಕ ಕಾರಣಗಳಿಗಾಗಿ ಗಲಾಟೆ ಮಾಡುತ್ತಿದ್ದುದಕ್ಕಾಗಿ ಆತನಿಗೆ ಬುದ್ದು ಕಲಿಸುವ ಉದ್ದೇಶದಿಂದ ಆರೋಪಿ ರಫೀಕ್ ಭಾನುವಾರ ಸಂಜೆ 6 ಗಂಟೆಗೆ ತನ್ನ ಮನೆ ಸಮೀಪ ಶಟ್ಲ್ ಆಡುತ್ತಿದ್ದ ರಫೀಕನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮೀಪದ ಗುಡ್ಡ ಪ್ರದೇಶಕ್ಕೆ ಸಿಗರೇಟು ಸೇದುವ ನೆಪದಲ್ಲಿ ಕರೆದುಕೊಂಡು ಹೋಗಿ ಆತನಲ್ಲಿ ಮಾತಾನಾಡುತ್ತಾ ಚಾಕುವಿನಿಂದ ಕುತ್ತಿಗೆಗೆ ಹಾಗೂ ಎದೆಗೆ ಮತ್ತು ಹೊಟ್ಟೆಗೆ ತಿವಿದು ರಕ್ರಸ್ರಾವವಾಗಿ ಬಿದ್ದವನನ್ನು ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿ ಮುಖದ ಭಾಗಕ್ಕೆ ಹಾಕಿದ್ದಾನೆ. ಈ ಸಂದರ್ಭ ಸ್ಥಳದಲ್ಲೇ ಮೃತಪಟ್ಟ ರಫೀಕನ ಮೃತದೇಹವನ್ನು ಅಲ್ಲಿಯೇ ಬಿಟ್ಟರೆ ತೊಂದರೆಯಾಗಬಹುದೆಂದು ಅಲ್ಲಿಂದ ತನ್ನ ಗೆಳೆಯ ಪಯಾಝ್‍ಗೆ ಕರೆ ಮಾಡಿ ಆತನ ಮನೆಗೆ ಹೋಗಿ ಕಾರನ್ನು ಪಡೆದುಕೊಂಡು ಕಾರಿನಲ್ಲಿ ಮೃತದೇಹವನ್ನು ಇಟ್ಟುಕೊಂಡು ವಗ್ಗ  ಕಡೆ ಬಂದು ಕೊಡ್ಯಮಲೆ ಕಾಡುಪ್ರದೇಶದ ಮೋರಿಯಲ್ಲಿ ಹರಿಯುತ್ತಿರುವ ನೀರಿನಲ್ಲಿ ಬಿಸಾಡಿ ನಂತರ ಮನೆಗೆ ತೆರಳಿ ಕಾರಿನಲ್ಲಿದ್ದ ರಕ್ತದ ಕಲೆಗಳನ್ನು ನೀರಿ£ಂದ ತೊಳೆದು ಬಟ್ಟೆ-ಬರೆಗಳನ್ನು ಬಕೆಟ್ ನೀರಿನಲ್ಲಿ  ಹಾಕಿ ಸಾಕ್ಷ್ಯ ನಾಶ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. 

ಈ ಬಗ್ಗೆ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/2021 ಕಲಂ 302, 201 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ತೆಂಕಕಜೆಕಾರು : ಕ್ಲುಲ್ಲಕ ಕಾರಣಕ್ಕಾಗಿ ವ್ಯಕ್ತಿಯ ಕೊಲೆ Rating: 5 Reviewed By: karavali Times
Scroll to Top