ವೀಕೆಂಡ್ ಕಫ್ರ್ಯೂ : ದ.ಕ. ಜಿಲ್ಲೆಯಲ್ಲಿ ಭಾಗಶಃ ಸಕ್ಸಸ್, 108 ಮಾಸ್ಕ್ ಕೇಸ್, 10 ವಾಹನ ಸೀಝ್ - Karavali Times ವೀಕೆಂಡ್ ಕಫ್ರ್ಯೂ : ದ.ಕ. ಜಿಲ್ಲೆಯಲ್ಲಿ ಭಾಗಶಃ ಸಕ್ಸಸ್, 108 ಮಾಸ್ಕ್ ಕೇಸ್, 10 ವಾಹನ ಸೀಝ್ - Karavali Times

728x90

8 January 2022

ವೀಕೆಂಡ್ ಕಫ್ರ್ಯೂ : ದ.ಕ. ಜಿಲ್ಲೆಯಲ್ಲಿ ಭಾಗಶಃ ಸಕ್ಸಸ್, 108 ಮಾಸ್ಕ್ ಕೇಸ್, 10 ವಾಹನ ಸೀಝ್

ಮಂಗಳೂರು, ಜನವರಿ 08, 2022 (ಕರಾವಳಿ ಟೈಮ್ಸ್) : ಕೊರೋನಾ ಹಾಗೂ ಓಮಿಕ್ರಾನ್ ನಿಯತ್ರಂಣಕ್ಕಾಗಿ ರಾಜ್ಯ ಸರಕಾರ ಘೋಷಿಸಿರುವ ವಾರಾಂತ್ಯ ನಿಷೇಧಾಜ್ಞೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾಗಶಃ ಯಶಸ್ವಿಯಾಗಿದೆ. ಜಿಲ್ಲೆಯ ಕೇರಳ ಗಡಿಗಳಲ್ಲಿ 9 ಚೆಕ್ ಪೋಸ್ಟ್ ಗಳು ಹಾಗೂ ಜಿಲ್ಲಾದ್ಯಂತ 22 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಪೊಲೀಸರು ಕಟ್ಟುನಿಟ್ಟಿನ ವಾಹನ ತಪಾಸಣೆ ನಡೆಸಿ ಅನಾವಶ್ಯಕ ಸಂಚಾರ ನಡೆಸುವವರಿಗೆ ಬ್ರೇಕ್ ಹಾಕಿದ್ದಾರೆ. 

ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ವಾರಾಂತ್ಯ ಘೋಷಿಸಿ ಸರಕಾರ ಆದೇಶ ನೀಡಿದ್ದು, ಈ ವೇಳೆ ಅಗತ್ಯ ಸೇವೆಗಳ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಅಗತ್ಯ ಸೇವೆಗೆ ಯಾವುದೇ ಸಮಯ ಮಿತಿ ಕಲ್ಪಿಸದೆ ಗೊಂದಲದ ಆದೇಶದಿಂದಾಗಿ ಅಗತ್ಯ ಸೇವೆ ಹೆಸರಲ್ಲಿ ಭಾಗಶಃ ಅಂಗಡಿಗಳು ತೆರೆದಿತ್ತು. ಆದರೆ ಜನ ಹಾಗೂ ವಾಹನ ಸಂಚಾರಕ್ಕೆ ಪೊಲೀಸರಿಂದ ತಡೆ ಇದ್ದುದರಿಂದ ಜನ ಸಂಚಾರ ಇಲ್ಲದ ಪರಿಣಾಮ ವ್ಯಾಪಾರ-ವಹಿವಾಟು ಕುಸಿದಿದ್ದರಿಂಧ ಬೆಳಿಗ್ಗೆ ಅಂಗಡಿ ತೆರೆದಿದ್ದ ವರ್ತಕರು ಮಧ್ಯಾಹ್ನದ ಬಳಿಕ ಸ್ವಯಂಪ್ರೇರಿತರಾಗಿ ಬಂದ್ ಮಾಡಿ ಮನೆಗಳತ್ತ ತೆರಳಿದ ದೃಶ್ಯ ಕಂಡು ಬಂತು. 

ಜಿಲ್ಲೆಯಲ್ಲಿ ವಾರಾಂತ್ಯ ಕಫ್ರ್ಯೂ ಹಿನ್ನಲೆಯಲ್ಲಿ 108 ಮಾಸ್ಕ್ ಪ್ರಕರಣಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ ಹಾಗೂ ಅನಗತ್ಯ ಸಂಚಾರಕ್ಕಾಗಿ 10 ವಾಹನಗಳನ್ನು ಸೀಝ್ ಮಾಡಲಾಗಿದೆ ಎಂದು ಜಿಲ್ಲಾ ಎಸ್ಪಿ ಋಷಿಕೇಶ್ ಸೊನಾವಣೆ ಭಗವಾನ್ ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ವೀಕೆಂಡ್ ಕಫ್ರ್ಯೂ : ದ.ಕ. ಜಿಲ್ಲೆಯಲ್ಲಿ ಭಾಗಶಃ ಸಕ್ಸಸ್, 108 ಮಾಸ್ಕ್ ಕೇಸ್, 10 ವಾಹನ ಸೀಝ್ Rating: 5 Reviewed By: karavali Times
Scroll to Top