ದೇಶಕ್ಕಾಗಿ ಹುತಾತ್ಮರಾದ ವ್ಯಕ್ತಿತ್ವಗಳನ್ನು ಟೀಕೆ ಮಾಡುವುದು ದೇಶಕ್ಕೆ ಅಪಾಯಕಾರಿ : ಮಾಜಿ ಸಚಿವ ರಮಾನಾಥ ರೈ ಆತಂಕ - Karavali Times ದೇಶಕ್ಕಾಗಿ ಹುತಾತ್ಮರಾದ ವ್ಯಕ್ತಿತ್ವಗಳನ್ನು ಟೀಕೆ ಮಾಡುವುದು ದೇಶಕ್ಕೆ ಅಪಾಯಕಾರಿ : ಮಾಜಿ ಸಚಿವ ರಮಾನಾಥ ರೈ ಆತಂಕ - Karavali Times

728x90

2 October 2021

ದೇಶಕ್ಕಾಗಿ ಹುತಾತ್ಮರಾದ ವ್ಯಕ್ತಿತ್ವಗಳನ್ನು ಟೀಕೆ ಮಾಡುವುದು ದೇಶಕ್ಕೆ ಅಪಾಯಕಾರಿ : ಮಾಜಿ ಸಚಿವ ರಮಾನಾಥ ರೈ ಆತಂಕ

 ಬಂಟ್ವಾಳ, ಅಕ್ಟೋಬರ್ 02, 2021 (ಕರಾವಳಿ ಟೈಮ್ಸ್) : ಮಹಾತ್ಮ ಗಾಂಧಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಬಳಿಕ ಸ್ವಾತಂತ್ರ್ಯ ಚಳವಳಿಗೆ ವೇಗ ಸಿಕ್ಕಿದರೂ ಎಲ್ಲಿಯೂ ಹಿಂಸೆ, ದೊಂಬಿಗೆ ಪ್ರಚೋದನೆ ನೀಡದೆ ಅಖಂಡ ಭಾರತಕ್ಕೆ ಸ್ವಾತಂತ್ರ್ಯವನ್ನು ತರುವಲ್ಲಿ ಯಶಸ್ವಿಯಾದ ಮಹಾತ್ಮ ಗಾಂಧಿಯವರ ಅಹಿಂಸಾ ಸಿದ್ದಾಂತ ಇಂದಿನ ಯುವ ಜನತೆಗೆ ಮನವರಿಕೆ ಮಾಡಿಕೊಡುವ ಅನಿವಾರ್ಯತೆ ಹೆಚ್ಚಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು. 

ತಾಲೂಕಿನ ಪಚ್ಚನಡ್ಕ ತೊಡಂಬಿಲ ಚರ್ಚ್ ಸಭಾಂಗಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಶನಿವಾರ ನಡೆದ ಕಳ್ಳಿಗೆ, ಅಮ್ಮುಂಜೆ, ಕರಿಯಂಗಳ, ತೆಂಕಬೆಳ್ಳೂರು, ಬಡಗಬೆಳ್ಳೂರು, ಕುರಿಯಾಲ, ಅಮ್ಟಾಡಿ ಮತ್ತು ಅರಳ ವಲಯ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ, ಉಚಿತ ಕಣ್ಣಿನ ಮತ್ತು ಆರೋಗ್ಯ ತಪಾಸಣಾ ಶಿಬಿರ, ಉಚಿತ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ಗಾಂಧಿ ಅವರ ಅಹಿಂಸೆ ಸಿದ್ದಾಂತದ ಬಗ್ಗೆ ಮಾತನಾಡಬೇಕಾದ ಅನಿವಾರ್ಯ ಇದೆ. ಅನೇಕ ಜಾತಿ, ಧರ್ಮ, ಭಾಷೆಯ ಜನರನ್ನು ಒಳಗೊಂಡಿರುವ ಅಖಂಡ ಭಾರತವನ್ನು ಒಗ್ಗೂಡಿಸಿ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಹೋರಾಟ ಮಾಡುವುದು ಸುಲಭದ ಕೆಲಸ ಆಗಿರಲಿಲ್ಲ. ಆದರೂ ಮಹಾತ್ಮಾ ಗಾಂಧಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. ಅದೇ ಮಾರ್ಗದಲ್ಲಿ ಇಂದು ನಾವೂ ಮುಂದುವರಿಯಬೇಕು ಎಂದವರು ಹೇಳಿದರು. 

ವೇದಿಕೆ ಮೇಲೆ ನಿಂತು ಗಾಂಧೀಜಿ ಬಗ್ಗೆ ಮಾತನಾಡುವುದು ಸುಲಭ. ಆದರೆ ಅವರ ಅಹಿಂಸಾ ಸಿದ್ದಾಂತ ಪಾಲನೆ ನಾವು ಎಣಿಸಿದಷ್ಟು ಸುಲಭದ ಕೆಲಸವಲ್ಲ ಎಂದ ರೈ ಈ ಬಗ್ಗೆ ನಾವು ಆತ್ಮಾವಲೋಕನ ಮಾಡಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿದ್ದೇವೆ. ಅಹಿಂಸಾ ಚಳವಳಿಯನ್ನು ದೇಶಕ್ಕೆ ಪರಿಚಯಿಸಿದ ಮಹಾತ್ಮ ಗಾಂಧೀಜಿ ವೈರಿಯನ್ನು ಪ್ರೀತಿಸು ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಯಾವ ಧರ್ಮವೂ ಹಿಂಸೆಯನ್ನು ಪೆÇ್ರೀತ್ಸಾಹಿಸುವುದಿಲ್ಲ. ಹಿಂಸೆಗೆ ಹಿಂಸೆ ಉತ್ತರವಲ್ಲ. ಹಿಂಸೆಗೆ ಅಹಿಂಸೆ ಉತ್ತರ. ಕೋಮುವಾದ-ಮತೀಯವಾದಕ್ಕೆ ಕೋಮುವಾದ-ಮತೀಯವಾದವೇ ಉತ್ತರವಲ್ಲ. ಅದಕ್ಕೆ ಜಾತ್ಯಾತೀತವಾದವೇ ಉತ್ತರ ಎಂದರು. 

ದೇಶದ ಪ್ರತೀಯೊಬ್ಬ ನಾಗರಿಕನಿಗೂ ಸಾಮಾಜಿಕ ನ್ಯಾಯ ದೊರಕಬೇಕೆಂಬ ಕನಸು ಗಾಂಧೀಜಿಯವರದ್ದಾಗಿತ್ತು. ಪ್ರಜಾಪ್ರಭುತ್ವವನ್ನು ಬಲಪಡಿಸುವ ಕೆಲಸವನ್ನು ಗಾಂಧೀಜಿ ಮಾಡಿದ್ದಾರೆ. ಆದರೆ ಇಂದು ಪ್ರಜಾಪ್ರಭುತ್ವದ ಮೌಲ್ಯ ಕುಸಿಯುತ್ತಿದೆ. ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಕೆಲಸ ನಡೆಯಬೇಕು ಎಂದು ಇದೇ ವೇಳೆ ರಮಾನಾಥ ರೈ ಕರೆ ನೀಡಿದರು. 

ಮಹಾತ್ಮ ಗಾಂಧಿಯನ್ನು ಟೀಕೆ ಮಾಡುವ ಕೆಲಸ ಇಂದು ನಡೆಯುತ್ತದೆ. ದೇಶಕ್ಕಾಗಿ ಹುತಾತ್ಮ, ಬಲಿದಾನ ಮಾಡಿದವರಿಗೆ ಅಗೌರ, ಅಪಮಾನ ಮಾಡುವ ಕೆಲಸ ಸಲ್ಲದು. ದೇಶ ಎಂದರೆ ಒಂದು ವ್ಯಕ್ತಿ, ಒಂದು ಪಕ್ಷ, ಒಂದು ಸಂಘಟನೆಯಲ್ಲ. ಭಾರತ ಸುಂದರ ಮತ್ತು ಸಾಮರಸ್ಯದ ದೇಶ ಆಗಬೇಕು ಎಂದವರು ಆಶಿಸಿದರು. 

ಬಂಟ್ವಾಳ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಫಾದರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ, ರಕ್ತನಿಧಿ ಕೇಂದ್ರದ ಚಾರು ಕೋಸ್ಲಾ, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ವಲಯ ಕಾಂಗ್ರೆಸ್ ಅಧ್ಯಕ್ಷ ಶಿವಪ್ರಸಾದ್ ಕನಪಾಡಿ, ಜಿ ಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ್ ಜೈನ್, ಎಂ ಎಸ್ ಮಹಮ್ಮದ್, ಬಂಟ್ವಾಳ ತಾ ಪಂ ಮಾಜಿ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ ಪೂಜಾರಿ, ಪ್ರಮುಖರಾದ ಸುದರ್ಶನ್ ಜೈನ್,  ಸಂಜೀವ ಪೂಜಾರಿ, ಮಲ್ಲಿಕಾ ಶೆಟ್ಟಿ, ಫೆÇ್ಲೀಸಿ ಡಿ’ಸೋಜ, ಮಲ್ಲಿಕಾ ಪಕ್ಕಳ, ರಮೇಶ್ ಪಚ್ಚಿನಡ್ಕ, ವಿಜಯ್ ಕಳ್ಳಿಗೆ, ಲೀನಾ ಮೊಂತೇರೋ, ರವಿರಾಜ್ ಜೈನ್, ರೋಷನ್ ರೈ ಮೊದಲಾದವರು ಭಾಗವಹಿಸಿದ್ದರು. 

ಚಂದ್ರಶೇಖರ ಭಂಡಾರಿ ಸ್ವಾಗತಿಸಿ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ನವಾಝ್ ಬಡಕಬೈಲು ವಂದಿಸಿದರು. ಅಬ್ದುಲ್ ಹಕೀಂ ಕಲಾಯಿ ಕಾಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ದೇಶಕ್ಕಾಗಿ ಹುತಾತ್ಮರಾದ ವ್ಯಕ್ತಿತ್ವಗಳನ್ನು ಟೀಕೆ ಮಾಡುವುದು ದೇಶಕ್ಕೆ ಅಪಾಯಕಾರಿ : ಮಾಜಿ ಸಚಿವ ರಮಾನಾಥ ರೈ ಆತಂಕ Rating: 5 Reviewed By: karavali Times
Scroll to Top