ಸೋತಾಗ ಕುಗ್ಗದೆ ಪ್ರಯತ್ನದ ಮೂಲಕ ಗೆಲುವಾಗಿ ಪರಿವರ್ತಿಸುವವನೇ ನಿಜವಾದ ಕ್ರೀಡಾಪಟು : ಗೋಪಾಲ ಆಚಾರ್ಯ  - Karavali Times ಸೋತಾಗ ಕುಗ್ಗದೆ ಪ್ರಯತ್ನದ ಮೂಲಕ ಗೆಲುವಾಗಿ ಪರಿವರ್ತಿಸುವವನೇ ನಿಜವಾದ ಕ್ರೀಡಾಪಟು : ಗೋಪಾಲ ಆಚಾರ್ಯ  - Karavali Times

728x90

15 February 2022

ಸೋತಾಗ ಕುಗ್ಗದೆ ಪ್ರಯತ್ನದ ಮೂಲಕ ಗೆಲುವಾಗಿ ಪರಿವರ್ತಿಸುವವನೇ ನಿಜವಾದ ಕ್ರೀಡಾಪಟು : ಗೋಪಾಲ ಆಚಾರ್ಯ 

 ಜೆಬಿಸಿ ಪ್ರೀಮಿಯರ್ ಲೀಗ್ ಟ್ರೋಫಿ ವೈಬಿಸಿ ವಾರಿಯರ್ಸ್ ತೆಕ್ಕೆಗೆ 


ಬಂಟ್ವಾಳ, ಫೆಬ್ರವರಿ 15, 2022 (ಕರಾವಳಿ ಟೈಮ್ಸ್) : ಸೋಲಿನಿಂದ ಕುಗ್ಗದೆ ಗೆಲುವಿನಲ್ಲಿ ಹಿಗ್ಗದೆ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಸೋಲನ್ನೇ ಸತತ ಪ್ರಯತ್ನದ ಮೂಲಕ ಗೆಲುವಾಗಿ ಪರಿವರ್ತಿಸುವವನೇ ನಿಜವಾದ ಕ್ರೀಡಾಪಟು ಎಂದು ಗುರುತಿಸಬಲ್ಲ ಎಂದು ಬಜಾಜ್ ಸಮೂಹ ಸಂಸ್ಥೆಗಳ ಮಾಲಕ ಗೋಪಾಲ ಆಚಾರ್ಯ ಅಭಿಪ್ರಾಯಪಟ್ಟರು. 

 ಜೈ ಭಾರತ್ ಸ್ಪೋಟ್ಸ್ ಕ್ಲಬ್ ನಂದಾವರ ಇದರ ವತಿಯಿಂದ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ಮೈದಾನದಲ್ಲಿ ಫೆ 13 ರಂದು ನಡೆದ ಜೆಪಿಎಲ್ ಪ್ರೀಮಿಯರ್ ಲೀಗ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ಸೋಲು-ಗೆಲುವು ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸೋಲು ಯಾವತ್ತೂ ಶಾಶ್ವತವಲ್ಲ. ಪ್ರಯತ್ನಪಟ್ಟರೆ ಸೋಲು ಒಂದು ದಿನ ಖಂಡಿತ ಗೆಲುವಾಗಿ ಪರಿವರ್ತನೆಯಾಗುತ್ತದೆ. ಅದೇ ರೀತಿ ಮನುಷ್ಯ‌ ಜೀವನ ಕೂಡಾ. ಜೀವನದಲ್ಲಿ ಏಳು-ಬೀಳುಗಳು ಸಹಜ ಪ್ರಕ್ರಿಯೆ. ಜೀವನದಲ್ಲಿ ಎಲ್ಲವನ್ನು ಎದುರಿಸಿ ಮುನ್ನಡೆಯುವುದೇ ಸಾಧನೆ ಎಂದರು. 

 ಸಮಾರಂಭದಲ್ಲಿ ಬಂಟ್ವಾಳ ಪುರಸಭಾ ಸ್ಥಳೀಯ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ, ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಪ್ರಮುಖರಾದ ಇಸ್ಮಾಯಿಲ್ ನಂದಾವರ,‌‌‌ ಇದ್ದಿನಬ್ಬ ನಂದಾವರ, ಮುಹಮ್ಮದ್ ನಂದಾವರ, ರಶೀದ್ ನಂದಾವರ, ಮುಸ್ತಫಾ ಮುಖ್ತಾರ್, ಅಬ್ದುಲ್ ಹಮೀದ್, ಅಬ್ದುಲ್ ರಹಿಮಾನ್ ಮೋನು ಮೆಲ್ಕಾರ್, ನಾಸಿರ್ ಗೂಡಿನಬಳಿ, ಪುತ್ತೋನು, ಇಕ್ಬಾಲ್ ಪವರ್, ಲತೀಫ್ ನಂದಾವರ ನಂದಾವರ ಮೊದಲಾದವರು ಭಾಗವಹಿಸಿದ್ದರು. 

ಇದೇ ವೇಳೆ ಜೀವರಕ್ಷಕ ಈಜುಪಟು ಮುಹಮ್ಮದ್ ಮಮ್ಮು ಗೂಡಿನಬಳಿ ಹಾಗೂ ಟ್ವೆಕಾಂಡೋ ಎಳೆ ಪ್ರತಿಭೆ ಶಯಾನ್ ನಂದಾವರ ಅವರನ್ನು ಸನ್ಮಾನಿಸಲಾಯಿತು. 

 ವೈಬಿಸಿ ವಾರಿಯರ್ಸ್ ತಂಡಕ್ಕೆ ಪ್ರಶಸ್ತಿ 

 ಸ್ಥಳೀಯ 8 ತಂಡಗಳ ಮಧ್ಯೆ ಸಾಗಿ ಬಂದಿದ್ದ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ವೈಬಿಸಿ ವಾರಿಯರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಅಟ್ಯಾಕರ್ಸ್ ನಂದಾವರ ತಂಡ‌ ರನ್ನರ್ಸ್ ಆಗಿ ಮೂಡಿಬಂತು. 

ವೈಬಿಸಿ ತಂಡದ ಝಮೀರ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಮಿರ್ಶಾದ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಪವರ್ ಫ್ರೆಂಡ್ಸ್ ತಂಡದ ಎಸೆತಗಾರ ಅಯಾನ್ ಉತ್ತಮ ದಾಳಿಗಾರ, ಅಟ್ಯಾಕರ್ಸ್ ನಂದಾವರ ತಂಡದ ಖಾಲಿದ್ ಉತ್ತಮ ದಾಂಡುಗಾರ ಹಾಗೂ ಎಂ ಎಂ ಕಿಂಗ್ಸ್ ತಂಡದ ಝೈದ್ ಉತ್ತಮ ಕ್ಯಾಚ್ ಪ್ರಶಸ್ತಿ ಪಡೆದುಕೊಂಡರು. ಸ

ಸಲೀಂ ನಂದಾವರ ಸ್ವಾಗತಿಸಿ, ಶಮೀರ್ ನಂದಾವರ ವಂದಿಸಿದರು. ಶಹೀದ್ ಗುಡ್ಡೆಅಂಗಡಿ ವೀಕ್ಷಕ ವಿವರಣೆ ನೀಡಿದರು. ಸಲ್ಮಾನ್ ಫಾರಿಶ್ ನಂದಾವರ ಹಾಗೂ ಸಯೀದ್ ನಂದಾವರ ಸ್ಕೋರರ್ ಗಳಾಗಿ ಸಹಕರಿಸಿದರು. ಇಕ್ಬಾಲ್ ಮಂಗಳೂರು, ಆರಿಫ್ ಜೋಕಟ್ಟೆ, ಅಝ್ಮಲ್ ಪಾಣೆಮಂಗಳೂರು ಹಾಗೂ ಇಮ್ರಾನ್ ಅಮೆಮಾರ್ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಅಕ್ಬರ್ ಅಲಿ ನಂದಾವರ ಕಾರ್ಯಕ್ರಮ‌ ನಿರೂಪಿಸಿದರು. 

 ಇಂಡಿಯನ್ ವಾರಿಯರ್ಸ್, ಅಕ್ಕ ಫ್ರೆಂಡ್ಸ್, ಎಂಎಂ ಕಿಂಗ್ಸ್, ಪವರ್ ಫ್ರೆಂಡ್ಸ್, ಅಮಾನ್ ವಾರಿಯರ್ಸ್ ಹಾಗೂ ಸೂಪರ್ ಚೋಯಿಸ್ ನಂದಾವರ ಕೂಟದಲ್ಲಿ ಭಾಗವಹಿಸಿದ್ದ ಇತರ ತಂಡಗಳು.

  • Blogger Comments
  • Facebook Comments

0 comments:

Post a Comment

Item Reviewed: ಸೋತಾಗ ಕುಗ್ಗದೆ ಪ್ರಯತ್ನದ ಮೂಲಕ ಗೆಲುವಾಗಿ ಪರಿವರ್ತಿಸುವವನೇ ನಿಜವಾದ ಕ್ರೀಡಾಪಟು : ಗೋಪಾಲ ಆಚಾರ್ಯ  Rating: 5 Reviewed By: karavali Times
Scroll to Top