ಫೆಬ್ರವರಿ 27 : ಬಂಟ್ವಾಳದಲ್ಲಿ ಪಲ್ಸ್ ಪೋಲಿಯೊ ಅಭಿಯಾನ - Karavali Times ಫೆಬ್ರವರಿ 27 : ಬಂಟ್ವಾಳದಲ್ಲಿ ಪಲ್ಸ್ ಪೋಲಿಯೊ ಅಭಿಯಾನ - Karavali Times

728x90

25 February 2022

ಫೆಬ್ರವರಿ 27 : ಬಂಟ್ವಾಳದಲ್ಲಿ ಪಲ್ಸ್ ಪೋಲಿಯೊ ಅಭಿಯಾನ

ಬಂಟ್ವಾಳ, ಫೆಬ್ರವರಿ 25, 2022 (ಕರಾವಳಿ ಟೈಮ್ಸ್) : ಪೋಲಿಯೋ ಮುಕ್ತ ಭಾರತ ನಿರ್ಮಿಸುವ ಸಲುವಾಗಿ 0-5 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನವು ಬಂಟ್ವಾಳ ತಾಲೂಕಿನ ಎಲ್ಲಾ 21 ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಫೆಬ್ರವರಿ 27 ರಂದು ನಡೆಯಲಿದೆ.

ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಶಾಸಕ ಯು ರಾಜೇಶ್ ನಾಯ್ಕ್ ಅಭಿಯಾನ ಉದ್ಗಾಟಿಸಲಿದ್ದು, 0-5 ವರ್ಷದ ಸುಮಾರು 30640 ಮಕ್ಕಳಿಗೆ ಲಸಿಕೆ ನೀಡುವ ಗುರಿಯಿರಿಸಲಾಗಿದೆ. ಇದಕ್ಕಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳು ಸೇರಿ 190 ಬೂತುಗಳ ವ್ಯವಸ್ಥೆ ಮಾಡಲಾಗಿದೆ. ಈ ಉದ್ದೇಶಕ್ಕೆ 784 ಸ್ವಯಂ ಸೇವಕರ 392 ತಂಡಗಳನ್ನು ನಿಯೋಜಿಸಲಾಗಿದೆ. 39 ಮೇಲ್ವಿಚಾರಕರನ್ನು ನೇಮಿಸಲಾಗಿದೆ.

ಫೆ 27 ರಂದು ಪೋಷಕರು ತಮ್ಮ 0-5 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ತಮ್ಮ ಹತ್ತಿರದ ಪೋಲಿಯೋ ಬೂತುಗಳಿಗೆ ಕರೆದುಕೊಂಡು ಹೋಗಿ ಲಸಿಕೆ ಹಾಕಿಸುವಂತೆ ಬಂಟ್ವಾಳ ತಾಲೂಕು ಅರೋಗ್ಯಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಫೆಬ್ರವರಿ 27 : ಬಂಟ್ವಾಳದಲ್ಲಿ ಪಲ್ಸ್ ಪೋಲಿಯೊ ಅಭಿಯಾನ Rating: 5 Reviewed By: karavali Times
Scroll to Top