ಕೋವಿಡ್ ಕಾರಣದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ “ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್” ಯೋಜನೆ : ಅಂಚೆ ಕಚೇರಿಯಲ್ಲಿ ಡೀಸಿ ಜೊತೆ ಫಲಾನುಭವಿಗಳ ಜಂಟಿ ಖಾತೆ ತೆರೆಯಲು ಸೂಚನೆ - Karavali Times ಕೋವಿಡ್ ಕಾರಣದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ “ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್” ಯೋಜನೆ : ಅಂಚೆ ಕಚೇರಿಯಲ್ಲಿ ಡೀಸಿ ಜೊತೆ ಫಲಾನುಭವಿಗಳ ಜಂಟಿ ಖಾತೆ ತೆರೆಯಲು ಸೂಚನೆ - Karavali Times

728x90

30 October 2021

ಕೋವಿಡ್ ಕಾರಣದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ “ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್” ಯೋಜನೆ : ಅಂಚೆ ಕಚೇರಿಯಲ್ಲಿ ಡೀಸಿ ಜೊತೆ ಫಲಾನುಭವಿಗಳ ಜಂಟಿ ಖಾತೆ ತೆರೆಯಲು ಸೂಚನೆ

ಮಂಗಳೂರು, ಸೆಪ್ಟಂಬರ್ 30, 2021 (ಕರಾವಳಿ ಟೈಮ್ಸ್) : ಕೋವಿಡ್-19 ರೋಗದಿಂದ 2020 ರ ಮಾರ್ಚ್ 11ರ ನಂತರದಲ್ಲಿ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಎಲ್ಲಾ ಮಕ್ಕಳಿಗೆ ಕೇಂದ್ರ ಸರಕಾರ ಜಾರಿಗೆ ತರುತ್ತಿರುವ “ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್” ಯೋಜನೆಯ ಸೌಲಭ್ಯ ಒದಗಿಸಲು ಪೂರಕವಾಗುವಂತೆ ಯೋಜನೆಯ ಫಲಾನುಭವಿಗಳ ಮತ್ತು ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಜಂಟಿ ಖಾತೆಯನ್ನು ಅಂಚೆ ಕಛೇರಿಯಲ್ಲಿ ಕಡ್ಡಾಯವಾಗಿ ತೆರೆಯಬೇಕಾಗಿರುತ್ತದೆ.

ಕೋವಿಡ್-19 ವೈರಸ್ಸಿಂದ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಮಕ್ಕಳ ಮುಂದಿನ ಜೀವನಕ್ಕೆ ಸಹಕಾರ ನೀಡಲು ಆದ್ಯತೆಯ ಮೇರೆಗೆ ಕ್ರಮವಹಿಸಿ “ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್” ಯೋಜನೆಯ ಎಲ್ಲಾ ಫಲಾನುಭವಿಗಳ ಜಂಟಿ ಖಾತೆಯನ್ನು ಅಂಚೆ ಕಛೇರಿಯಲ್ಲಿ ತೆರೆಯಲು ನವೆಂಬರ್ 2 ರೊಳಗೆ ಕ್ರಮ ಕೈಗೊಳ್ಳತಕ್ಕದ್ದು, ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಮಕ್ಕಳಿಗೆ ನೆರವಾಗುವುದು ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಸಮಗ್ರವಾಗಿ ತೊಡಗಿಸಿಕೊಂಡು ಫಲಾನುಭವಿಗಳು ಯೋಜನೆಯ ಸೌಲಭ್ಯವನ್ನು ಪಡೆಯಲು ಸಹಕರಿಸಿ ಅವರುಗಳ ಭವಿಷ್ಯದ ಹಿತದೃಷ್ಟಿಯಿಂದ ಕ್ರಮವಹಿಸುವಂತೆ ಅಂಚೆ ಕಚೇರಿಗಳಿಗೆ ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಸೂಚಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕೋವಿಡ್ ಕಾರಣದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ “ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್” ಯೋಜನೆ : ಅಂಚೆ ಕಚೇರಿಯಲ್ಲಿ ಡೀಸಿ ಜೊತೆ ಫಲಾನುಭವಿಗಳ ಜಂಟಿ ಖಾತೆ ತೆರೆಯಲು ಸೂಚನೆ Rating: 5 Reviewed By: karavali Times
Scroll to Top